ದಿನ ಭವಿಷ್ಯ 13-09-2026: ಈ 5 ರಾಶಿಗಳಿಗೆ ಇಂದು ಶುಭದಿನ.. ಮುಟ್ಟಿದ್ದೆಲ್ಲಾ ಯಶಸ್ಸು! ಕೈ ಹಿಡಿಯಲಿದೆ ಅದೃಷ್ಟ

ದಿನ ಭವಿಷ್ಯ 13 ಸೆಪ್ಟೆಂಬರ್ 2026, ಇಂದು ಅನಿರೀಕ್ಷಿತ ಧನಲಾಭ! ಇಂದು ಈ ರಾಶಿಗಳಿಗೆ ಹಣದ ಮಳೆ - Daily Horoscope, Naleya Dina Bhavishya 13 September 2026

ದಿನ ಭವಿಷ್ಯ 13 ಸೆಪ್ಟೆಂಬರ್ 2026

ಮೇಷ ರಾಶಿ

ಮೇಷ ರಾಶಿಯವರಿಗೆ ಇಂದು ಮನಸ್ಸಿಗೆ ನೆಮ್ಮದಿ ಹಾಗೂ ಸಂತೋಷ ಸಿಗಲಿದೆ. ಈ ಹಿಂದೆ ಮುಂದೂಡಲಾಗಿದ್ದ ಕೆಲವು ಕೆಲಸಗಳು ಪೂರ್ಣಗೊಳ್ಳಲಿವೆ. ವೃತ್ತಿ ಕ್ಷೇತ್ರದಲ್ಲಿ ಪ್ರಗತಿ ಕಾಣಲಿದ್ದು, ಕುಟುಂಬದಲ್ಲೂ ಸಂತಸದ ವಾತಾವರಣ ಇರಲಿದೆ. ವಿನೋದಗಳಲ್ಲಿ ಪಾಲ್ಗೊಳ್ಳುವ ಅವಕಾಶ ಸಿಗಬಹುದು. ಜಟಿಲವಾಗಿದ್ದ ಕೆಲವು ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ.

ವೃಷಭ ರಾಶಿ

ವೃಷಭ ರಾಶಿಯವರಿಗೆ ಶುಭಕಾರ್ಯಗಳ ಪ್ರಯತ್ನಗಳು ಸುಗಮವಾಗಿ ನೆರವೇರಲಿವೆ. ದೂರದಲ್ಲಿರುವ ಬಂಧುಗಳನ್ನು ಭೇಟಿಯಾಗುವ ಅವಕಾಶ ಸಿಗಲಿದ್ದು, ಇದರಿಂದ ಲಾಭವೂ ದೊರೆಯಬಹುದು. ವಿದೇಶ ಪ್ರವಾಸಕ್ಕೆ ಸಂಬಂಧಿಸಿದ ಪ್ರಯತ್ನಗಳು ಯಶಸ್ವಿಯಾಗುವ ಸಾಧ್ಯತೆಯಿದೆ. ಅನಿರೀಕ್ಷಿತ ಧನಲಾಭದ ಯೋಗವಿದ್ದು, ಕೈಗೆತ್ತಿಕೊಂಡ ಹಲವು ಕೆಲಸಗಳಲ್ಲಿ ಯಶಸ್ಸು ಸಿಗಲಿದೆ.

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಇಂದು ಮನಸ್ಸಿನಲ್ಲಿ ಗೊಂದಲ ಹಾಗೂ ಚಂಚಲತೆ ಕಾಡಬಹುದು. ಬಂಧು-ಮಿತ್ರರೊಂದಿಗೆ ಅನಗತ್ಯ ಭಿನ್ನಾಭಿಪ್ರಾಯ ಉಂಟಾಗದಂತೆ ಮಾತುಕತೆಯಲ್ಲಿ ಎಚ್ಚರಿಕೆ ವಹಿಸುವುದು ಉತ್ತಮ. ಸಮಯಕ್ಕೆ ಸರಿಯಾಗಿ ಊಟ ಮಾಡದಿದ್ದರೆ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು. ಹಠಾತ್‌ ಕಲಹಗಳಿಗೆ ಅವಕಾಶ ಇರುವುದರಿಂದ ಕೆಟ್ಟ ಸಹವಾಸದಿಂದ ದೂರವಿರುವುದು ಒಳಿತು.

ಕರ್ಕಾಟಕ ರಾಶಿ

ಕರ್ಕಾಟಕ ರಾಶಿಯವರಿಗೆ ಇಂದು ಅನಿರೀಕ್ಷಿತ ಹಣಕಾಸಿನ ನಷ್ಟ ಎದುರಾಗುವ ಸಾಧ್ಯತೆಯಿದೆ. ಯಾವುದೇ ವಿಚಾರದಲ್ಲೂ ತಕ್ಷಣ ನಿರ್ಧಾರ ಕೈಗೊಳ್ಳಲು ಮನಸ್ಸು ಹಿಂದೇಟು ಹಾಕಬಹುದು. ಅನಗತ್ಯ ಸಮಸ್ಯೆಗಳಿಗೆ ಸಿಲುಕದಂತೆ ಹಾಗೂ ಗೌರವಕ್ಕೆ ಧಕ್ಕೆ ಬಾರದಂತೆ ಎಚ್ಚರಿಕೆಯಿಂದ ವರ್ತಿಸಿ. ವೃತ್ತಿ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ನಿಧಾನಗತಿಯಲ್ಲಿ ಸಾಗಲಿದೆ.

ಸಿಂಹ ರಾಶಿ

ಸಿಂಹ ರಾಶಿಯವರಿಗೆ ವಿದೇಶ ಪ್ರಯಾಣಕ್ಕೆ ಸಂಬಂಧಿಸಿದ ಪ್ರಯತ್ನಗಳಲ್ಲಿ ಅನುಕೂಲಕರ ಫಲಿತಾಂಶ ಸಿಗಬಹುದು. ಆದರೆ ಆರೋಗ್ಯದ ವಿಚಾರದಲ್ಲಿ ಹೆಚ್ಚಿನ ಕಾಳಜಿ ಅಗತ್ಯವಾಗಿದ್ದು, ಅನಾರೋಗ್ಯ ಕಾಡುವ ಸಾಧ್ಯತೆಯಿದೆ. ಅನಿರೀಕ್ಷಿತ ಖರ್ಚು ಅಥವಾ ಹಣಕಾಸಿನ ನಷ್ಟ ಎದುರಾಗಬಹುದು. ಬಂಧು-ಮಿತ್ರರೊಂದಿಗೆ ವೈಮನಸ್ಸು ಉಂಟಾಗದಂತೆ ನೋಡಿಕೊಳ್ಳಿ. ಪ್ರಯಾಣಗಳು ಹೆಚ್ಚಾಗಲಿವೆ.

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಇಂದು ಬಂಧು-ಮಿತ್ರರ ಭೇಟಿಯಿಂದ ಸಂತೋಷ ಸಿಗಲಿದೆ. ಹೊಸ ಮನೆ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಯತ್ನಗಳಿಗೆ ಚಾಲನೆ ನೀಡುವ ಸಾಧ್ಯತೆಯಿದೆ. ಅನಿರೀಕ್ಷಿತ ಧನಲಾಭ ದೊರೆತು ಹಳೆಯ ಸಾಲದ ಸಮಸ್ಯೆಗಳಿಂದ ಕೊಂಚ ನೆಮ್ಮದಿ ಸಿಗಲಿದೆ. ಕುಟುಂಬದಲ್ಲಿ ಸುಖ-ಸೌಖ್ಯವಿದ್ದು, ಶತ್ರುಗಳ ಕಾಟ ಹಾಗೂ ದೀರ್ಘಕಾಲದ ಸಮಸ್ಯೆಗಳು ದೂರವಾಗಲಿವೆ. ಆರೋಗ್ಯವೂ ಉತ್ತಮವಾಗಿರಲಿದೆ.

ತುಲಾ ರಾಶಿ

ತುಲಾ ರಾಶಿಯವರಿಗೆ ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆಗೆ ಯಾವುದೇ ಕೊರತೆ ಇರುವುದಿಲ್ಲ. ಆದರೆ ಅನಗತ್ಯ ಖರ್ಚುಗಳು ಹೆಚ್ಚಾಗಬಹುದು ಹಾಗೂ ಪ್ರಯೋಜನವಿಲ್ಲದ ಪ್ರಯಾಣಗಳು ಎದುರಾಗಬಹುದು. ಮನಸ್ಸಿನಲ್ಲಿ ಆತಂಕ ಕಾಡುವ ಸಾಧ್ಯತೆಯಿರುವುದರಿಂದ ತಾಳ್ಮೆಯಿಂದ ಪರಿಸ್ಥಿತಿಯನ್ನು ನಿಭಾಯಿಸಿ. ಬಂಧು-ಮಿತ್ರರೊಂದಿಗೆ ವೈಮನಸ್ಸು ಬೆಳೆಸದಂತೆ ಎಚ್ಚರ ವಹಿಸಿ. ವಿಂದೂ-ವಿನೋದಗಳಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರ ಉತ್ತಮ ನಡವಳಿಕೆಯನ್ನು ಇತರರು ಮೆಚ್ಚಿಕೊಂಡು ಮಾದರಿಯಾಗಿ ತೆಗೆದುಕೊಳ್ಳಬಹುದು. ಕೈಗೆತ್ತಿಕೊಳ್ಳುವ ಕಾರ್ಯಗಳಲ್ಲಿ ಯಶಸ್ಸು ದೊರೆಯುವ ಸಾಧ್ಯತೆಯಿದೆ. ದೈವದರ್ಶನ ಪಡೆಯುವ ಅವಕಾಶ ಸಿಗಲಿದ್ದು, ಸ್ಥಿರಾಸ್ತಿಗೆ ಸಂಬಂಧಿಸಿದ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಬಹುದು. ಕಲೆಗಳತ್ತ ಆಸಕ್ತಿ ಹೆಚ್ಚಾಗಲಿದ್ದು, ಹೊಸ ವಸ್ತುಗಳು, ಬಟ್ಟೆ ಹಾಗೂ ಆಭರಣಗಳನ್ನು ಖರೀದಿಸುವ ಯೋಗವಿದೆ.

ಧನು ರಾಶಿ

ಧನು ರಾಶಿಯವರಿಗೆ ಸಾಲ ಪಡೆಯಲು ನಡೆಸುವ ಪ್ರಯತ್ನಗಳು ಸುಲಭವಾಗಿ ಫಲ ನೀಡಬಹುದು. ಆದರೆ ಕುಟುಂಬದಲ್ಲಿ ಯಾರಾದರೂ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಯಿರುವುದರಿಂದ ಕಾಳಜಿ ವಹಿಸಿ. ಬಂಧು-ಮಿತ್ರರೊಂದಿಗೆ ವೈಮನಸ್ಸು ಉಂಟಾಗದಂತೆ ಮಾತು ಮತ್ತು ವರ್ತನೆಯಲ್ಲಿ ಎಚ್ಚರಿಕೆ ಅಗತ್ಯ. ವ್ಯವಹಾರಗಳಲ್ಲಿ ಕೆಲವು ತೊಂದರೆಗಳು ಎದುರಾಗಬಹುದು. ಕೈಗೆತ್ತಿಕೊಂಡ ಕೆಲಸಗಳಲ್ಲೂ ಸಣ್ಣಪುಟ್ಟ ಅಡೆತಡೆಗಳು ಕಾಣಿಸಿಕೊಳ್ಳಬಹುದು.

ಮಕರ ರಾಶಿ

ಮಕರ ರಾಶಿಯವರಿಗೆ ಅನುಕೂಲಕರ ಸ್ಥಳ ಬದಲಾವಣೆಯ ಅವಕಾಶ ದೊರೆಯಬಹುದು. ಮನೆ ಅಥವಾ ವಾಸಸ್ಥಳದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಆಲೋಚನೆ ಮೂಡಲಿದೆ. ಇತರರ ಟೀಕೆಗಳಿಗೆ ಗುರಿಯಾಗುವ ಸಾಧ್ಯತೆಯಿದ್ದು, ಯಾವುದೇ ವಿಚಾರದಲ್ಲಿ ದೃಢ ನಿರ್ಧಾರ ಕೈಗೊಳ್ಳಲು ಕಷ್ಟವಾಗಬಹುದು. ಹಠಾತ್ ಹಣ ಖರ್ಚಾಗುವ ಸಾಧ್ಯತೆಯಿರುವುದರಿಂದ ಬಂಧು-ಮಿತ್ರರ ವಿಚಾರದಲ್ಲಿ ಎಚ್ಚರಿಕೆಯಿಂದಿರಿ. ಸಾಲ ಪಡೆಯುವ ಪ್ರಯತ್ನವೂ ನಡೆಯಬಹುದು.

ಕುಂಭ ರಾಶಿ

ಕುಂಭ ರಾಶಿಯವರು ಇಂದು ಸ್ಥಿರಾಸ್ತಿಗೆ ಸಂಬಂಧಿಸಿದ ವಿಚಾರಗಳಲ್ಲಿ ಹೆಚ್ಚಿನ ಜಾಗರೂಕತೆ ವಹಿಸಬೇಕು. ಕೈಗೆ ಬಂದ ಉತ್ತಮ ಅವಕಾಶವೊಂದು ಕೈತಪ್ಪುವ ಸಾಧ್ಯತೆಯಿದೆ. ಹೊಸ ವ್ಯಕ್ತಿಗಳ ಪರಿಚಯವಾಗಲಿದ್ದು, ಪ್ರಯಾಣಗಳಿಂದ ಲಾಭ ದೊರೆಯಬಹುದು. ಆದರೆ ಅಂದುಕೊಂಡ ಕೆಲಸಗಳಿಗೆ ಅಡೆತಡೆಗಳು ಎದುರಾಗಬಹುದು. ಹೊಸ ಕಾರ್ಯಗಳನ್ನು ಕೆಲಕಾಲ ಮುಂದೂಡುವ ಪರಿಸ್ಥಿತಿ ಬರಬಹುದು.

ಮೀನ ರಾಶಿ

ಮೀನ ರಾಶಿಯವರಿಗೆ ಇಂದು ಕುಟುಂಬದಲ್ಲಿ ಸಂತೋಷ ಹಾಗೂ ನೆಮ್ಮದಿಯ ವಾತಾವರಣ ಇರಲಿದೆ. ಧನ-ಧಾನ್ಯದಲ್ಲಿ ಪ್ರಗತಿ ಕಂಡುಬರಲಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಸಿಗುವ ಸಾಧ್ಯತೆಯಿದೆ. ಕೈಗೆತ್ತಿಕೊಂಡ ಕಾರ್ಯಗಳು ಯಶಸ್ವಿಯಾಗಲಿದ್ದು, ಮನೆಯಲ್ಲಿ ಮಾಡುವ ಬದಲಾವಣೆಗಳು ಸಂತೃಪ್ತಿ ನೀಡಲಿವೆ. ಬಂಧು-ಮಿತ್ರರ ಭೇಟಿಯಿಂದ ಸಂತೋಷ ಸಿಗಲಿದ್ದು, ಪ್ರಯಾಣಗಳು ಕೂಡ ಲಾಭದಾಯಕವಾಗಿರಲಿವೆ.

Savitha

ಪತ್ರಿಕೋದ್ಯಮದಲ್ಲಿ 8 ವರ್ಷಗಳ ಬರವಣಿಗೆ ಅನುಭವ ಹೊಂದಿರುವ ಸವಿತಾ ರವರು, ಟ್ರೆಂಡಿಂಗ್ ವಿಷಯಗಳು, ಸೋಶಿಯಲ್ ಮೀಡಿಯಾ, ವೈರಲ್ ಕಂಟೆಂಟ್, ಧಾರ್ಮಿಕ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ… More »

Related Stories