India News

8ನೇ ತರಗತಿ ಪಾಸ್ ಆಗಿದ್ರೆ ಸಾಕು ಒಳ್ಳೆಯ ಸಂಬಳ ಸಿಗುವ ಸರ್ಕಾರಿ ಕೆಲಸ, ಇಂದೇ ಅಪ್ಲೈ ಮಾಡಿ

ಪೋಸ್ಟ್ ಆಫೀಸ್ ನ ಕೆಲಸಗಳು ಸೆಂಟ್ರಲ್ ಗವರ್ನಮೆಂಟ್ ಹುದ್ದೆಗಳಾಗಿದೆ (Central Govt job). ಇಲ್ಲಿ ಕೆಲಸ ಸಿಕ್ಕರೆ, ಜೀವನ ಸೆಟ್ಲ್ ಆದ ಹಾಗೆ ಎಂದು ಹೇಳಬಹುದು. ಹಾಗಾಗಿ ಹೆಚ್ಚಿನ ಜನರು ಪೋಸ್ಟ್ ಆಫೀಸ್ ನಲ್ಲಿ ಕೆಲಸ (Post Office Job) ಪಡೆಯಬೇಕು ಎಂದು ಬಯಸುತ್ತಾರೆ.

ಇದೀಗ ಪೋಸ್ಟ್ ಆಫೀಸ್ ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತಿ ಇರುವವರು ಇಂದೇ ಅಪ್ಲೈ ಮಾಡಬಹುದು. ಪ್ರಸ್ತುತ 3 ಮೋಟರ್ ವೆಹಿಕಲ್ ಮೆಕ್ಯಾನಿಕ್ (ನುರಿತ ಕುಶಲಕರ್ಮಿ ಗ್ರೇಡ್ III) ಹುದ್ದೆಗಳು ಖಾಲಿ ಇದೆ.

8th class pass is enough for Central Govt job with salary of 63,000

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವವರು, 2023ರ ಸೆಪ್ಟೆಂಬರ್ 19ರ ಒಳಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಹಾಕಲು ಎರಡು ವಿಧಾನ ಇದ್ದು, ಆನ್ಲೈನ್ ಮತ್ತು ಪೋಸ್ಟ್ ಎರಡು ರೀತಿಯಲ್ಲಿ ಅರ್ಜಿ ಸಲ್ಲಿಸಬಹುದು.

ಒಂದು ವೇಳೆ ನಿಮಗೂ ಕೇಂದ್ರ ಸರ್ಕಾರದ (Government Job) ಉದ್ಯೋಗ ಬೇಕು ಎನ್ನುವ ಹಂಬಲ ಇದ್ದರೆ ಇಂದೇ ಅರ್ಜಿ ಸಲ್ಲಿಸಿ (Apply For Post Office Vacancy). ಈ ಕೆಲಸಕ್ಕೆ ಬೇಕಿರುವ ಅರ್ಹತೆ ಮತ್ತು ಇನ್ನಿತರ ಮಾಹಿತಿಗಳ ಬಗ್ಗೆ ಈಗ ತಿಳಿಸಿಕೊಡುತ್ತೇವೆ ನೋಡಿ..

3 ಮೋಟರ್ ಮೆಕ್ಯಾನಿಕ್ ಹುದ್ದೆ ಖಾಲಿ ಇರುವುದು, MMS ಭೋಪಾಲ್ ನಲ್ಲಿ 2 ಹುದ್ದೆ, MMS ಇಂದೋರ್ ನಲ್ಲಿ 1 ಹುದ್ದೆ ಖಾಲಿ ಇದೆ. ಈ ಕೆಲಸಕ್ಕೆ ಅಗತ್ಯವಿರುವ ವಿದ್ಯಾರ್ಹತೆ ಬಗ್ಗೆ ಹೇಳುವುದಾದರೆ, ಅಂಚೆ ಇಲಾಖೆಯ ಸೂಚನೆಯ ಅನುಸಾರ ಮಾನ್ಯತೆ ಪಡೆದಿರುವ ಶಾಲೆಯಿಂದ 8ನೇ ತರಗತಿ ಪಾಸ್ ಆಗಿದ್ದರೆ ಸಾಕು.

India Post Recruitment 2023, Check The Government Job Details Hereಇನ್ನು ವಯೋಮಿತಿ ಬಗ್ಗೆ ಹೇಳುವುದಾದರೆ, 2023ರ ಜುಲೈ 1 ಕ್ಕೆ ಅಭ್ಯರ್ಥಿಯ ವಯಸ್ಸು 18 ರಿಂದ 30 ವರ್ಷಗಳ ಒಳಗೆ ಇರಬೇಕು.

ಆದರೆ ಸೂಚನೆಯ ಪ್ರಕಾರ ವಯೋಮಿತಿ ಸಡಿಲಿಕೆ ಇದೆ. ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ, SC/ST ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇದೆ.

ಈ ಕೆಲಸಕ್ಕೆ ಸಿಗಬಹುದಾದ ತಿಂಗಳ ವೇತನದ ಬಗ್ಗೆ ಹೇಳುವುದಾದರೆ, ₹19,900 ಇಂದ ₹63,000 ರೂಪಾಯಿಗಳ ವರೆಗು ತಿಂಗಳ ವೇತನ ಸಿಗುತ್ತದೆ. ಈ ಕೆಲಸಕ್ಕೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಇಂದೋರ್ ಅಥವಾ ಭೂಪಾಲ್ ನಲ್ಲಿ ಪೋಸ್ಟಿಂಗ್ ಸಿಗುತ್ತದೆ.

ಕೆಲಸಕ್ಕೆ ಆಯ್ಕೆ ಮಾಡಿಕೊಳ್ಳುವುದು ಸ್ಪರ್ಧಾತ್ಮಕ ಪರೀಕ್ಷೆ ಟ್ರೇಡ್ ಟೆಸ್ಟ್ ಇಂಟರ್ವ್ಯೂ ಮೂಲಕ. 7/8/2023ರಿಂದ ಅರ್ಜಿ ಸಲ್ಲಿಸಲು ಆರಂಭವಾಗಿದ್ದು, ಸೆಪ್ಟೆಂಬರ್ 19ರ ಒಳಗೆ ಅರ್ಜಿ ಸಲ್ಲಿಸಿ. ಹೆಚ್ಚಿನ ಮಾಹಿತಿಗಾಗಿ ಪೋಸ್ಟ್ ಆಫೀಸ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.

8th class pass is enough for Central Govt job with salary of 63,000

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories