ಉತ್ತರ ಪ್ರದೇಶ; ಸಿಡಿಲು ಬಡಿದು 14 ಮಂದಿ ಸಾವು
ಲಕ್ನೋ: ಕಳೆದ ಕೆಲವು ದಿನಗಳಿಂದ ಉತ್ತರ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಈ ವೇಳೆ ರಾಜ್ಯದಲ್ಲಿ ನಿನ್ನೆ ಭಾರೀ ಗುಡುಗು ಸಹಿತ ಮಳೆ ಸುರಿದಿದೆ, ಈ ವೇಳೆ ಸಿಡಿಲು ಬಡಿದು ಹಲವರು ಸಾವನ್ನಪ್ಪಿದ್ದಾರೆ. ಸಿಡಿಲು ಬಡಿದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 14 ಮಂದಿ ಸಾವನ್ನಪ್ಪಿದ್ದಾರೆ. 16 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬಡೇಪುರ್, ಬಂದಾ, ಬಲರಾಂಪುರ್, ಚಂದುಲಿ, ರಾಯ್ ಬರೇಲಿ, ಅಮೇಥಿ, ಕೌಶಂಬಿ, ಸುಲ್ತಾನ್‌ಪುರ ಮತ್ತು ಚಿತ್ರಕೋಟ್ ಜಿಲ್ಲೆಗಳಲ್ಲಿ ಈ ಸಾವುನೋವುಗಳು ಸಂಭವಿಸಿವೆ. ಇದೇ ವೇಳೆ ಸಿಡಿಲು ಬಡಿದು ಮೃತಪಟ್ಟ 14 ಮಂದಿಯ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ.
ಕೆಲ್ವು ದಿನಗಳಿಂದ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದ್ದು, ಅಹಿತಕರ ಘಟನೆಗಳು ಆತಂಕ ಸೃಷ್ಟಿಸಿವೆ, ಹಲವೆಡೆ ರೆಡ್ ಅಲರ್ಟ್ ನೀಡಲಾಗಿದೆ, ಕರಾವಳಿ ಭಾಗದ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಈ ಹಿಂದೆಯೂ ಸಿಡಿಲು ಬಡಿದು ಹಲವರು ಸಾವನ್ನಪ್ಪಿದ್ದಾರೆ.
14 killed by lightning cm announces rs 4 lakh compensation
Our Whatsapp Channel is Live Now 👇