ದಂಪತಿಯಿಂದ 45 ಬಂದೂಕುಗಳು ವಶ
ಕಸ್ಟಮ್ಸ್ ಅಧಿಕಾರಿಗಳು ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಭಾರತೀಯ ದಂಪತಿಯಿಂದ 45 ಬಂದೂಕುಗಳನ್ನು ವಶಪಡಿಸಿಕೊಂಡಿದ್ದಾರೆ.
ನವದೆಹಲಿ: ಕಸ್ಟಮ್ಸ್ ಅಧಿಕಾರಿಗಳು ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಭಾರತೀಯ ದಂಪತಿಯಿಂದ 45 ಬಂದೂಕುಗಳನ್ನು ವಶಪಡಿಸಿಕೊಂಡಿದ್ದಾರೆ. ನಂತರ ದಂಪತಿ ಜಜಿತ್ ಸಿಂಗ್ ಮತ್ತು ಜಸ್ವಿಂದರ್ ಕೌರ್ ಅವರನ್ನು ಬಂಧಿಸಲಾಯಿತು.
ಈ ಬಂದೂಕುಗಳ ಮೌಲ್ಯ ರೂ. 22.5 ಲಕ್ಷದವರೆಗೆ ಇರಲಿದೆ ಎನ್ನಲಾಗಿದೆ. ದಂಪತಿಗಳಿಬ್ಬರೂ ಇದೇ ತಿಂಗಳ 10ರಂದು ವಿಯೆಟ್ನಾಂನಿಂದ ಭಾರತಕ್ಕೆ ಬಂದಾಗ ಅವರ ಬ್ಯಾಗ್‌ನಲ್ಲಿ 45 ಗನ್‌ಗಳು ಪತ್ತೆಯಾಗಿದ್ದವು. ಈ ಬಂದೂಕುಗಳ ಬ್ಯಾಗ್ ಗಳನ್ನು ತನ್ನ ಸಹೋದರ ನೀಡಿದ್ದ ಎಂದು ಜಜಿತ್ ಸಿಂಗ್ ಹೇಳಿದ್ದಾರೆ. ಈ ಹಿಂದೆ ಟರ್ಕಿಯಿಂದ 25 ಬಂದೂಕುಗಳನ್ನು ನಮ್ಮ ದೇಶಕ್ಕೆ ತಂದಿರುವುದಾಗಿ ಆರೋಪಿ ದಂಪತಿ ಒಪ್ಪಿಕೊಂಡಿದ್ದಾರೆ.
couple held for smuggling 45 hand guns at delhi airport
Follow us On
Google News |