ವ್ಯಕ್ತಿ ಸತ್ತ ನಂತರ ಅವನ ಆಧಾರ್ ಕಾರ್ಡ್ ಏನಾಗುತ್ತೆ ಗೊತ್ತಾ? ಇಲ್ಲಿದೆ ಮಹತ್ವದ ಮಾಹಿತಿ

ಆಧಾರ್ ಕಾರ್ಡ್ ಬಳಸಿ ಹೆಚ್ಚು ಸಿಮ್ ಕಾರ್ಡ್ (sim card) ಖರೀದಿ ಮಾಡುವುದು, ಜಮೀನು ಆಸ್ತಿ (Property) ಇದ್ದರೆ, ಆಧಾರ್ ಕಾರ್ಡ್ ಬಳಸಿಕೊಂಡು ಮಾರಾಟ ಮಾಡುವುದು, ಖಾತೆಯಲ್ಲಿ (Bank Account) ಇರುವ ಹಣವನ್ನು ಲಪಟಾಯಿಸುವುದು ನಡೆಯುತ್ತದೆ

ಭಾರತೀಯ ನಾಗರಿಕರಿಗೆ ಪ್ರತಿಯೊಬ್ಬರಿಗೂ ಕೂಡ ಆಧಾರ್ ಕಾರ್ಡ್ (Aadhaar Card) ಎನ್ನುವುದು ಬಹಳ ಮುಖ್ಯವಾಗಿರುವ ದಾಖಲೆಯಾಗಿದೆ (Document). ಒಂದು ವೇಳೆ ಆಧಾರ್ ಕಾರ್ಡ್ ಇಲ್ಲದೆ ಇದ್ರೆ ಬಹುಮುಖ್ಯವಾಗಿರುವ ಕೆಲಸಗಳನ್ನು ಕೂಡ ಮಾಡಿಕೊಳ್ಳಲು ಸಾಧ್ಯವಿಲ್ಲ

ಇನ್ನು ವ್ಯಕ್ತಿಯ ಪ್ರತಿಯೊಂದು ವಯಕ್ತಿಕ ವಿವರಗಳು (personal details) ಆತನ ಆಧಾರ್ ಕಾರ್ಡ್ ನಲ್ಲಿಯೇ ಅಡಕವಾಗಿರುತ್ತದೆ. ಹಾಗಾಗಿ ಆಧಾರ್ ಕಾರ್ಡನ್ನು ಸೇಫ್ ಆಗಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುವ ವಿಚಾರ.

2013ನೇ ಇಸವಿಗೂ ಮೊದಲು ಆಧಾರ್ ಕಾರ್ಡ್ ಮಾಡಿಸಿದ್ರೆ ತಕ್ಷಣ ಈ ಕೆಲಸ ಮಾಡಿ! ಇಲ್ಲದಿದ್ದರೆ ರದ್ದಾಗುತ್ತೆ

ವ್ಯಕ್ತಿ ಸತ್ತ ನಂತರ ಅವನ ಆಧಾರ್ ಕಾರ್ಡ್ ಏನಾಗುತ್ತೆ ಗೊತ್ತಾ? ಇಲ್ಲಿದೆ ಮಹತ್ವದ ಮಾಹಿತಿ - Kannada News

ಆಧಾರ್ ಕಾರ್ಡ್ ನಿಂದ ವಂಚನೆ!

ವ್ಯಕ್ತಿಯ ಪ್ರತಿಯೊಂದು ವಯಕ್ತಿಕ ವಿವರಗಳು ಆಧಾರ್ ಕಾರ್ಡ್ ನಲ್ಲಿ ಇರುವುದರಿಂದ ಯಾರದೇ ಆಧಾರ್ ಕಾರ್ಡ್ ಬಳಸಿ ಅವರ ಹೆಸರಿನಲ್ಲಿ ವಂಚನೆ (fraud) ಮಾಡುವ ಪ್ರಕರಣಗಳು ಕೂಡ ಜಾಸ್ತಿ ಆಗುತ್ತಿದೆ.

ಆಧಾರ್ ಕಾರ್ಡ್ ಬಳಸಿ ಹೆಚ್ಚು ಸಿಮ್ ಕಾರ್ಡ್ (sim card) ಖರೀದಿ ಮಾಡುವುದು ಅಥವಾ ವ್ಯಕ್ತಿಯ ಹೆಸರಿನಲ್ಲಿ ಜಮೀನು ಆಸ್ತಿ (Property) ಇದ್ದರೆ ಆತನ ಆಧಾರ್ ಕಾರ್ಡ್ ಬಳಸಿಕೊಂಡು ಆತನಿಗೆ ಗೊತ್ತಿಲ್ಲದ ಹಾಗೆ ಅದನ್ನು ಮಾರಾಟ ಮಾಡುವುದು, ಒಬ್ಬ ವ್ಯಕ್ತಿಯ ಖಾತೆಯಲ್ಲಿ (Bank Account) ಇರುವ ಹಣವನ್ನು ಲಪಟಾಯಿಸುವುದು..

ಹೀಗೆ ಒಂದಲ್ಲ ಒಂದು ಪ್ರಕರಣಗಳು ಇತ್ತಿಚೆಗೆ ದಾಖಲಾಗಿದೆ, ಆದ್ದರಿಂದ ಆಧಾರ್ ಕಾರ್ಡ್ ಎನ್ನುವುದನ್ನು ಕೇವಲ ಆಧಾರವಾಗಿಟ್ಟುಕೊಳ್ಳುವುದು ಮಾತ್ರವಲ್ಲದೆ ಅದು ಬೇರೆಯವರ ಕೈಗೆ ಸುಲಭವಾಗಿ ಸಿಗದಂತೆ ಕಾಪಾಡಿಕೊಳ್ಳುವುದು ಕೂಡ ಬಹಳ ಮುಖ್ಯ.

ಆದ್ದರಿಂದ ಸರ್ಕಾರವು ಕೂಡ ಈಗಾಗಲೇ ಆಧಾರ್ ಕಾರ್ಡ್ ಬಗ್ಗೆ ಸಾಕಷ್ಟು ಹೊಸ ಅಪ್ಡೇಟ್ಗಳನ್ನು (Aadhar Card update) ಕೂಡ ನೀಡಿದೆ, ಜೊತೆಗೆ 10 ವರ್ಷ ಹಳೆಯದಾದ ಆಧಾರ್ ಕಾರ್ಡ್ ಅನ್ನು ಬಳಸುತ್ತಿದ್ದರೆ ಅದರಲ್ಲಿ ಫೋಟೋ ಅಥವಾ ವಿಳಾಸ ಬದಲಾವಣೆ ಮಾಡಿಕೊಳ್ಳಲು ತಿಳಿಸಿದೆ, ಇದರಿಂದಾಗಿ ವಂಚನೆ ನಡೆಯುವ ಸಾಧ್ಯತೆ ಕಡಿಮೆ ಎನ್ನಬಹುದು.

ಹೊಸ ಪೋಸ್ಟ್ ಆಫೀಸ್ ಸ್ಕೀಮ್; 5 ಸಾವಿರಕ್ಕೆ ಪಡೆಯಬಹುದು 3 ಲಕ್ಷ ರೂಪಾಯಿ ರಿಟರ್ನ್ಸ್

ವ್ಯಕ್ತಿ ಮರಣದ ನಂತರ ಆಧಾರ್ ಕಾರ್ಡ್ ಏನಾಗುತ್ತೆ?

Aadhaar Card
Image Source: Mint

ಒಬ್ಬ ವ್ಯಕ್ತಿ ಮರಣ ಹೊಂದಿದರೆ ಆತನ ಆಧಾರ್ ಕಾರ್ಡ್ ಏನಾಗುತ್ತೆ ಎಂಬುದರ ಬಗ್ಗೆ ಹಲವರಿಗೆ ಮಾಹಿತಿ ಇಲ್ಲ, ಈ ಲೇಖನದಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲಾಗಿದೆ. ಮುಂದೆ ಓದಿ.

ಒಬ್ಬ ವ್ಯಕ್ತಿ ಮರಣ ಹೊಂದಿದ ನಂತರ ಆತನ ಆಧಾರ್ ಕಾರ್ಡ್ ಅನ್ನು ರದ್ದುಪಡಿಸುವುದಿಲ್ಲ ಹಾಗಂದ ಮಾತ್ರಕ್ಕೆ ಆ ಆಧಾರ್ ಕಾರ್ಡ್ ವಂಚಕರ ಕೈಗೆ ಸಿಕ್ಕರೆ ಮರಣ ಹೊಂದಿದವನ (after death) ಹೆಸರಿನಲ್ಲಿಯೇ ವಂಚನೆ ಮಾಡುವ ಸಾಧ್ಯತೆ ಇರುತ್ತದೆ.

ಹೀಗಾಗಿ ಆಧಾರ್ ಕಾರ್ಡ್ ಅನ್ನು ವ್ಯಕ್ತಿ ಮರಣ ಹೊಂದಿದ ನಂತರ ಆಧಾರ್ ಕಾರ್ಡ್ ಕೇಂದ್ರಕ್ಕೆ ಸರೆಂಡರ್ ಮಾಡಬಹುದು. ಆಧಾರ್ ಕಾರ್ಡ್ ರದ್ದು ಪಡಿ ಮಾಡಲು ನಿಯಮಗಳು ಇಲ್ಲ. ಮಾಡಿದರೆ ಆಗ ಆ ಆಧಾರ್ ಕಾರ್ಡನ್ನು ಬೇರೆಯವರು ಬಳಸಿಕೊಳ್ಳಲು ಸಾಧ್ಯವಿಲ್ಲ.

60 ವರ್ಷ ಮೇಲ್ಪಟ್ಟ ಜನರಿಗೆ ಕೇಂದ್ರದಿಂದ ಆನ್ಲೈನ್ ಮೂಲಕವೇ ಹೊಸ ಸೇವೆ ಆರಂಭ

ಆಧಾರ್ ಕಾರ್ಡ್ ಲಾಕ್ ಮಾಡಿ!

Aadhaar Card Lock and Unlockವ್ಯಕ್ತಿ ಮರಣ ಹೊಂದಿದ ನಂತರ ಆಧಾರ್ ಕಾರ್ಡ್ ಸರೆಂಡರ್ ಮಾಡುವುದು ಕಡ್ಡಾಯವಲ್ಲ. ಆದರೆ ಒಂದು ವೇಳೆ ಬೇರೆಯವರ ಕೈಗೆ ಸಿಕ್ಕರೆ ವಂಚನೆ ಆಗುವ ಸಾಧ್ಯತೆ ಇದೆ, ಹಾಗಾಗಿ ಆಧಾರ್ ಕಾರ್ಡ್ ಅನ್ನು ಕಳೆದುಕೊಂಡರೆ ಅಥವಾ ವ್ಯಕ್ತಿಯ ಮರಣ ಆಗಿದ್ದರೆ ಆ ಆಧಾರ್ ಕಾರ್ಡನ್ನು ಆನ್ಲೈನ್ ನಲ್ಲಿಯೇ ಲಾಕ್ (lock) ಮಾಡಿಕೊಳ್ಳಲು ಸಾಧ್ಯವಿದೆ.

ಲಾಕ್ ಮಾಡಿದರೆ ಬಯೋಮೆಟ್ರಿಕ್ (biometric) ಆಧಾರದ ಮೇಲೆ ಅನ್ಲಾಕ್ (unlock) ಮಾಡಬೇಕು ಹಾಗಾಗಿ ಒಮ್ಮೆ ಲಾಕ್ ಆದ ಆಧಾರ್ ಕಾರ್ಡ್ ಅನ್ನು ಸುಲಭವಾಗಿ ಅನ್ಲಾಕ್ ಮಾಡಲು ಸಾಧ್ಯವಿಲ್ಲ.

https://www.uidai.gov.in/ ವೆಬ್ಸೈಟ್ನಲ್ಲಿ ನೀವು ಆಧಾರ್ ಕಾರ್ಡ್ ಲಾಕ್ ಮಾಡಿಕೊಳ್ಳಬಹುದು. ಲಾಕ್ ಮಾಡಲು ಕೇಳಿದ ಮಾಹಿತಿಗಳನ್ನು ಭರ್ತಿ ಮಾಡಿ ನಿಮ್ಮ ರಿಜಿಸ್ಟರ್ ಮೊಬೈಲ್ ಗೆ ಒಂದು ಓಟಿಪಿ ಬರುತ್ತದೆ. ಆ ಓಟಿಪಿಯನ್ನು ನಮೂದಿಸಿದ್ರೆ ಆಧಾರ್ ಕಾರ್ಡ್ ಲಾಕ್ ಆಗುತ್ತದೆ. ಅದನ್ನು ಮತ್ತೆ ಯಾರು ಬಳಸಲು ಸಾಧ್ಯವಿಲ್ಲ.

Do you know what happens to a person’s Aadhaar card after he dies, Here is important information

Follow us On

FaceBook Google News

Do you know what happens to a person's Aadhaar card after he dies, Here is important information