ಭಿಕ್ಷೆ ಬೇಡಲು ಬಂದ ಸಾಧು ಕೂದಲು ಕತ್ತರಿಸಿ ಕಿರುಕುಳ !
ಮಧ್ಯಪ್ರದೇಶದ ಪಾಟ್ನಾ ಜೈನ್ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಭಿಕ್ಷುಕ ಸಂತನನ್ನು ತೀವ್ರವಾಗಿ ಥಳಿಸಿ ಆತನ ಕೂದಲನ್ನು ಕತ್ತರಿಸಿದ ಘಟನೆ ನಡೆದಿದೆ.
ಭೋಪಾಲ್: ಮಧ್ಯಪ್ರದೇಶದ ಪಾಟ್ನಾ ಜೈನ್ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಭಿಕ್ಷುಕ ಸಂತನನ್ನು ತೀವ್ರವಾಗಿ ಥಳಿಸಿ ಆತನ ಕೂದಲನ್ನು ಕತ್ತರಿಸಿದ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಸಂತನಿಗೆ ಕಿರುಕುಳ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವೀಡಿಯೊದಲ್ಲಿ, ಒಬ್ಬ ವ್ಯಕ್ತಿ ಕೂದಲನ್ನು ಕತ್ತರಿಸುವುದನ್ನು ನೋಡಬಹುದು. ಪ್ರವೀಣ್ ಗೌರ್ ಸಾಧುವಿನ ಕೂದಲು ಕತ್ತರಿಸಿ ಕಿರುಕುಳ ನೀಡಿದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಭಾನುವಾರ ಸಂಜೆ ಸಾಧು ಭಿಕ್ಷೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಆರೋಪಿಗಳು ಸಾಧುವಿನ ಮೇಲೆ ಏಕೆ ಡಾಲೊಯ್ದ್ದಾ ಮಾಡಿದ್ದಾರೆ ಎಂಬ ವಿವರ ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
Sadhu Asking For Alms Beaten Up Hair Chopped Off
Follow Us on : Google News | Facebook | Twitter | YouTube