ಕೂದಲು ತಿನ್ನುವ ಅಭ್ಯಾಸ, ಬಾಲಕಿ ಹೊಟ್ಟೆಯಲ್ಲಿ ಅರ್ಧ ಕೆಜಿ ಕೂದಲು

ಕೂದಲು ತಿನ್ನುವ ಅಭ್ಯಾಸ ಹೊಂದಿದ್ದ 10 ವರ್ಷದ ಬಾಲಕಿಗೆ ಅಮರಾವತಿಯಲ್ಲಿ ಶಸ್ತ್ರಚಿಕಿತ್ಸೆ - ಅರ್ಧ ಕಿಲೋ ತೂಕದ ಕೂದಲು ಉಂಡೆ ತೆಗೆಯಲಾಗಿದೆ.

  • ಅಮರಾವತಿಯ 10 ವರ್ಷದ ಬಾಲಕಿಗೆ ಅಪರೂಪದ ಶಸ್ತ್ರಚಿಕಿತ್ಸೆ
  • ಕೂದಲು ತಿನ್ನುವ ಅಭ್ಯಾಸದಿಂದ ಹೊಟ್ಟೆಯಲ್ಲಿ ಅರ್ಧ ಕೆಜಿ ಕೂದಲು
  • ಚಿಕಿತ್ಸೆ ನಂತರ ಆರೋಗ್ಯವಾಗಿರುವ ಬಾಲಕಿ, ಸಮರ್ಪಕವಾಗಿ ಆಹಾರ ಸೇವನೆ

ಮುಂಬೈ (Mumbai News): ಮಹಾರಾಷ್ಟ್ರದ ಅಮರಾವತಿಯ 10 ವರ್ಷದ ಬಾಲಕಿಗೆ ಅರ್ಧ ಕಿಲೋಗ್ರಾಂ ಕೂದಲು ತೆಗೆಯುವ ಶಸ್ತ್ರಚಿಕಿತ್ಸೆ ಮಾಡಲಾಯಿತು. ಕಳೆದ 5-6 ತಿಂಗಳಿನಿಂದ ಬಾಲಕಿ ವಾಂತಿ, ಹಸಿವಿನ ಕೊರತೆ ಮತ್ತು ತೂಕ ಇಳಿಕೆಯಂತಹ ಸಮಸ್ಯೆಗಳಿಂದ ಬಳಲುತ್ತಿದ್ದಳು.

20 ದಿನಗಳ ಹಿಂದೆ ಆಕೆಯನ್ನು ಈ ಖಾಸಗಿ ಆಸ್ಪತ್ರೆಗೆ (Private Hospital) ಕರೆತರಲಾಗಿತ್ತು. ಡಾ. ಉಷಾ ಗಜ್ಭಿ ಅವರು ಆಕೆಯನ್ನು ಪರೀಕ್ಷಿಸಿ, ಸಲಹೆ ನೀಡಿದರು.

ಆಗ ಬಾಲಕಿ ತನಗೆ ಕೂದಲು ತಿನ್ನುವ ಅಭ್ಯಾಸವಿದೆ ಎಂದು ಹೇಳಿದಳು. ಪರೀಕ್ಷೆಗಳಲ್ಲಿ ಕೂದಲು ಹೊಟ್ಟೆಯಲ್ಲಿ ಚೆಂಡಿನಂತೆ ಸುರುಳಿಯಾಗಿರುವುದು ಕಂಡುಬಂದಿತ್ತು. ಶಸ್ತ್ರಚಿಕಿತ್ಸೆಯ ಮೂಲಕ ಅದನ್ನು ಹೊರತೆಗೆದ ನಂತರ, ಆಕೆ ಈಗ ಸಾಮಾನ್ಯವಾಗಿದ್ದಾಳೆ.

ಇದನ್ನೂ ಓದಿ: ಅತ್ತೆ ಮತ್ತು ಹೆಂಡತಿಯನ್ನು ಕೊಂದು ಬಾಳೆ ಗಿಡ ನೆಟ್ಟಿದ್ದ ಅಳಿಯ! ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ

ಮೊದಲು ಹಸಿವು ಇಲ್ಲದೆ ಇದ್ದ ಬಾಲಕಿ ಈಗ ಸರಿಯಾಗಿ ಊಟ ಮಾಡುವುದು, ಎಲ್ಲರಂತೆ ಇರುವುದು ಮಾಡುತ್ತಿದ್ದಾಳೆ, ಜೊತೆಗೆ ವೈದ್ಯರು ಪೋಷಕರಿಗೂ ಈ ಬಗ್ಗೆ ಗಮನಹರಿಸುವಂತೆ, ಹಾಗೂ ಆಕೆಯ ಗಮನ ಬೇರೆಡೆ ತಿರುಗಿಸುವಂತೆ ಸಲಹೆ ನೀಡಿದ್ದಾರೆ.

ಈ ಪ್ರಕರಣವು ಪೆಗೋಟೋಫೇಗಿಯಾ (Trichophagia) ಎನ್ನುವ ವಿಚಿತ್ರ ಮನಸ್ಸಿನ ಸ್ಥಿತಿಗೆ ಸಂಬಂಧಿಸಿದ್ದು, ಮಕ್ಕಳಲ್ಲಿ ಇದು ವಿರಳವಾಗಿ ಕಂಡುಬರುತ್ತದೆ. ಮಕ್ಕಳ unusual habits ಅಥವಾ ಬದಲಾದ ವರ್ತನೆಗಳನ್ನು ಪೋಷಕರು ಗಂಭೀರವಾಗಿ ಗಮನಿಸಬೇಕು.

10-Year-Old Girl Undergoes Surgery to Remove Half Kg Hair Ball from Stomach

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories