Crime News: ಯೂಟ್ಯೂಬ್ ನೋಡಿ ನಕಲಿ ಕರೆನ್ಸಿ ನೋಟು ಮುದ್ರಿಸುತ್ತಿದ್ದ ವ್ಯಕ್ತಿ ಬಂಧನ
ಯೂಟ್ಯೂಬ್ ನೋಡಿ ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದ ಮಹಾರಾಷ್ಟ್ರ ಜಲಗಾಂವ್ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಯೂಟ್ಯೂಬ್ ನೋಡಿ ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದ ಮಹಾರಾಷ್ಟ್ರ ಜಲಗಾಂವ್ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಜಲಗಾಂವ್‌ನಲ್ಲಿ ನಕಲಿ ಕರೆನ್ಸಿ ಚಲಾವಣೆಯಲ್ಲಿದೆ ಎಂದು ಸ್ಥಳೀಯ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ. ಈ ನಿಟ್ಟಿನಲ್ಲಿ ಪೊಲೀಸರು ಕೂಲಂಕುಷವಾಗಿ ತನಿಖೆ ನಡೆಸಿದ್ದಾರೆ. ಇದರಲ್ಲಿ ರಾಜೇಂದ್ರ ಆಧವ್ ಎಂಬ ವ್ಯಕ್ತಿ ನಕಲಿ ನೋಟು ಚಲಾವಣೆ ಮಾಡುತ್ತಿದ್ದ ಎಂಬ ಮಾಹಿತಿ ಸಿಕ್ಕಿದೆ.
ಪೊಲೀಸರು ಆತನ ಮನೆ ಮೇಲೆ ದಾಳಿ ನಡೆಸಿದ್ದಾರೆ. ಆಗ ಅಲ್ಲಿ ನಕಲಿ ನೋಟುಗಳು ಮುದ್ರಣವಾಗುತ್ತಿರುವುದು ಬೆಳಕಿಗೆ ಬಂದಿದೆ. ಇದಕ್ಕಾಗಿ ಅಲ್ಲಿ ಯಂತ್ರಗಳನ್ನು ಸಹ ಇಡಲಾಗಿತ್ತು.
YouTube ನೋಡಿ ನಕಲಿ ನೋಟು ಮುದ್ರಣ
ಅಲ್ಲದೆ ಸ್ಥಳದಲ್ಲಿ 100, 200, 500 ರೂಪಾಯಿ ನಕಲಿ ನೋಟುಗಳನ್ನು ಜಪ್ತಿ ಮಾಡಿದ್ದಾರೆ. ಪೊಲೀಸರು ರಾಜೇಂದ್ರ ಆಧವ್ ಅವರನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿದ್ದಾರೆ.
ಇದರಲ್ಲಿ ಯೂಟ್ಯೂಬ್ ನೋಡಿ ನಕಲಿ ನೋಟುಗಳನ್ನು ಮುದ್ರಿಸಿ ಒಂದೂವರೆ ಲಕ್ಷ ರೂಪಾಯಿ ನಕಲಿ ನೋಟುಗಳನ್ನು 50 ಸಾವಿರ ರೂ.ಗೆ ಖರೀದಿಸಿ ಕೆಲವರು ಚಲಾವಣೆ ಮಾಡಿರುವುದು ಬಯಲಾಗಿದೆ.
ಬಂಧಿತ ರಾಜೇಂದ್ರ ಅಧವ್ ನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದರು. 9ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ನ್ಯಾಯಾಲಯ ಆದೇಶಿಸಿದೆ. ಈ ಪ್ರಕರಣದ ಇತರ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
Man arrested for printing Fake currency Notes after watching YouTube
Follow us On
Google News |