ಮಧ್ಯರಾತ್ರಿ ಲಕ್ನೋದಲ್ಲಿ ಭೂಕಂಪ.. 5.2 ತೀವ್ರತೆ
ಉತ್ತರ ಪ್ರದೇಶದ ಲಕ್ನೋದಲ್ಲಿ ಮಧ್ಯರಾತ್ರಿ ಭಾರೀ ಭೂಕಂಪ ಸಂಭವಿಸಿದೆ.
ಲಕ್ನೋ: ಉತ್ತರ ಪ್ರದೇಶದ ಲಕ್ನೋದಲ್ಲಿ ಮಧ್ಯರಾತ್ರಿ ಭಾರೀ ಭೂಕಂಪ ಸಂಭವಿಸಿದೆ. ಶನಿವಾರ ನಸುಕಿನ 1.12ರ ಸುಮಾರಿಗೆ ಲಕ್ನೋದಲ್ಲಿ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.
ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 5.2 ದಾಖಲಾಗಿದೆ. ಭೂಕಂಪದ ಕೇಂದ್ರವು ಲಕ್ನೋದಿಂದ 139 ಕಿಮೀ ದೂರದಲ್ಲಿದೆ ಮತ್ತು 82 ಕಿಮೀ ಒಳನಾಡಿನ ಆಳದಲ್ಲಿ ಕಂಪನಗಳು ಸಂಭವಿಸಿವೆ.
ನಡುರಾತ್ರಿಯಲ್ಲಿ ಭೂಮಿ ಕಂಪಿಸಿದ್ದು, ಜನ ಬೆಚ್ಚಿಬಿದ್ದಿದ್ದಾರೆ. ಮನೆಯಿಂದ ರಸ್ತೆಗಳಿಗೆ ಓಡಿದ್ದಾರೆ. ಏತನ್ಮಧ್ಯೆ, ಭೂಕಂಪದಿಂದ ಉಂಟಾದ ಹಾನಿಯ ಬಗ್ಗೆ ಇನ್ನೂ ಮಾಹಿತಿ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
Earthquake of Magnitude:5.2, Occurred on 20-08-2022, 01:12:47 IST, Lat: 28.07 & Long: 81.25, Depth: 82 Km ,Location: 139km NNE of Lucknow, Uttar Pradesh, India for more information Download the BhooKamp App https://t.co/4JI5H8kFoA@Indiametdept @ndmaindia pic.twitter.com/QlaEgrtsSF
— National Center for Seismology (@NCS_Earthquake) August 19, 2022
ಶುಕ್ರವಾರ ಮಧ್ಯಾಹ್ನ ಉತ್ತರಾಖಂಡದ ಪಿಥೋರಾಗ್ರಾಫ್‌ನಲ್ಲಿಯೂ ಭೂಕಂಪ ಸಂಭವಿಸಿದೆ. ಮಧ್ಯಾಹ್ನ 12.55 ಗಂಟೆಗೆ, ಪಿಥೋರೋಗ್ರಾಫ್‌ನಲ್ಲಿ ಭೂಕಂಪವು 3.6 ರ ತೀವ್ರತೆಯನ್ನು ದಾಖಲಿಸಿದೆ ಎಂದು ಎನ್‌ಸಿಎಸ್ ಹೇಳಿದೆ. ಜಮ್ಮು ಮತ್ತು ಕಾಶ್ಮೀರದ ಹನ್ಲೆಯಲ್ಲೂ ಭೂಮಿ ನಡುಗಿದೆ. ಇದರ ತೀವ್ರತೆಯನ್ನು 3.1 ಎಂದು ದಾಖಲಿಸಲಾಗಿದೆ.
5.2 magnitude earthquake jolts up lucknow
Follow us On
Google News |
Advertisement