Viral Video, ತಂದೆಯನ್ನು ಹೊಡೆದವನ ಮೇಲೆ ಸೇಡು ತೀರಿಸಿಕೊಂಡ ಹುಡುಗ
ತಂದೆಯನ್ನು ಥಳಿಸಿದ ವ್ಯಕ್ತಿಯ ಮೇಲೆ ಬಾಲಕನೊಬ್ಬ ಸೇಡು ತೀರಿಸಿಕೊಂಡಿದ್ದಾನೆ. ಆತನ ಮುಖಕ್ಕೆ ಬಂದೂಕಿನಿಂದ ಗುಂಡು ಹಾರಿಸಿದ್ದಾನೆ.
ನವದೆಹಲಿ: ತಂದೆಯನ್ನು ಥಳಿಸಿದ ವ್ಯಕ್ತಿಯ ಮೇಲೆ ಬಾಲಕನೊಬ್ಬ ಸೇಡು ತೀರಿಸಿಕೊಂಡಿದ್ದಾನೆ. ಆತನ ಮುಖಕ್ಕೆ ಬಂದೂಕಿನಿಂದ ಗುಂಡು ಹಾರಿಸಿದ್ದಾನೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಘಟನೆ ನಡೆದಿದೆ. ಜಹಾಂಗೀರ್ಪುರಿ ಪ್ರದೇಶದ ಜಾವೇದ್ (36) ಶುಕ್ರವಾರ ಸಂಜೆ ಸ್ಥಳೀಯ ಉದ್ಯಾನವನದ ಬಳಿ ಕುಳಿತಿದ್ದರು. ಅವನಿಗೆ ಗೊತ್ತಿದ್ದ ಮೂವರು ಹುಡುಗರು ಅಲ್ಲಿಗೆ ಬಂದರು. ಒಬ್ಬ ಹುಡುಗ ತನ್ನ ಪ್ಯಾಂಟಿನ ಜೇಬಿನಿಂದ ಗನ್ ತೆಗೆದ. ಅವನು ಜಾವೇದ್‌ನ ಹತ್ತಿರ ಹೋಗಿ ಅವನ ಮುಖಕ್ಕೆ ಗುಂಡು ಹಾರಿಸಿದನು. ಬಳಿಕ ಮೂವರು ಬಾಲಕರು ಅಲ್ಲಿಂದ ಓಡಿ ಹೋಗಿದ್ದಾರೆ.
ಇದೇ ವೇಳೆ ಬಾಲಕನ ಗುಂಡಿನ ದಾಳಿಗೆ ಜಾವೇದ್ ನ ಬಲಗಣ್ಣಿಗೆ ಗಂಭೀರ ಗಾಯವಾಗಿದೆ. ಅವರನ್ನು ಮೊದಲು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಉತ್ತಮ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ರವಾನಿಸಲಾಗಿತ್ತು. ಈ ಮಾಹಿತಿ ಪಡೆದ ಪೊಲೀಸರು ಜಾವೇದ್ ಮೇಲೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಅಪ್ರಾಪ್ತ ಬಾಲಕರನ್ನು ಬಂಧಿಸಿದ್ದಾರೆ.
ಏಳು ತಿಂಗಳ ಹಿಂದೆ ಬಾಲಕನೊಬ್ಬನ ತಂದೆಗೆ ಜಾವೇದ್ ಥಳಿಸಿದ್ದು, ಆತನ ಮೇಲೆ ಸೇಡು ತೀರಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬಾಲಕರಿಂದ ಒಂದು ಗನ್ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಕಣ್ಣಿಗೆ ಗುಂಡು ತಗುಲಿ ಗಾಯಗೊಂಡಿರುವ ಜಾವೇದ್ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿಸಿದರು. ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಅಲ್ಲಿನ ಸಿಸಿಟಿವಿಯಲ್ಲಿ ದಾಖಲಾಗಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
#WATCH | Delhi: 4 minor boys apprehended for firing at a man in Jahangirpuri on 15th July. The man has been hospitalised. Case u/s 307 IPC registered. Accused say that the man had beaten up father of one of the minors 7 months back & they had come to take revenge.
(Source: CCTV) pic.twitter.com/Icl2i4x3LN
— ANI (@ANI) July 16, 2022
Follow us On
Google News |
Advertisement