ಕ್ಷುಲ್ಲಕ ಕಾರಣಕ್ಕೆ ತನ್ನ ತಂಗಿಯ ಕತ್ತು ಸೀಳಿ ಕೊಂದ ಅಣ್ಣ
ಅಣ್ಣನೊಬ್ಬ ತನ್ನ ತಂಗಿಯ ಕತ್ತು ಸೀಳಿ ಕೊಂದಿದ್ದಾನೆ. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುಷ್ಕೃತ್ಯ ನಡೆದಿದೆ.
ಕ್ಷುಲ್ಲಕ ಕಾರಣಕ್ಕೆ ಅಣ್ಣನೊಬ್ಬ ತನ್ನ ತಂಗಿಯ ಕತ್ತು ಸೀಳಿ ಕೊಂದಿದ್ದಾನೆ. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುಷ್ಕೃತ್ಯ ನಡೆದಿದೆ. ಈದ್ಗಾ ಮೊಹಲ್ಲಾದ ಐಮಾನ್ ಬಾನು (26) ಎಂಬಾಕೆ ಮೃತಪಟ್ಟವರು.
ಆಕೆಯ ಅಣ್ಣ ಫರ್ಮಾನ್ ಬಾಷಾ ಅವರ ಮಗನಿಗೆ ಆಕೆ ಸೌತೆಕಾಯಿ ತಿನ್ನಿಸಿದ್ದಕ್ಕೆ ಜ್ವರ ಬಂದಿತ್ತು. ಈ ವೇಳೆ ಸೌತೆಕಾಯಿಯನ್ನು ಏಕೆ ತಿನ್ನಿಸಿದೆ ಎಂದು ಇಬ್ಬರ ನಡುವೆ ಜಗಳವಾಗಿತ್ತು. ಕೋಪ ತಾಳಲಾರದೆ ಫರ್ಮಾನ್ ಬಾಷಾ ಅಡುಗೆ ಮನೆಯಲ್ಲಿದ್ದ ಚಾಕು ತೆಗೆದುಕೊಂಡು ಬಂದು ಆಕೆಯ ಕತ್ತು ಸೀಳಿದ್ದಾನೆ.
ತಡೆಯಲು ಹೋದ ಪತ್ನಿ ತಸ್ಲೀಮಾಗೂ ಗಂಭೀರವಾಗಿ ಹಲ್ಲೆ ಮಾಡಿದ್ದಾನೆ. ಐಮಾನ್ ಬಾನು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೊಳ್ಳೇಗಾಲ ನಗರ ಠಾಣೆ ಪೊಲೀಸರು ಹಲ್ಲೆಕೋರನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಸ್ಲಿಮಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
Shocking Crime in Kollegala, Brother Slits Sister’s Throat Over Minor Dispute