ದಿನ ಭವಿಷ್ಯ 10 ಅಕ್ಟೋಬರ್ 2026, ಶನಿವಾರ
ಇಂದಿನ ದ್ವಾದಶ ರಾಶಿಗಳ ಭವಿಷ್ಯದಲ್ಲಿ ಹಣಕಾಸಿನ ಲಾಭ, ಉದ್ಯೋಗದ ಪ್ರಗತಿ, ಕುಟುಂಬದ ಸಂತೋಷ ಹಾಗೂ ಆರೋಗ್ಯದ ಏರಿಳಿತಗಳ ಸೂಚನೆಗಳಿದ್ದು, ಪ್ರತಿ ರಾಶಿಯವರು ದಿನದ ಕೆಲಸಗಳಲ್ಲಿ ಎಚ್ಚರಿಕೆಯಿಂದ ಮುಂದುವರಿಯುವುದು ಉತ್ತಮ.

ಇಂದಿನ ರಾಶಿ ಭವಿಷ್ಯ ನಿಮ್ಮ ಫಾಲಿಗೆ ಹೇಗಿದೆ? ಇಲ್ಲಿದೆ ನೋಡಿ ಸಂಪೂರ್ಣ ಭವಿಷ್ಯ: ದಿನ ಭವಿಷ್ಯ 10-10-2026: ಈ 5 ರಾಶಿಗಳ ಪಾಲಿಗೆ ಶುಭದಿನ, ಕೆಲವರಿಗೆ ಕಾದಿದೆ ಸವಾಲು! ನಿಮ್ಮ ದಿನ ಹೇಗಿರಲಿದೆ
ಮೇಷ ರಾಶಿ: ಸಹೋದ್ಯೋಗಿಗಳು ಮತ್ತು ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯ ತಪ್ಪಿಸಿ, ಖರ್ಚಿನ ಮೇಲೆ ನಿಯಂತ್ರಣ ಇರಲಿ. ಅನಗತ್ಯ ಪ್ರಯಾಣ ಬೇಡ, ಕುಟುಂಬಕ್ಕೆ ಸಮಯ ನೀಡಿ ಮತ್ತು ವಿಶ್ರಾಂತಿ ಪಡೆಯಿರಿ.
ವೃಷಭ ರಾಶಿ: ಇಂದು ಪ್ರಮುಖ ಮಾಹಿತಿ ಹಾಗೂ ಅನಿರೀಕ್ಷಿತ ಹಣದ ಲಾಭ ದೊರೆಯುವ ಸಾಧ್ಯತೆ ಇದೆ. ಕೈಗೊಂಡ ಕೆಲಸಗಳಲ್ಲಿ ಯಶಸ್ಸು ಸಿಗಲಿದ್ದು, ಬಂಧುಮಿತ್ರರ ಭೇಟಿಯಿಂದ ಸಂತೋಷ ಹೆಚ್ಚಾಗಬಹುದು.
ಮಿಥುನ ರಾಶಿ: ಕುಟುಂಬದಲ್ಲಿ ನೆಮ್ಮದಿ ಇದ್ದರೂ ಹಣಕಾಸಿನ ನಷ್ಟವಾಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ತಾಳ್ಮೆಯಿಂದ ವರ್ತಿಸಿ, ಅನಗತ್ಯ ಪ್ರಯಾಣ ಮತ್ತು ಆತುರದ ನಿರ್ಧಾರಗಳನ್ನು ತಪ್ಪಿಸಿ.
ಕರ್ಕಾಟಕ ರಾಶಿ: ಅಂದುಕೊಂಡ ಕೆಲಸಗಳಲ್ಲಿ ವಿಳಂಬವಾಗಬಹುದು ಮತ್ತು ಕುಟುಂಬದ ವಿಚಾರಗಳಲ್ಲಿ ಬದಲಾವಣೆಗಳು ಸಂಭವಿಸಬಹುದು. ಆತಂಕಪಡದೆ ತಾಳ್ಮೆಯಿಂದಿರಿ, ಮಹಿಳೆಯರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆ ವಹಿಸಿ.
ಸಿಂಹ ರಾಶಿ: ಹೊಸ ಕೆಲಸಗಳನ್ನು ಆರಂಭಿಸಲು ಅವಕಾಶ ಸಿಗಬಹುದು, ಆದರೆ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದಿರಿ ಮತ್ತು ಬಂಧುಮಿತ್ರರೊಂದಿಗೆ ಕಲಹ ತಪ್ಪಿಸಿ.
ಕನ್ಯಾ ರಾಶಿ: ಮಾನಸಿಕ ಚಿಂತೆಗಳು ಕಡಿಮೆಯಾಗಿ ನೆಮ್ಮದಿ ದೊರೆಯಬಹುದು, ಆದರೆ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಕೆಲಸಗಳಲ್ಲಿ ಅಡೆತಡೆಗಳು ಎದುರಾಗಬಹುದು ಮತ್ತು ವಿದೇಶ ಪ್ರಯಾಣದ ಪ್ರಯತ್ನ ವಿಳಂಬವಾಗಬಹುದು.
ತುಲಾ ರಾಶಿ: ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಬಹುದು ಹಾಗೂ ಕೆಲವು ಸುದ್ದಿಗಳು ಬೇಸರ ತರಬಹುದು. ಖರ್ಚು ನಿಯಂತ್ರಿಸಿ, ಪ್ರಯಾಣದಲ್ಲಿ ಎಚ್ಚರಿಕೆ ವಹಿಸಿ ಮತ್ತು ಮನಸ್ಸಿನ ಶಾಂತಿಗೆ ಆದ್ಯತೆ ನೀಡಿ.
ವೃಶ್ಚಿಕ ರಾಶಿ: ಕುಟುಂಬದಲ್ಲಿ ಸಂತೋಷ ನೆಲೆಸಲಿದ್ದು, ಬಾಕಿ ಉಳಿದ ಕೆಲಸಗಳನ್ನು ಪೂರ್ಣಗೊಳಿಸುವ ಅವಕಾಶ ಸಿಗಲಿದೆ. ಆರೋಗ್ಯ ಸುಧಾರಿಸಬಹುದು ಮತ್ತು ಕೃಷಿ ಚಟುವಟಿಕೆಗಳಿಂದ ಲಾಭ ದೊರೆಯುವ ಸಾಧ್ಯತೆ ಇದೆ.
ಧನು ರಾಶಿ: ಅನಿರೀಕ್ಷಿತ ಹಣದ ಲಾಭದಿಂದ ಸಂತೋಷ ಹೆಚ್ಚಾಗಲಿದ್ದು, ಗೌರವ ಮತ್ತು ಹೆಸರು ವೃದ್ಧಿಸಬಹುದು. ಸಾಲದ ಸಮಸ್ಯೆಗಳು ಕಡಿಮೆಯಾಗುವ ಸಾಧ್ಯತೆಯಿದ್ದು, ಆರೋಗ್ಯದಲ್ಲೂ ಸುಧಾರಣೆ ಕಂಡುಬರಬಹುದು.
ಮಕರ ರಾಶಿ: ಕುಟುಂಬದಲ್ಲಿ ನೆಮ್ಮದಿ ಇದ್ದರೂ ಬಂಧುಮಿತ್ರರೊಂದಿಗೆ ಭಿನ್ನಾಭಿಪ್ರಾಯವಾಗದಂತೆ ಎಚ್ಚರಿಕೆ ವಹಿಸಿ. ಅನಗತ್ಯ ಖರ್ಚು ತಪ್ಪಿಸಿ, ಆರೋಗ್ಯ ಸಮಸ್ಯೆಗಳಿದ್ದರೆ ಸೂಕ್ತ ಚಿಕಿತ್ಸೆ ಪಡೆಯಿರಿ.
ಕುಂಭ ರಾಶಿ: ಅನಿರೀಕ್ಷಿತ ಹಣದ ಲಾಭ ಹಾಗೂ ಹೊಸ ವಸ್ತುಗಳ ಖರೀದಿಗೆ ಅವಕಾಶ ದೊರೆಯಬಹುದು. ಹೊಸ ಕೆಲಸಗಳಲ್ಲಿ ಯಶಸ್ಸು ಸಿಗುವ ಸಾಧ್ಯತೆಯಿದ್ದು, ಸಾಲದ ಹೊರೆ ಕಡಿಮೆಯಾಗಿ ನೆಮ್ಮದಿ ಸಿಗಬಹುದು.
ಮೀನ ರಾಶಿ: ಉದ್ಯೋಗದಲ್ಲಿ ಪ್ರಗತಿ ನಿಧಾನವಾಗಬಹುದು ಮತ್ತು ಹಣಕಾಸಿನ ನಷ್ಟದ ಸಾಧ್ಯತೆ ಇದೆ. ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ, ಅನಗತ್ಯ ಸಮಸ್ಯೆಗಳಿಂದ ದೂರವಿದ್ದು ಗೌರವ ಕಾಪಾಡಿಕೊಳ್ಳಿ.
ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.



