ಪ್ರಯಾಣಿಕರಿಂದ ಹಣ ವಸೂಲಿ ಮಾಡ್ತಿದ್ದ ನಕಲಿ ಟಿಟಿ ಅರೆಸ್ಟ್

ಮೈಸೂರಿನಲ್ಲಿ ನಕಲಿ ಟಿಟಿ ಮಲ್ಲೇಶ್ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ

Online News Today Team

ಮೈಸೂರು: ಮೈಸೂರಿನಲ್ಲಿ ನಕಲಿ ಟಿಟಿ ಮಲ್ಲೇಶ್ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ದೂರದ ಊರುಗಳ ರೈಲುಗಳನ್ನೇ ಟಾರ್ಗೆಟ್ ಮಾಡಿ ಅಸಲಿ ಟಿಟಿ ರೀತಿ ಐಡಿ ಕಾರ್ಡ್ ಕೈಯಲ್ಲಿ ವಾಕಿ ಟಾಕಿ ಹಿಡಿದು ರೈಲಿನಲ್ಲಿ ಸಂಚಾರ ಮಾಡುತ್ತ ಪ್ರಯಾಣಿಕರಿಂದ ಹಣ ವಸೂಲಿ ಮಾಡುತ್ತಿದ್ದ ನಕಲಿ ಟಿಟಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಆರೋಪಿ ಮಲ್ಲೇಶ್ ವಾರಕ್ಕೆ ಒಮ್ಮೆ ಟಿಟಿಯಾಗುತ್ತಿದ್ದ. ಮೂಲತಃ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಮಲ್ಲೇಶ್, ಇಂದು ಅಜ್ಮೀರ್ ರೈಲಿನಲ್ಲಿ ನಕಲಿ ಟಿಟಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಸತತ ಆರು ತಿಂಗಳಿನಿಂದ ಪ್ರಯಾಣಿಕರಿಂದ ಹಣ ವಸೂಲಿ ಮಾಡುತ್ತಿದ್ದಾನೆ ಎಂದು ತಿಳಿದು ಬಂದಿದೆ. ಮಲ್ಲೇಶ್ ಸೀಟ್ ಇಲ್ಲದವರಿಗೆ ದುಡ್ಡು ಪಡೆದು ಸೀಟ್ ನೀಡುತ್ತಿದ್ದನಂತೆ. ಹಾಗೂ ಕಳೆದ ಆರು ತಿಂಗಳಿನಿಂದ 60 ರಿಂದ 70 ಸಾವಿರ ಹಣ ಸಂಪಾದನೆ ಮಾಡಿದ್ದಾನಂತೆ. ಬಂದ ಹಣದಿಂದ ಕುಡಿದು ಮಜಾ ಮಾಡುತ್ತಿದ್ದ ಎನ್ನಲಾಗಿದೆ.

Follow Us on : Google News | Facebook | Twitter | YouTube