ಕಸದ ತೊಟ್ಟಿಯಲ್ಲಿ 17 ಭ್ರೂಣಗಳು
ಪಶ್ಚಿಮ ಬಂಗಾಳದ ಹೌರಾದಲ್ಲಿ ಧಾರುಣ ನಡೆದಿರುವುದು ಬೆಳಕಿಗೆ ಬಂದಿದೆ. ಹೌರಾ ನಗರದ ಉಲುಬೇರಿಯಾ ಮುನ್ಸಿಪಾಲಿಟಿಯ ಕಸದ ತೊಟ್ಟಿಯಲ್ಲಿ ಭ್ರೂಣಗಳು ಪತ್ತೆಯಾಗಿವೆ.
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಹೌರಾದಲ್ಲಿ ಧಾರುಣ ನಡೆದಿರುವುದು ಬೆಳಕಿಗೆ ಬಂದಿದೆ. ಹೌರಾ ನಗರದ ಉಲುಬೇರಿಯಾ ಮುನ್ಸಿಪಾಲಿಟಿಯ ಕಸದ ತೊಟ್ಟಿಯಲ್ಲಿ ಭ್ರೂಣಗಳು ಪತ್ತೆಯಾಗಿವೆ. ಸ್ಥಳೀಯರು ಕಸದಲ್ಲಿ ಭ್ರೂಣಗಳನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಳಿಕ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ 17 ಭ್ರೂಣಗಳನ್ನು ವಶಪಡಿಸಿಕೊಂಡಿದ್ದಾರೆ.ಅವುಗಳಲ್ಲಿ ಹತ್ತು ಹೆಣ್ಣು ಮತ್ತು ಏಳು ಗಂಡು ಎಂದು ತಿಳಿದುಬಂದಿದೆ. ಅವುಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ.
ಉಲುಬೇರಿಯಾದಲ್ಲಿ 30 ಖಾಸಗಿ ನರ್ಸಿಂಗ್ ಹೋಂಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಭ್ರೂಣಗಳನ್ನು ವೈದ್ಯಕೀಯ ತ್ಯಾಜ್ಯವಾಗಿ ಎಸೆಯಲಾಗಿದೆಯೇ ಅಥವಾ ಇನ್ನೇನಾದರೂ ಕಾರಣವೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು. ಘಟನೆಯ ಕುರಿತು ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಹೆಚ್ಚಿನ ವಿವರ ತಿಳಿಯುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.
17 fetuses found dumped in uluberia in west bengal
Follow us On
Google News |
Advertisement