ನಾಸಿಕ್‌ನಲ್ಲಿ ಸೂಫಿ ಬಾಬಾನ ಹತ್ಯೆ
ಮಹಾರಾಷ್ಟ್ರದ ನಾಸಿಕ್‌ನಲ್ಲಿ ಅಫಘಾನಿಸ್ತಾನದ 35 ವರ್ಷದ ಮುಸ್ಲಿಂ ಧರ್ಮಗುರು ಖ್ವಾಜಾ ಸೈಯದ್ ಚಿಸ್ತಿ ಅವರನ್ನು ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ
ಮುಂಬೈ: ಮಹಾರಾಷ್ಟ್ರದ ನಾಸಿಕ್‌ನಲ್ಲಿ ಅಫಘಾನಿಸ್ತಾನದ 35 ವರ್ಷದ ಮುಸ್ಲಿಂ ಧರ್ಮಗುರು ಖ್ವಾಜಾ ಸೈಯದ್ ಚಿಸ್ತಿ ಅವರನ್ನು ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ. ಯೆಲೋ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಕೊಲೆಯ ಹಿಂದಿನ ಕಾರಣಗಳು ಇನ್ನೂ ತಿಳಿದುಬಂದಿಲ್ಲ.
ಯೆಲಾ ಪಟ್ಟಣದ ಎಂಐಡಿಸಿ ಓಪನ್ ಪ್ಲಾಟ್ ನಲ್ಲಿ ಮಂಗಳವಾರ ಸಂಜೆ ಈ ಕೊಲೆ ನಡೆದಿದೆ. ಈ ಪ್ರದೇಶವು ಮುಂಬೈನಿಂದ 200 ಕಿ.ಮೀ. ದೂರದಲ್ಲಿದೆ. ಖ್ವಾಜಾ ಸೈಯದ್ ಚಿಸ್ತಿ ಅವರು ಸೂಫಿ ಬಾಬಾ ಎಂದು ಜನಪ್ರಿಯರಾಗಿದ್ದಾರೆ. ದಾಳಿಕೋರರು ಅವರ ಹಣೆಯ ಮೇಲೆ ಪಿಸ್ತೂಲ್ ಇಟ್ಟು ಗುಂಡು ಹಾರಿಸಿದ್ದಾರೆ. ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿಕೋರರು ಸೂಫಿ ಬಾಬಾನನ್ನು ಕೊಂದು ಅವರ ಎಸ್‌ಯುವಿಯನ್ನು ತೆಗೆದುಕೊಂಡು ಹೋಗಿದ್ದಾರೆ. ಯೆಲಾ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಹಂತಕರ ಬೇಟೆ ಮುಂದುವರಿದಿದೆ.
muslim-community-religious-leader-khwaja-sayyad-chishti-killed-in-nashik