ಕೇಂದ್ರ ಸರ್ಕಾರದ ಮಹತ್ತರ ಯೋಜನೆ, ಪ್ರತಿ ತಿಂಗಳು ಪಡೆದುಕೊಳ್ಳಿ 36,000 ಪಿಂಚಣಿ
ವೃದ್ಧಾಪ್ಯ ಜೀವನದಲ್ಲಿ ಯಾವುದೇ ರೀತಿಯ ಆರ್ಥಿಕ ಸಂಕಷ್ಟಕ್ಕೆ ಒಳಗಾಗದೆ ಇರುವ ಸಲುವಾಗಿ ಕೇಂದ್ರ ಸರ್ಕಾರ ಹೊಸ ಪಿಂಚಣಿ ಯೋಜನೆಯೊಂದನ್ನು (Pension Scheme) ಜಾರಿಗೆ ತಂದಿದೆ.
ದೇಶದಲ್ಲಿ ಹಿರಿಯ ನಾಗರಿಕರು (senior citizens) ತಮ್ಮ ವೃದ್ಧಾಪ್ಯದ ಸಮಯದಲ್ಲಿ ಆರ್ಥಿಕವಾಗಿ ಯಾವುದೇ ಸಮಸ್ಯೆ ಅನುಭವಿಸಬಾರದು ಎನ್ನುವ ಸಲುವಾಗಿ ಕೇಂದ್ರ ಸರ್ಕಾರ (central government) ಕೆಲವು ಪ್ರಮುಖ ಸ್ಕೀಮ್ ಗಳನ್ನು ಅನುಷ್ಠಾನಕ್ಕೆ ತಂದಿದೆ
ಸಾಮಾನ್ಯವಾಗಿ ಸರ್ಕಾರಿ ನೌಕರಿಯಲ್ಲಿ ಇರುವವರಿಗೆ ವೃದ್ಧಾಪ್ಯದ ಸಮಯದಲ್ಲಿ ಪಿಂಚಣಿ (pension) ಹಣ ಸಿಗಬಹುದು, ಆದರೆ ಎಲ್ಲಾ ಕೆಲಸದಲ್ಲಿ ಇರುವವರೆಗೂ ಈ ಸೌಲಭ್ಯ ಇರುವುದಿಲ್ಲ
ಆದ್ದರಿಂದ ಯಾರಿಗೆ ಪಿಂಚಣಿ ಇಲ್ಲವೋ ಅವರು ತಮ್ಮ ವೃದ್ಧಾಪ್ಯ ಜೀವನದಲ್ಲಿ ಯಾವುದೇ ರೀತಿಯ ಆರ್ಥಿಕ ಸಂಕಷ್ಟಕ್ಕೆ ಒಳಗಾಗದೆ ಇರುವ ಸಲುವಾಗಿ ಕೇಂದ್ರ ಸರ್ಕಾರ ಹೊಸ ಪಿಂಚಣಿ ಯೋಜನೆಯೊಂದನ್ನು (Pension Scheme) ಜಾರಿಗೆ ತಂದಿದೆ.
ವ್ಯಕ್ತಿ ಸತ್ತ ನಂತರ ಅವನ ಆಧಾರ್ ಕಾರ್ಡ್ ಏನಾಗುತ್ತೆ ಗೊತ್ತಾ? ಇಲ್ಲಿದೆ ಮಹತ್ವದ ಮಾಹಿತಿ
ಪ್ರಧಾನ ಮಂತ್ರಿ ಮನ್ ಧನ್ ಯೋಜನಾ (Pradhan mantri mandhan scheme)
ಈ ಯೋಜನೆಯನ್ನು ಹಿರಿಯ ನಾಗರಿಕರು ತಮ್ಮ 60 ವರ್ಷದ ಸಮಯದಲ್ಲಿ ಯಾವುದೇ ಆರ್ಥಿಕ ಸಮಸ್ಯೆಯೂ ಇಲ್ಲದೆ ಆರಾಮಾಗಿ ಕುಳಿತು 36,000ಗಳ ವರೆಗೆ ಪಿಂಚಣಿ ಪಡೆಯಲು ಸಹಾಯಕವಾಗುವ ಸಲವಾಗಿ ಜಾರಿಗೆ ತರಲಾಗಿದೆ.
ಇದಕ್ಕೆ ನೀವು ಪಾವತಿ ಮಾಡಬೇಕಾಗಿರುವ ಪ್ರೀಮಿಯಂ (premium) ಬಹಳ ಕಡಿಮೆ ಎನ್ನುವುದು, ನೀವು ಎಷ್ಟು ಚಿಕ್ಕ ವಯಸ್ಸಿನಿಂದ ಈ ಯೋಜನೆಯನ್ನು ಆರಂಭಿಸುತ್ತಿರೋ ಅಷ್ಟು ಕಡಿಮೆ ಪ್ರೀಮಿಯಂ ಪಾವತಿಸಬೇಕು.
ಉದಾಹರಣೆಗೆ 18 ವಯಸ್ಸಿನಲ್ಲಿ ಮನ್ ಧನ ಯೋಜನೆ ಆರಂಭಿಸಿದರೆ ತಿಂಗಳಿಗೆ ಕೇವಲ 55 ರೂಪಾಯಿಗಳನ್ನು ಪಾವತಿಸಬೇಕು. 30 ವಯಸ್ಸಿನಲ್ಲಿ ಹೂಡಿಕೆ ಆರಂಭಿಸಿದರೆ 110 ರೂ.ಗಳನ್ನು ಹಾಗೂ ನಿಮ್ಮ 45ನೇ ವಯಸ್ಸಿನಲ್ಲಿ ಹೂಡಿಕೆ ಆರಂಭಿಸಿದರೆ 220ರೂ. ಗಳನ್ನು ಪ್ರತಿ ತಿಂಗಳು ಪಾವತಿಸಬೇಕಾಗುತ್ತದೆ. 18ರಿಂದ 55 ವರ್ಷ ವಯಸ್ಸಿನವರು ಪ್ರಧಾನಮಂತ್ರಿ ಮನ್ ಧನ್ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
ಪ್ರಧಾನ ಮಂತ್ರಿ ಮನ್ ಧನ್ ಯೋಜನೆಯ ಅಡಿಯಲ್ಲಿ ನೀವು ಪೋಸ್ಟ್ ಆಫೀಸ್ (post office) ಹಾಗೂ ಹತ್ತಿರದ ಬ್ಯಾಂಕ್ (Bank Account) ನಲ್ಲಿ ಖಾತೆ ತೆರೆಯುವುದರ ಮೂಲಕ ನಿಮ್ಮ ಪ್ರೀಮಿಯಂ ಪಾವತಿಸಬಹುದು.
2013ನೇ ಇಸವಿಗೂ ಮೊದಲು ಆಧಾರ್ ಕಾರ್ಡ್ ಮಾಡಿಸಿದ್ರೆ ತಕ್ಷಣ ಈ ಕೆಲಸ ಮಾಡಿ! ಇಲ್ಲದಿದ್ದರೆ ರದ್ದಾಗುತ್ತೆ
ಈ ಯೋಜನೆ ಮುಗಿದ ನಂತರ ಪ್ರತಿ ತಿಂಗಳು 3000 ಗಳಂತೆ ವರ್ಷಕ್ಕೆ 36,000ಗಳನ್ನು ಪಿಂಚಣಿಯಾಗಿ ಪಡೆದುಕೊಳ್ಳಬಹುದು. ಇದಕ್ಕೆ ನಮ್ಮ ಆಧಾರ್ ಕಾರ್ಡ್ ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಬ್ಯಾಂಕ ಖಾತೆ ಹಾಗೂ ಅದಕ್ಕೆ ಆಧಾರ್ ಸೀಡಿಂಗ್ ಆಗಿರುವುದು ಕಡ್ಡಾಯವಾಗಿದೆ.
ಹಾಗಾದ್ರೆ ಇನ್ಯಾಕೆ ತಡ ನಿಮ್ಮ ವಯಸ್ಸು ಎಷ್ಟು ಎಂಬುದನ್ನು ನೋಡಿಕೊಂಡು ಅದರ ಆಧಾರದ ಮೇಲೆ ಯೋಜನೆಯಲ್ಲಿ ಹೂಡಿಕೆ ಮಾಡಿ. ವೃದ್ಧಾಪ್ಯದ ಜೀವನವನ್ನು ಉತ್ತಮವಾಗಿಸಿಕೊಳ್ಳಿ.
scheme of the central government, get 36,000 pension every month