Health Tips (itskannada) ಮೊಟ್ಟೆಗಳೊಳಗೆ ಇರುವ ಪೋಷಕಾಂಶಗಳು ಮೆದುಳಿನ ಕೋಶಗಳಿಗೆ ಅನುಕೂಲಕರವಾಗಿವೆ ಮತ್ತು ಆರೋಗ್ಯಕರ ಮೆದುಳಿನ ಕ್ರಿಯೆಯನ್ನು ಉತ್ತೇಜಿಸುತ್ತವೆ. ಮೊಟ್ಟೆಗಳಿಂದ ಪಡೆಯಬಹುದಾದ ಅನೇಕ ಆರೋಗ್ಯ ಪ್ರಯೋಜನಗಳಿವೆ, ಅವುಗಳೆಂದರೆ:
ಕಬ್ಬಿಣಾಂಶ ಹೆಚ್ಚಲು : ಕಬ್ಬಿಣದ ಕೊರತೆಯಿರುವ ಅನೇಕ ಜನರು ದಣಿವು, ತಲೆನೋವು ಮತ್ತು ಕಿರಿಕಿರಿತನದ ಅಸ್ಪಷ್ಟ ಲಕ್ಷಣಗಳನ್ನು ಅನುಭವಿಸುತ್ತಾರೆ. ಕಬ್ಬಿಣವು ರಕ್ತದಲ್ಲಿನ ಆಮ್ಲಜನಕದ ವಾಹಕವಾಗಿದೆ ಮತ್ತು ಪ್ರತಿರೋಧಕ ಶಕ್ತಿ, ಶಕ್ತಿ ಚಯಾಪಚಯ ಮತ್ತು ದೇಹದ ಇತರ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮೊಟ್ಟೆಯ ಹಳದಿ ಲೋಳೆಯ ಕಬ್ಬಿಣಾಂಶ ಹೆಚ್ಚಲು ಸಹಕಾರಿಯಾಗಿದೆ.
ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು : ಮೊಟ್ಟೆಯ ಹಳದಿಯಲ್ಲಿರುವ ಕಬ್ಬಿಣಾಂಶ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡುವುದು. ವಾರದಲ್ಲಿ 2 ಬಾರಿ ಇದರ ಹಳದಿ ತಿಂದರೆ ದೇಹಕ್ಕೆ ಉತ್ತಮ ಪೋಷಕಾಂಶ ದೊರಕಿದಂತೆ ಆಗುತ್ತದೆ. ಹಳದಿಯಲ್ಲಿ ಉತ್ತಮ ಕೊಲೆಸ್ಟ್ರಾಲ್ ಮತ್ತು ಕ್ಯಾಲೋರಿ ಹದಯದ ಆರೋಗ್ಯವನ್ನು ಹೆಚ್ಚಿಸುತ್ತದೆ.
ದೇಹದ ತೂಕವನ್ನು ಇಳಿಸಬಹುದು : ಬೆಳಿಗ್ಗೆ ಬ್ರೇಕ್ಫಾಸ್ಟ್ ಗೆ ಮೊಟ್ಟೆ ಸೇವಿಸುವುದರಿಂದ ದೇಹದ ತೂಕವನ್ನು ಇಳಿಸಬಹುದು ಎಂದು ಇತ್ತೀಚಿನ ಸಂಶೋಧನೆ ತಿಳಿಸಿದೆ. ಮೊಟ್ಟೆ ಸೇವನೆಯಿಂದ ದಿನವಿಡೀ ಹಸಿವು ಕಡಿಮೆಯಾಗುವುದು. ಇದರಿಂದ ಮಧ್ಯದಲ್ಲಿ ಬಿಸ್ಕಿಟ್, ಚಿಪ್ಸ್ ಇತರ ಜಂಕ್ ಫೂಡ್ಗಳನ್ನು ತಿನ್ನುವುದು ತಪ್ಪಿಸಬಹುದು. ಇದರಿಂದ ಇತರೇ ಆರೋಗ್ಯ ಸಮಸ್ಯೆಗಳಿಂದಲೂ ಪಾರಾಗಬಹುದು.
ಮೊಟ್ಟೆಯ ಇತರ ಉಪಯೋಗಗಳು
ಕ್ಯಾನ್ಸರ್ ಸಂಶೋಧನೆ, ಸಂಗ್ರಹಿಸಿದ ವೀರ್ಯಾಣುಗಳನ್ನು ಶೇಖರಿಸಲು, ಕಾಂತಿವರ್ಧಕಗಳ ತಯಾರಿಕೆ, ಔಷಧಗಳ ತಯಾರಿಕೆ, ಬೇಕರಿ ತಿನಿಸುಗಳ ತಯಾರಿಕೆ, ಕೆಲವು ಪ್ರಾಣಿ ಆಹಾರಗಳ ತಯಾರಿಕೆ, ಚರ್ಮ ಹದ ಮಾಡಲು ಹೀಗೆ ಹತ್ತು ಹಲವಾರು ಬೇರೆ ಬೇರೆ ಉದ್ಯಮಗಳಲ್ಲಿ ಮೊಟ್ಟೆಯನ್ನು ಉಪಯೋಗಿಸಲಾಗುತ್ತಿದೆ. ಈ ಎಲ್ಲಾ ಕಾರಣಗಳಿಂದ ಮೊಟ್ಟೆಗೆ ಪ್ರಪಂಚದ ಎಲ್ಲೆಡೆ ಹೆಚ್ಚು ಬೇಡಿಕೆಯಿದೆ. ಇವಿಷ್ಟು ಮೊಟ್ಟೆಯ ಅರೋಗ್ಯ ಪ್ರಯೋಜನಗಳು – Egg Health Benefits In Kannada. // ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ – Kannada Home Remedies – Kannada Health Tips
Webtitle : ಮೊಟ್ಟೆಯ ಅರೋಗ್ಯ ಪ್ರಯೋಜನಗಳು – Egg Health Benefits In Kannada
Keyword : ಮೊಟ್ಟೆಯ ಅರೋಗ್ಯ ಪ್ರಯೋಜನಗಳು – Egg Health Benefits In Kannada
Follow us On
Google News |