ಬೆಡ್‌ಶೀಟ್ ಮತ್ತು ಲುಂಗಿಯನ್ನೇ ಹಗ್ಗ ಮಾಡಿಕೊಂಡು ಜೈಲಿನ ಗೋಡೆ ಹಾರಿ ಕೈದಿಗಳು ಪರಾರಿ
20 ಅಡಿ ಎತ್ತರದ ಜೈಲಿನ ಗೋಡೆ ಹಾರಿ ಕೈದಿಗಳು ಪರಾರಿಯಾಗಿದ್ದಾರೆ, ಅಸ್ಸಾಂನ ಮೋರಿಗಾಂವ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಗುವಾಹಟಿ: ಬೆಡ್‌ಶೀಟ್ ಮತ್ತು ಲುಂಗಿಗಳನ್ನು ಹಗ್ಗವಾಗಿ ಮಾಡಿಕೊಂಡು, 20 ಅಡಿ ಎತ್ತರದ ಜೈಲಿನ ಗೋಡೆ ಹಾರಿ ಕೈದಿಗಳು ಪರಾರಿಯಾಗಿದ್ದಾರೆ. ಇದನ್ನು ತಿಳಿದ ಜೈಲು ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ.
ಅಸ್ಸಾಂನ ಮೋರಿಗಾಂವ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. (Assam Prison break) ಅಕ್ಟೋಬರ್ 11 ರ ಮುಂಜಾನೆ, ಐದು ಕೈದಿಗಳು ಜೈಲಿನ ಕಂಬಿಗಳನ್ನು ಮುರಿದು ಪರಾರಿಯಾಗಿದ್ದಾರೆ. ಬೆಡ್ ಶೀಟ್, ಬ್ಲಾಂಕೆಟ್, ಲುಂಗಿ ಬಳಸಿ 20 ಅಡಿ ಎತ್ತರದ ಜೈಲಿನ ಗೋಡೆ ಹಾರಿ ಪರಾರಿಯಾಗಿದ್ದಾರೆ.
ಜೈಲಲ್ಲಿ ರಾಮಲೀಲಾ ನಾಟಕ, ವಾನರ ವೇಷ ಆಕಿದ್ದ ಕೈದಿಗಳು ಏಣಿ ಹತ್ತಿ ಪರಾರಿ, ಜೈಲಿನ ಗೋಡೆ ಹಾರಿ ಎಸ್ಕೇಪ್
ಜೈಲಿನಿಂದ ಪರಾರಿಯಾಗಿರುವ ಕೈದಿಗಳನ್ನು ಸೈಫುದ್ದೀನ್, ಜಿಯಾರುಲ್ ಇಸ್ಲಾಂ, ನೂರ್ ಇಸ್ಲಾಂ, ಮಫಿದುಲ್ ಮತ್ತು ಅಬ್ದುಲ್ ರಶೀದ್ ಎಂದು ಗುರುತಿಸಲಾಗಿದೆ.
ಸೋನಿತ್‌ಪುರ ಜಿಲ್ಲೆಯ ತೇಜ್‌ಪುರ, ಮೊರಿಗಾಂವ್ ಜಿಲ್ಲೆಯ ಲಾಹೋರಿಘಾಟ್ ಮತ್ತು ಮೊಯಿರಾಬರಿಯ ಐವರು ನಿವಾಸಿಗಳು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯಲ್ಲಿ ಬಂಧಿತ ವಿಚಾರಣಾಧೀನ ಕೈದಿಗಳಾಗಿ ಜೈಲಿನಲ್ಲಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Viral Video: ಜಿಂಕೆ ಮರಿಯನ್ನು ನುಂಗಿದ ಹೆಬ್ಬಾವು, ಆಮೇಲೆ ಆಗಿದ್ದೇನು? ಇಲ್ಲಿದೆ ವೈರಲ್ ವಿಡಿಯೋ
ಘಟನೆಯ ಕುರಿತು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದೆ. ಜೈಲರ್ ಪ್ರಶಾಂತ್ ಸೈಕಿಯಾ ಅವರನ್ನು ಅಮಾನತುಗೊಳಿಸಲಾಗಿದೆ. ಪರಾರಿಯಾಗಿರುವ ಕೈದಿಗಳನ್ನು ಬಂಧಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
5 Prisoners Scale 20 Foot Wall With Bedsheets Lungis Daring Prison Break In Assam