Pregnancy: ಗರ್ಭಾವಸ್ಥೆಯಲ್ಲಿ ಅಧಿಕ ಬಿಪಿ ಸಮಸ್ಯೆಯನ್ನು ನಿಯಂತ್ರಿಸಲು ಈ ಸಲಹೆಗಳನ್ನು ಅನುಸರಿಸಿ!
Hypertension During Pregnancy: ಗರ್ಭಾವಸ್ಥೆಯಲ್ಲಿ ಅಧಿಕ ಬಿಪಿ ಸಮಸ್ಯೆಯು ತಾಯಿ ಮತ್ತು ಮಗುವಿಗೆ ಅಪಾಯವನ್ನುಂಟುಮಾಡುತ್ತದೆ, ಈ ರೀತಿ ನಿಯಂತ್ರಣದಲ್ಲಿಡಿ
Hypertension During Pregnancy: ಗರ್ಭಾವಸ್ಥೆಯಲ್ಲಿ ಮಹಿಳೆಯರ ದೇಹದಲ್ಲಿ ಅನೇಕ ಹಾರ್ಮೋನುಗಳ ಬದಲಾವಣೆಗಳು ಕಂಡುಬರುತ್ತವೆ. ತನಗೆ ಮತ್ತು ಹುಟ್ಟಲಿರುವ ಮಗುವಿಗೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಮಹಿಳೆ ತನ್ನ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾದ ಸಮಯ ಇದು.
ಇದರ ಹೊರತಾಗಿಯೂ, ಅಧಿಕ ರಕ್ತದೊತ್ತಡದ ಸಮಸ್ಯೆಯು ಗರ್ಭಾವಸ್ಥೆಯಲ್ಲಿ (blood pressure during pregnancy) ಅನೇಕ ಮಹಿಳೆಯರಲ್ಲಿ ಕಂಡುಬರುತ್ತದೆ. ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ನಿರ್ಲಕ್ಷಿಸುವುದರಿಂದ ಮಗುವಿನ ಮತ್ತು ತಾಯಿಯ ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ.
ಅಂತಹ ಪರಿಸ್ಥಿತಿಯಲ್ಲಿ, ರಕ್ತದೊತ್ತಡವನ್ನು ನಿಯಂತ್ರಿಸುವುದು ಅವಶ್ಯಕ. ಕೆಲವು ಸುಲಭವಾದ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ನಿಮ್ಮ ಅಧಿಕ ರಕ್ತದೊತ್ತಡವನ್ನು ಹೇಗೆ ನಿಯಂತ್ರಿಸಬಹುದು ಎಂಬುದನ್ನು ತಿಳಿಯಿರಿ.
ದಿನಕ್ಕೆ ಎಷ್ಟು ಲೋಟ ನೀರು ಕುಡಿಯಬೇಕು? ಹೆಚ್ಚಿಗೆ ನೀರು ಕುಡಿಯುವುದು ಸಹ ಆರೋಗ್ಯ ಸಮಸ್ಯೆ ಉಂಟು ಮಾಡುತ್ತದೆಯಂತೆ
ಗರ್ಭಾವಸ್ಥೆಯಲ್ಲಿ ರಕ್ತದೊತ್ತಡ ಏಕೆ ಹೆಚ್ಚಾಗುತ್ತದೆ?
ಗರ್ಭಾವಸ್ಥೆಯಲ್ಲಿ ಮಹಿಳೆಯರಲ್ಲಿ ಅಧಿಕ ರಕ್ತದೊತ್ತಡ ಸಾಮಾನ್ಯವಾಗಿರುತ್ತದೆ. ಒತ್ತಡ, ಖಿನ್ನತೆ, ಸ್ಥೂಲಕಾಯತೆ, ದೈಹಿಕ ಚಟುವಟಿಕೆಯನ್ನು ಕಡಿಮೆ ಮಾಡುವುದು, ಮದ್ಯಪಾನ ಮತ್ತು ಧೂಮಪಾನ, ಮೊದಲ ಬಾರಿಗೆ ಗರ್ಭಿಣಿಯಾಗಿರುವುದು, ಮಹಿಳೆಯ ವಯಸ್ಸು 35 ಕ್ಕಿಂತ ಹೆಚ್ಚು ಮತ್ತು ಮಧುಮೇಹ ಇದಕ್ಕೆ ಕಾರಣ.
ಗರ್ಭಾವಸ್ಥೆಯಲ್ಲಿ ಬಿಪಿಯನ್ನು ನಿಯಂತ್ರಿಸುವ ಮಾರ್ಗಗಳು
ಉಪ್ಪನ್ನು ತಪ್ಪಿಸಿ
ಗರ್ಭಾವಸ್ಥೆಯಲ್ಲಿ ನಿಮ್ಮ ಬಿಪಿ ಹೆಚ್ಚಾಗುತ್ತಿದ್ದರೆ, ಬಿಳಿ ಉಪ್ಪನ್ನು ತಿನ್ನುವುದನ್ನು ನಿಲ್ಲಿಸಿ. ಬಿಳಿ ಉಪ್ಪಿನ (Avoid White Salt) ಬದಲಿಗೆ ಕಲ್ಲು ಉಪ್ಪಿನಂತಹ ಕಡಿಮೆ ಸೋಡಿಯಂ ಉಪ್ಪನ್ನು ಬಳಸಿ.
ಹಸಿ ಈರುಳ್ಳಿ ಬೇಸಿಗೆಯಲ್ಲಿ ಆರೋಗ್ಯಕ್ಕೆ ವರದಾನ, ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?
ಪೌಷ್ಟಿಕ ಆಹಾರ
ಗರ್ಭಿಣಿಯರು ತಮ್ಮ ಆಹಾರದಲ್ಲಿ ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಭರಿತ ಆಹಾರವನ್ನು ಸೇವಿಸಬೇಕು. ಹೀಗೆ ಮಾಡುವುದರಿಂದ ಬಿಪಿಯನ್ನು ನಿಯಂತ್ರಿಸುವುದು ಸುಲಭವಾಗುತ್ತದೆ. ಇದಕ್ಕಾಗಿ, ನಿಮ್ಮ ಆಹಾರದಲ್ಲಿ ಕಾಲೋಚಿತ ತರಕಾರಿಗಳು, ಸೊಪ್ಪು, ವಾಲ್ನಟ್ ಸೇರಿಸಿಕೊಳ್ಳಬಹುದು.
ನಡೆಯಿರಿ
ಗರ್ಭಾವಸ್ಥೆಯಲ್ಲಿ ಅಧಿಕ ಬಿಪಿಯನ್ನು ನಿಯಂತ್ರಿಸಲು ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯಿರಿ. ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯುವುದರಿಂದ ನೀವು ತುಂಬಾ ಆರಾಮವಾಗಿರುತ್ತೀರಿ ಮತ್ತು ನಿಮ್ಮ ಬಿಪಿ ಸಹ ನಿಯಂತ್ರಣದಲ್ಲಿರುತ್ತದೆ. ಇದರ ಹೊರತಾಗಿ, ನಡೆಯುವಾಗ ಉತ್ತಮ ಸಂಗೀತವನ್ನು ಆಲಿಸಿ ಅಥವಾ ಧ್ಯಾನಕ್ಕಾಗಿ ಸ್ವಲ್ಪ ಸಮಯ ತೆಗೆದುಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ಒತ್ತಡ ದೂರವಾಗುತ್ತದೆ, ಇದು ಬಿಪಿಯನ್ನು ನಿಯಂತ್ರಣದಲ್ಲಿಡುತ್ತದೆ.
ಲಘು ವ್ಯಾಯಾಮ
ಗರ್ಭಾವಸ್ಥೆಯಲ್ಲಿ ಬಿಪಿ ನಿಯಂತ್ರಣವನ್ನು ಇರಿಸಿಕೊಳ್ಳಲು, ಮಹಿಳೆಯು ದಿನಚರಿಯಲ್ಲಿ ಲಘು ವ್ಯಾಯಾಮವನ್ನು ಸಹ ಸೇರಿಸಿಕೊಳ್ಳಬೇಕು. ಹೀಗೆ ಮಾಡುವುದರಿಂದ ದೇಹವು ಕ್ರಿಯಾಶೀಲವಾಗಿರುವಾಗ ಮನಸ್ಸು ಕೂಡ ಶಾಂತವಾಗಿರುತ್ತದೆ. ಇದಕ್ಕಾಗಿ, ನಡೆಯುವಾಗ ಆಳವಾದ ಉಸಿರನ್ನು ತೆಗೆದುಕೊಳ್ಳಿ, ದಿನನಿತ್ಯ ಲಘು ವ್ಯಾಯಾಮ ಮಾಡಿ.
ಕೆಫೀನ್ ತಪ್ಪಿಸಿ
ನೀವು ಬಿಪಿ ನಿಯಂತ್ರಣದಲ್ಲಿರಲು ಬಯಸಿದರೆ, ಕೆಫೀನ್ ಮಾತ್ರವಲ್ಲದೆ ಧೂಮಪಾನ ಮತ್ತು ತಂಪು ಪಾನೀಯಗಳನ್ನು ಸಹ ತಪ್ಪಿಸಿ, ಬಹುತೇಕ ಜನರು ಕಾಫಿ ಟೀ ಅನ್ನು ತಮ್ಮ ಜೀವನದ ಭಾಗವನ್ನಾಗಿ ಮಾಡಿಕೊಂಡಿರುತ್ತಾರೆ, ಒಂದು ದಿನ ಕುಡಿಯದೆ ಇದ್ದರೂ ಏನೋ ಕಳೆದುಕೊಂಡಂತೆ ಭಾಸವಾಗುತ್ತಾರೆ. ಆದರೆ ಆದಷ್ಟು ಅವುಗಳನ್ನು ತಪ್ಪಿಸುವುದೇ ನಿಮ್ಮ ಆರೋಗ್ಯ ಒಳಿತು.
health tips to control high blood pressure during pregnancy
Follow us On
Google News |