ಸರ್ಕಾರದಿಂದ ಪ್ರತಿ ಬಿಪಿಎಲ್ ಕುಟುಂಬದ ಹೆಣ್ಣು ಮಕ್ಕಳಿಗೆ ಸಿಗುತ್ತೆ ₹1,50,000 ರೂಪಾಯಿ

ಕುಟುಂಬದಲ್ಲಿ ಹೆಣ್ಣು ಮಗು ಜನನವಾದರೆ ರಾಣಿ ದುರ್ಗಾವತಿ ಯೋಜನೆಯ (Rani durgavati scheme) ಅಡಿಯಲ್ಲಿ ಆ ಮಗು ವಯಸ್ಕಳಾಗುತ್ತಿದ್ದ ಹಾಗೆ, ವಿದ್ಯಾಭ್ಯಾಸಕ್ಕಾಗಿ (Education) ಸರ್ಕಾರವೇ 1.5 ಲಕ್ಷ ರೂಪಾಯಿಗಳನ್ನು ಉಚಿತವಾಗಿ ನೀಡಲಿದೆ.

Bengaluru, Karnataka, India
Edited By: Satish Raj Goravigere

ಕರ್ನಾಟಕ ರಾಜ್ಯದಲ್ಲಿ (state government) ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಹೊರಡಿಸಿದ್ದ ಗ್ಯಾರಂಟಿ ಯೋಜನೆಯ (guarantee schemes) ಪ್ರಭಾವದಿಂದಲೇ ವಿಧಾನಸಭಾ ಎಲೆಕ್ಷನ್ (vidhansabha election) ಗೆದ್ದು ಇಂದು ಅಧಿಕಾರ ನಡೆಸುತ್ತಿದೆ

ಇದೆ ಬತ್ತಳಿಕೆಯನ್ನು ಸದ್ಯದಲ್ಲಿಯೇ ನಡೆಯಲಿರುವ 5 ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಳಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. ಅದೇ ರೀತಿ ಕಾಂಗ್ರೆಸ್ ಕಲ್ಯಾಣ ಯೋಜನೆಗಳಿಗೆ ಠಕ್ಕರ್ ನೀಡಲು ಮೋದಿ ಗ್ಯಾರಂಟಿ ಯೋಜನೆಗಳ (Modi guarantee schemes) ಪ್ರಣಾಳಿಕೆ ಕೂಡ ಸಿದ್ಧವಾಗಿದೆ.

huge benefits for Ration Card Holders by Govt Schemes

ಕೇಂದ್ರ ಸರ್ಕಾರದ ಮಹತ್ತರ ಯೋಜನೆ, ಪ್ರತಿ ತಿಂಗಳು ಪಡೆದುಕೊಳ್ಳಿ 36,000 ಪಿಂಚಣಿ

ಚುನಾವಣಾ ಅಖಾಡಕ್ಕೆ ಬಿಜೆಪಿ ಕಾಂಗ್ರೆಸ್!

ಮಿಜೋರಾ, ಮಧ್ಯ ಪ್ರದೇಶ, ರಾಜಸ್ಥಾನ್, ಛತ್ತೀಸ್ಗಡ ಹಾಗೂ ತೆಲಂಗಾಣ ಈ ಐದು ರಾಜ್ಯಗಳಲ್ಲಿ ಸದ್ಯದಲ್ಲಿ ವಿಧಾನಸಭಾ ಎಲೆಕ್ಷನ್ ನಡೆಯಲಿದೆ 5 ರಾಜ್ಯಗಳ ಅಧಿಕಾರವನ್ನು ತಮ್ಮದಾಗಿಸಿಕೊಳ್ಳಲು ಕಾಂಗ್ರೆಸ್ (Congress) ಹಾಗೂ ಬಿಜೆಪಿ (BJP) ಶತಾಯಗತಾಯ ಪ್ರಯತ್ನಿಸುತ್ತಿದೆ.

ಇತ್ತೀಚಿಗೆ ಛತ್ತೀಸ್ಗಡ ರಾಜ್ಯಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ ಅಮಿತ್ ಶಾ (Amit Shah) ಮೋದಿ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ವಿವರಿಸಿದ್ದಾರೆ. ಅಧಿಕಾರ ನಡೆಸುತ್ತಿರುವ ಭೂಪೇಶ್ ಸಾಕಷ್ಟು ಹಗರಣಗಳಿಂದ ಹೆಸರಾದರೆ ಹೊರತು ಬೇರೆ ಯಾವುದೇ ರೀತಿಯ ಯೋಜನೆಗಳನ್ನು ಜಾರಿಗೆ ತಂದಿಲ್ಲ 300 ಯೋಜನೆಗಳನ್ನು ಘೋಷಣೆ ಮಾಡಿ ಕೇವಲ ಒಂದು ಯೋಜನೆಗಳು ಬಿಡುಗಡೆ ಮಾಡಿಲ್ಲ ಎಂದು ಅಮಿತ್ ಷಾ ದೂರಿದ್ದಾರೆ.

ಬಿಜೆಪಿ ಕಡೆಯಿಂದ ಹೆಣ್ಣು ಮಕ್ಕಳಿಗೆ ಒಂದುವರೆ ಲಕ್ಷ ರೂಪಾಯಿ ಉಚಿತವಾಗಿ ಸಿಗಲಿದೆ!

ಬಿಪಿಎಲ್ ಕಾರ್ಡ್ (BPL card) ಹೊಂದಿರುವ ಕುಟುಂಬದಲ್ಲಿ ಹೆಣ್ಣು ಮಗು ಜನನವಾದರೆ ರಾಣಿ ದುರ್ಗಾವತಿ ಯೋಜನೆಯ (Rani durgavati scheme) ಅಡಿಯಲ್ಲಿ ಆ ಮಗು ವಯಸ್ಕಳಾಗುತ್ತಿದ್ದ ಹಾಗೆ, ವಿದ್ಯಾಭ್ಯಾಸಕ್ಕಾಗಿ (Education) ಸರ್ಕಾರವೇ 1.5 ಲಕ್ಷ ರೂಪಾಯಿಗಳನ್ನು ಉಚಿತವಾಗಿ ನೀಡಲಿದೆ.

ಇದು ಛತ್ತಿಸ್ಗಢ (Chhattisgarh) ನಲ್ಲಿ ಇರುವ ಸಾಕಷ್ಟು ಕುಟುಂಬದ ಹೆಣ್ಣು ಮಕ್ಕಳು ಆರ್ಥಿಕ ಸಮಸ್ಯೆ ಅನುಭವಿಸದೆ ಶಾಲಾ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಪಡೆಯಲು ಅನುಕೂಲವಾಗಲಿದೆ.

ವ್ಯಕ್ತಿ ಸತ್ತ ನಂತರ ಅವನ ಆಧಾರ್ ಕಾರ್ಡ್ ಏನಾಗುತ್ತೆ ಗೊತ್ತಾ? ಇಲ್ಲಿದೆ ಮಹತ್ವದ ಮಾಹಿತಿ

ಮೋದಿ ಗ್ಯಾರಂಟಿ ಯೋಜನೆಗಳು ಯಾವವು!

Govt Scheme* ಪ್ರತಿ ಬಿಪಿಎಲ್ ಕಾರ್ಡ್ ಕುಟುಂಬದ ಹೆಣ್ಣು ಮಗಳು ವಯಸ್ಕಳಾಗುತ್ತಿದ್ದ ಹಾಗೆ ಆಕೆಗೆ ಉಚಿತವಾಗಿ 1.5 ಲಕ್ಷ ರೂಪಾಯಿ ನೀಡುವುದು.

*ಎರಡು ವರ್ಷಗಳಲ್ಲಿ ಒಂದು ಲಕ್ಷ ಯುವಕರಿಗೆ ಉದ್ಯೋಗ ಭರವಸೆ

*ವಿವಾಹಿತ ಮಹಿಳೆಯರಿಗೆ ವರ್ಷಕ್ಕೆ 12,000 ಆರ್ಥಿಕ ನೆರವು ನೀಡುವುದು.

*ಬಡ ಕುಟುಂಬದ ಆರೋಗ್ಯಕ್ಕಾಗಿ ಸಿಎಂ ಪರಿಹಾರ ನಿಧಿಯಿಂದ 10 ಲಕ್ಷ ರೂಪಾಯಿಗಳ ವರೆಗೆ ಉಚಿತ ಚಿಕಿತ್ಸೆಯನ್ನು ರಾಜ್ಯದ ಜನರಿಗೆ ಒದಗಿಸುವುದು.

*ಆಯುಷ್ಮಾನ್ ಭಾರತ್ ಯೋಜನೆಯ ಅಡಿಯಲ್ಲಿ ಆಯುಷ್ಮಾನ್ ಕಾರ್ಡ್ ಮಾಡಿಸಿಕೊಂಡವರಿಗೆ 5 ಲಕ್ಷ ವಿಮೆ ಸೌಲಭ್ಯ (Insurance) ನೀಡುವುದು.

*ರಾಜ್ಯಾದ್ಯಂತ 5 ನೂರಕ್ಕೂ ಹೆಚ್ಚು ಜನೌಷಧಿ ಕೇಂದ್ರ ಸ್ಥಾಪನೆ (Janaoshadhi centre)

*ರೈತರಿಗೆ ಅನುಕೂಲವಾಗುವಂತೆ ಪ್ರತಿ ಕ್ವಿಂಟಲ್ ಭತ್ತಕ್ಕೆ 3,100ರೂ.ಗಳನ್ನು ಕೊಟ್ಟು ಸರ್ಕಾರ ಖರೀದಿ ಮಾಡುವುದು. ಭೂ ರಹಿತ ಕೃಷಿಕರಿಗೆ ವಾರ್ಷಿಕವಾಗಿ 10,000 ರೂ. ಸಹಾಯಧನ ನೀಡುವುದು.

ಇಷ್ಟು ಪ್ರಮುಖವಾದ ಮೋದಿ ಗ್ಯಾರಂಟಿ ಯೋಜನೆಗಳ ಪ್ರಣಾಳಿಕೆ ಬಿಡುಗಡೆ ಆಗಿದ್ದು, ಬಿಜೆಪಿಗೆ ಈ ಘೋಷಣೆಗಳು ಸಹಾಯವಾಗಲಿದೆಯಾ ಎಂಬುದನ್ನು ಕಾದು ನೋಡಬೇಕು.

1,50,000 rupees will be given to the girl children of each BPL family by the government