Kannada News India News

10th, PUC ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ! ಅಪ್ಲೈ ಮಾಡಿ

Post Office Scheme

Story Highlights

ಅಂಚೆ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ; 10 ಪಿಯುಸಿ ಮುಗಿಸಿದವರು ಅರ್ಜಿ ಸಲ್ಲಿಸಬಹುದು

ಭಾರತೀಯ ಅಂಚೆ ಕಚೇರಿ (Indian post office) ತನ್ನಲ್ಲಿ ಖಾಲಿ ಇರುವ 1899 ಹೆಚ್ಚಿನ ಪೋಸ್ಟ್ ಗಳಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು ಅರ್ಜಿ ಸಲ್ಲಿಸಲು ಇಂದೇ ಕೊನೆಯ ದಿನಾಂಕವಾಗಿದೆ (last date).

ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದಾದ್ದರಿಂದ ಈ ಕೆಳಗೆ ನೀಡಿರುವ ಮಾಹಿತಿಗಳನ್ನು ತಿಳಿದುಕೊಂಡು ತಕ್ಷಣವೇ ಅರ್ಜಿ ಸಲ್ಲಿಸಿ.

ಪೋಸ್ಟ್ ಆಫೀಸ್ನಲ್ಲಿ ಖಾಲಿ ಇರುವ ಹುದ್ದೆಯ ಮಾಹಿತಿ: (job details)

ಪೋಸ್ಟಲ್ ಅಸಿಸ್ಟೆಂಟ್- 598 ಹುದ್ದೆಗಳು

ಸಾರ್ಟಿಂಗ್ ಅಸಿಸ್ಟೆಂಟ್- 143 ಹುದ್ದೆಗಳು

ಪೋಸ್ಟ್ಮ್ಯಾನ್- 585 ಹುದ್ದೆಗಳು

ಮೇಲ್ ಗಾರ್ಡ್- 3 ಹುದ್ದೆಗಳು

ಮಲ್ಟಿ ಟಾಸ್ಕಿಂಗ್ ಸ್ಟಾಫ್- 570 ಹುದ್ದೆಗಳು

ಎಲ್ಲಾ ಹುದ್ದೆಗಳಲ್ಲಿಯೂ ಸ್ಪೋರ್ಟ್ಸ್ ಕೋಟ ಮೀಸಲಾಗಿದೆ. ಒಟ್ಟು ಖಾಲಿ ಇರುವ ಹುದ್ದೆಗಳು 1899.

ಶಿಕ್ಷಣ (Qualification)

ಭಾರತೀಯ ಅಂಚೆ ಕಚೇರಿಗೆ ಹೊರಡಿಸಿರುವ ಅಧಿ ಸೂಚನೆಯ ಪ್ರಕಾರ ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ, ಪಿಯುಸಿ ಹಾಗೂ ಪದವಿ ತೇರ್ಗಡೆ ಹೊಂದಿರುವ ಪ್ರಮಾಣಪತ್ರವನ್ನು ಒದಗಿಸಬೇಕು.

ಪೋಸ್ಟಲ್ ಅಸಿಸ್ಟೆಂಟ್ ಹಾಗೂ ಸಾರ್ಟಿಂಗ್ ಅಸಿಸ್ಟೆಂಟ್ ಹುದ್ದೆಗೆ ಪದವಿ ಪಡೆದರು ಅರ್ಜಿ ಸಲ್ಲಿಸಬಹುದು. ಪೋಸ್ಟ್ಮ್ಯಾನ್ ಮತ್ತು ಮೇಲ್ ಗಾರ್ಡ್ ಹುದ್ದೆಗೆ 12ನೇ ತರಗತಿ ತೇರ್ಗಡೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಅದೇ ರೀತಿ ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳಿಗೆ 10ನೇ ತರಗತಿ ತೇರ್ಗಡೆ ಹೊಂದಿದರು ಅರ್ಜಿ ಸಲ್ಲಿಸಬಹುದು.

Govt job vacancyವಯೋಮಿತಿ (Age limit)

ಭಾರತೀಯ ಅಂಚೆ ಕಚೇರಿ ಹೊರಡಿಸಿರುವ ಅಧಿಕ ಸೂಚನೆಯ ಪ್ರಕಾರ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18ರಿಂದ 27 ವರ್ಷ ಒಳಗಿರಬೇಕು. ಪೋಸ್ಟಲ್ ಅಸಿಸ್ಟೆಂಟ್, ಸಾರ್ಟಿಂಗ್ ಅಸಿಸ್ಟೆಂಟ್, ಪೋಸ್ಟ್ಮ್ಯಾನ್, ಮೇಲ್ ಗಾರ್ಡ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ 18 ರಿಂದ 27 ವರ್ಷ ವಯಸ್ಸಾಗಿರಬೇಕು ಹಾಗೂ ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗೆ 18 ರಿಂದ 25 ವರ್ಷ ಒಳಗಿನ ಅಭ್ಯರ್ಥಿ ಅರ್ಜಿ ಸಲ್ಲಿಸಬಹುದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯಸ್ಸಿನ ಸಡಿಲಿಕೆ ಕೂಡ ಇರುತ್ತದೆ.

ವೇತನ (Salary)

ಆಯ್ಕೆಯಾದ ಅಭ್ಯರ್ಥಿಗಳು ಭಾರತದ ಯಾವುದೇ ಅಂಚೆ ಕಚೇರಿ ವಿಭಾಗದಲ್ಲಿ ಕೆಲಸ ನಿರ್ವಹಿಸಲು ಸಿದ್ಧರಿರಬೇಕು. ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಸಿಗುವ ವೇತನ ಇಂತಿದೆ.

ಪೋಸ್ಟಲ್ ಅಸಿಸ್ಟೆಂಟ್ ಹುದ್ದೆಗೆ ಆಯ್ಕೆಯಾದರೆ 25,500-81,100 ಸಂಬಳ, ಸಾರ್ಟಿಂಗ್ ಅಸಿಸ್ಟೆಂಟ್ ಹುದ್ದೆಗೆ 25,500-81,100 ಸಂಬಳ, ಪೋಸ್ಟ್ಮ್ಯಾನ್ ಮತ್ತು ಮೇಲ್ ಗಾರ್ಡ್ ಹುದ್ದೆಗೆ 21,700-69,100 ಸಂಬಳ ಹಾಗೂ ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗೆ 18,000- 56,900 ಸಂಬಳವನ್ನು ಪ್ರತಿ ತಿಂಗಳು ಪಡೆದುಕೊಳ್ಳಬಹುದು.

ಅರ್ಜಿ ಶುಲ್ಕ ಮತ್ತು ಆಯ್ಕೆ ಪ್ರಕ್ರಿಯೆ (Application fee and selection process)

ಎಸ್ ಎಸ್ ಸಿ ಹಾಗೂ ಎಸ್ ಟಿ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇಲ್ಲ. ಸಾಮಾನ್ಯ/OBC/EWS ಅಭ್ಯರ್ಥಿಗಳು ರೂ. 100 ಪಾವತಿಸಬೇಕು. ಇನ್ನು ಅಭ್ಯರ್ಥಿಗಳನ್ನು ಮೆರಿಟ್ ಟೆಸ್ಟ್ ಹಾಗೂ ದಾಖಲೆಗಳ ಪರಿಶೀಲನೆ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವುದು ಹೇಗೆ? (How to apply)

ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದಾಗಿದ್ದು https://dopsportsrecruitment.cept.gov.in/login.aspx ಈ ವೆಬ್ ಪೋರ್ಟಲ್ ನಲ್ಲಿ ಲಾಗಿನ್ ಆಗಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಇಂದು ಡಿಸೆಂಬರ್ 9 2023 ಕೊನೆಯ ದಿನಾಂಕವಾಗಿದ್ದು ಅರ್ಹ ಅಭ್ಯರ್ಥಿಗಳು ತಕ್ಷಣವೇ ಅರ್ಜಿ ಸಲ್ಲಿಸಿ.

10th, PUC passers have huge job opportunities in postal department