ಜೈಲಲ್ಲಿ ರಾಮಲೀಲಾ ನಾಟಕ, ವಾನರ ವೇಷ ಆಕಿದ್ದ ಕೈದಿಗಳು ಏಣಿ ಹತ್ತಿ ಪರಾರಿ, ಜೈಲಿನ ಗೋಡೆ ಹಾರಿ ಎಸ್ಕೇಪ್

Story Highlights

Prisoners Escape : ಏಣಿಗಳನ್ನು ಹತ್ತಿ ಜೈಲಿನ ಗೋಡೆಯ ಮೇಲೆ ಹಾರಿ ಕೈದಿಗಳು ಎಸ್ಕೇಪ್ ಆಗಿದ್ದಾರೆ, ಉತ್ತರಾಖಂಡದ ಹರಿದ್ವಾರದಲ್ಲಿ ಈ ಘಟನೆ ನಡೆದಿದೆ.

Prisoners Escape (ಡೆಹ್ರಾಡೂನ್) : ವಿಜಯದಶಮಿ ಆಚರಣೆ ವೇಳೆ ಜೈಲಿನಲ್ಲಿ ರಾಮಲೀಲಾ ನಾಟಕ ಪ್ರದರ್ಶಿಸಲಾಯಿತು. ವಾನರ ಸೇನೆಯ ಭಾಗವಾಗಿ ವಾನರ ವೇಷದಲ್ಲಿದ್ದ ಇಬ್ಬರು ಕೈದಿಗಳು ಜೈಲಿನಿಂದ ಪರಾರಿಯಾಗಿದ್ದಾರೆ.

ಏಣಿಗಳನ್ನು ಹತ್ತಿ ಜೈಲಿನ ಗೋಡೆಯ ಮೇಲೆ ಹಾರಿ ಕೈದಿಗಳು ಎಸ್ಕೇಪ್ ಆಗಿದ್ದಾರೆ, ಉತ್ತರಾಖಂಡದ ಹರಿದ್ವಾರದಲ್ಲಿ ಈ ಘಟನೆ ನಡೆದಿದೆ. ದಸರಾ ಸಂದರ್ಭದಲ್ಲಿ ಶುಕ್ರವಾರ ಸಂಜೆ ಹರಿದ್ವಾರ ಜೈಲಿನ ಕೆಲವು ಕೈದಿಗಳು ರಾಮಲೀಲಾ ನಾಟಕವನ್ನು ಪ್ರದರ್ಶಿಸಿದರು. ಕೆಲವು ಕೈದಿಗಳು ರಾವಣನ ವಿರುದ್ಧದ ವಿಜಯದಲ್ಲಿ ರಾಮನಿಗೆ ಸಹಾಯ ಮಾಡಿದ ವಾನರ ಸೇನೆಯ ಪಾತ್ರಗಳಲ್ಲಿ ನಟಿಸಿದ್ದಾರೆ.

Viral Video: ಜಿಂಕೆ ಮರಿಯನ್ನು ನುಂಗಿದ ಹೆಬ್ಬಾವು, ಆಮೇಲೆ ಆಗಿದ್ದೇನು? ಇಲ್ಲಿದೆ ವೈರಲ್ ವಿಡಿಯೋ

ಇದೇ ವೇಳೆ ಜೈಲು ಅಧಿಕಾರಿಗಳು, ಸಿಬ್ಬಂದಿ, ಭದ್ರತಾ ಸಿಬ್ಬಂದಿ ರಾಮಲೀಲಾ ನಾಟಕ ನೋಡುವುದರಲ್ಲಿ ಮಗ್ನರಾಗಿದ್ದರು. ಈ ಹಿನ್ನೆಲೆಯಲ್ಲಿ ವಾನರ ವೇಷದಲ್ಲಿದ್ದ ಇಬ್ಬರು ಕೈದಿಗಳು ಅಲ್ಲಿಂದ ನಿಧಾನವಾಗಿ ಪರಾರಿಯಾಗಿದ್ದಾರೆ. ಜೈಲು ಆವರಣದಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿದ್ದ ಏಣಿಗಳ ಮೂಲಕ ಗೋಡೆ ಹಾರಿ ಪರಾರಿಯಾಗಿದ್ದಾರೆ.

ಮತ್ತೊಂದೆಡೆ, ಉತ್ತರ ಪ್ರದೇಶದ ಇಬ್ಬರು ಕೈದಿಗಳು ಜೈಲಿನಿಂದ ಪರಾರಿಯಾಗಿರುವುದು ತಡವಾಗಿ ಜೈಲು ಅಧಿಕಾರಿಗಳಿಗೆ ತಿಳಿದುಬಂದಿದೆ. ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಪ್ರಮೋದ್, ಅಪಹರಣ ಮತ್ತು ಸುಲಿಗೆ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿರುವ ರಾಮಕುಮಾರ್ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

Video : ದೆಹಲಿ ಕಾರ್ಖಾನೆಯೊಂದರಲ್ಲಿ ಭಾರೀ ಅಗ್ನಿ ಅವಘಡ, ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿ

ಅವರನ್ನು ಹುಡುಕಲು ಕಾರ್ಯಾಚರಣೆ ನಡೆಯುತ್ತಿದೆ. ಇದೇ ವೇಳೆ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಆರು ಮಂದಿ ಜೈಲು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಸಿಎಂ ಪುಷ್ಕರ್ ಸಿಂಗ್ ಧಾಮಿ ಕೂಡ ಘಟನೆಯ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ.

Prisoners who acted as monkeys in Ram Leela play escaped

Related Stories