2013ನೇ ಇಸವಿಗೂ ಮೊದಲು ಆಧಾರ್ ಕಾರ್ಡ್ ಮಾಡಿಸಿದ್ರೆ ತಕ್ಷಣ ಈ ಕೆಲಸ ಮಾಡಿ! ಇಲ್ಲದಿದ್ದರೆ ರದ್ದಾಗುತ್ತೆ
ಆಧಾರ್ ಕಾರ್ಡ್ ಅಪ್ಡೇಟ್ (Aadhaar Card update) ಮಾಡಿಕೊಳ್ಳದೆ ಇದ್ದಲ್ಲಿ ಬ್ಯಾಂಕಿಂಗ್ (Banking) ಸೆಕ್ಟರ್ ನಲ್ಲಿ, ಪೋಸ್ಟ್ ಆಫೀಸ್ (post office), ಮ್ಯೂಚುವಲ್ ಫಂಡ್ (mutual fund) ಮೊದಲಾದ ಯಾವುದೇ ರೀತಿಯ ಹೂಡಿಕೆ ಮಾಡಲು ಸಾಧ್ಯವಾಗುವುದಿಲ್ಲ.
ಭಾರತೀಯ ನಾಗರಿಕನಿಗೆ ಪ್ರಮುಖವಾಗಿರುವ ಆಧಾರವೇ ಆಧಾರ್ ಕಾರ್ಡ್ (Aadhaar Card) ಆಗಿದೆ. ಆಧಾರ್ ಕಾರ್ಡ್ ದಾಖಲೆಯನ್ನು ಕೊಟ್ಟು ನಾವು ಸರ್ಕಾರಿ ಕೆಲಸಗಳನ್ನು ಆಗಲಿ ಅಥವಾ ಸರ್ಕಾರೇತರ ಕೆಲಸಗಳನ್ನು ಆಗಲಿ ಮಾಡಿಕೊಳ್ಳಬಹುದು.
ಒಂದು ವೇಳೆ ಆಧಾರ್ ಕಾರ್ಡ್ ಇಲ್ಲದೆ ಇದ್ರೆ ನಮ್ಮ ಯಾವ ಕೆಲಸಗಳು ಕೂಡ ಆಗುವುದಿಲ್ಲ, ಯಾಕೆಂದರೆ ಅದನ್ನೇ ಪ್ರಮುಖ ದಾಖಲೆಗಳನ್ನು ನೀಡಬೇಕಾಗುತ್ತದೆ.
ನಮ್ಮ ದೇಶದಲ್ಲಿ ಐದು ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಕೂಡ ಆಧಾರ್ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿದೆ. ಆಧಾರ್ ಕಾರ್ಡ್ ಗೆ ಸಂಬಂಧಪಟ್ಟ ಹಾಗೆ ಇದೀಗ ಹೊಸ ಅಪ್ಡೇಟ್ ನೀಡಲಾಗಿದ್ದು ಯಾರ ಬಳಿ 10 ವರ್ಷ ಹಳೆಯದಾದ ಆಧಾರ್ ಕಾರ್ಡ್ ಇರುತ್ತದೆಯೋ ಅಥವಾ ಆಧಾರ್ ಕಾರ್ಡ್ ಪಡೆದುಕೊಂಡು ಹತ್ತು ವರ್ಷ ಕಳೆದಿದೆಯೋ ಅಂತವರು ತಕ್ಷಣವೇ ಈ ಕೆಲಸ ಮಾಡಬೇಕು
ಇಲ್ಲವಾದರೆ ಮುಂದೆ ಆಧಾರ್ ಕಾರ್ಡ್ ಬಳಸಿ ಯಾವ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ ಹಾಗೂ ಯಾವ ಸರ್ಕಾರಿ ಕೆಲಸಗಳನ್ನು ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.
ಹೊಸ ಪೋಸ್ಟ್ ಆಫೀಸ್ ಸ್ಕೀಮ್; 5 ಸಾವಿರಕ್ಕೆ ಪಡೆಯಬಹುದು 3 ಲಕ್ಷ ರೂಪಾಯಿ ರಿಟರ್ನ್ಸ್
ಆಧಾರ್ ಕಾರ್ಡ್ ನವೀಕರಣ – Aadhaar Card Update
ಹತ್ತು ವರ್ಷಕ್ಕಿಂತ ಮೊದಲು ಆಧಾರ್ ಕಾರ್ಡ್ ಪಡೆದುಕೊಂಡಿದ್ದರೆ ಈಗ ಅದನ್ನ ನವೀಕರಣ ಮಾಡುವ ಸಮಯ, ಈಗಾಗಲೇ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಲು ಸರ್ಕಾರ ಅವಕಾಶ ನೀಡಿತ್ತು, ಈಗ ಇದರ ಗಡುವು ವಿಸ್ತರಣೆ ಕೂಡ ಮಾಡಲಾಗಿದ್ದು, ಡಿಸೆಂಬರ್ 14ರವರೆಗೆ ಆಧಾರ್ ಕಾರ್ಡ್ ನವೀಕರಣಕ್ಕೆ ಅವಕಾಶ ಮಾಡಿಕೊಡಲಾಗಿದೆ.
ನೀವು ಆಧಾರ್ ಕೇಂದ್ರಕ್ಕೆ ಹೋಗಿ ಅಪ್ಡೇಟ್ ಮಾಡಿಕೊಂಡು ಬರಬಹುದು ಅಥವಾ ಆನ್ಲೈನ್ ನಲ್ಲಿಯೂ ಆಧಾರ್ ಅಪ್ಡೇಟ್ ಮಾಡಲು ಅವಕಾಶವಿದೆ.
ಆಧಾರ್ ಅಪ್ಡೇಟ್ ಮಾಡದೇ ಇದ್ರೆ ಎದುರಿಸಬೇಕು ಸಮಸ್ಯೆ!
10 ವರ್ಷಕ್ಕಿಂತ ಹಳೆಯ ಆಧಾರ್ ಕಾರ್ಡನ್ನು ನೀವು ಹೊಂದಿದ್ದರೆ ಅದರಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ ಉದಾಹರಣೆಗೆ, ಆಧಾರ್ ಕಾರ್ಡ್ ನಲ್ಲಿ ಇರುವ ಫೋಟೋ ಬದಲಾವಣೆ, ಅಡ್ರೆಸ್ ಬದಲಾವಣೆಯಂತಹ ಪ್ರಮುಖ ಕೆಲಸಗಳನ್ನು ಮಾಡಿಕೊಳ್ಳಬೇಕು.
ಒಂದು ವೇಳೆ ಆಧಾರ್ ಕಾರ್ಡ್ ಅಪ್ಡೇಟ್ (Aadhaar Card update) ಮಾಡಿಕೊಳ್ಳದೆ ಇದ್ದಲ್ಲಿ ಬ್ಯಾಂಕಿಂಗ್ (Banking) ಸೆಕ್ಟರ್ ನಲ್ಲಿ, ಪೋಸ್ಟ್ ಆಫೀಸ್ (post office), ಮ್ಯೂಚುವಲ್ ಫಂಡ್ (mutual fund) ಮೊದಲಾದ ಯಾವುದೇ ರೀತಿಯ ಹೂಡಿಕೆ ಮಾಡಲು ಸಾಧ್ಯವಾಗುವುದಿಲ್ಲ.
ಬ್ಯಾಂಕ್ ನಲ್ಲಿ ಒಂದು ಹೊಸ ಖಾತೆ (Bank Account) ತೆರೆಯಲು ಕೂಡ ಆಗುವುದಿಲ್ಲ. ಆದರೆ ಆಧಾರ್ ಕಾರ್ಡ್ ನವೀಕರಣ ಮಾಡಿಸಿಕೊಂಡರೆ ನೀವು ಯಾವುದೇ ಚಿಂತೆ ಇಲ್ಲದೆ ಆಧಾರ್ ಕಾರ್ಡನ್ನು ಆಧಾರವಾಗಿಟ್ಟುಕೊಂಡು ಹಲವು ಕೆಲಸಗಳನ್ನು ಸುಲಭವಾಗಿ ಮಾಡಿಕೊಳ್ಳಬಹುದಾಗಿದೆ.
60 ವರ್ಷ ಮೇಲ್ಪಟ್ಟ ಜನರಿಗೆ ಕೇಂದ್ರದಿಂದ ಆನ್ಲೈನ್ ಮೂಲಕವೇ ಹೊಸ ಸೇವೆ ಆರಂಭ
ಆಧಾರ್ ನವೀಕರಣ ಸಂಪೂರ್ಣ ಉಚಿತ;
ಮುಂಬರುವ ಡಿಸೆಂಬರ್ 14 2023, ವರೆಗೆ ಆಧಾರ್ ಕಾರ್ಡ್ ನವೀಕರಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇನ್ನು ಆಧಾರ್ ಕಾರ್ಡ್ ನವೀಕರಣ ಮಾಡಿಸಿಕೊಳ್ಳಲು ನೀವು ಸೈಬರ್ (cyber centre) ಕೇಂದ್ರಗಳಿಗೆ ಹೋಗಿದ್ರೆ ಕನಿಷ್ಠ 25 ರೂಪಾಯಿಗಳನ್ನ ಆದರೂ ಪಾವತಿ ಮಾಡಬೇಕಿತ್ತು ಆದರೆ ಈಗ ಇದು ಸಂಪೂರ್ಣ ಉಚಿತವಾಗಿದ್ದು ನೀವು ಮನೆಯಲ್ಲಿಯೇ ಕುಳಿತು ಆನ್ಲೈನ್ ಮೂಲಕವೂ ಅಪ್ಡೇಟ್ (online update) ಮಾಡಿಕೊಳ್ಳಬಹುದಾಗಿದೆ, ಹಾಗಾಗಿ ನೀವು ಕೂಡ ಹತ್ತು ವರ್ಷಕ್ಕಿಂತ ಹಳೆಯ ಆಧಾರ್ ಕಾರ್ಡ್ ಹೊಂದಿದ್ರೆ ತಕ್ಷಣವೇ ಅಗತ್ಯವಿರುವ ಬದಲಾವಣೆಗಳನ್ನು ಮಾಡಿಕೊಳ್ಳಿ.
If Aadhaar card was made before 2013, do this immediately