8ನೇ ತರಗತಿ ಪಾಸಾದವರಿಗೂ ಸಿಗುತ್ತೆ ಸರ್ಕಾರಿ ಕೆಲಸ; ಇನ್ನೇಕೆ ತಡ, ಈಗಲೇ ಅಪ್ಲೈ ಮಾಡಿ

ಕಡಿಮೆ ವಿದ್ಯಾಭ್ಯಾಸ ಇದ್ದರೂ ಸರ್ಕಾರದ ಸೆಕ್ಯೂರ್ಡ್ ಆಗಿರುವ ಕೆಲಸ ಪಡೆದುಕೊಳ್ಳಬೇಕು ಎನ್ನುವ ಆಸೆ ಇದ್ದವರಿಗೆ ಇದು ಗುಡ್ ನ್ಯೂಸ್. ಭಾರತೀಯ ಅಂಚೆ ಕಚೇರಿ (Indian post office) ಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಕೇವಲ 8ನೇ ತರಗತಿ ಉತ್ತೀರ್ಣರಾಗಿದ್ದವರು ಕೂಡ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಭಾರತೀಯ ಅಂಚೆ ಕಚೇರಿ ಹುದ್ದೆಗಳು (Indian post office recruitment 2024)
ಭಾರತೀಯ ಅಂಚೆ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸದ್ಯ ಒಂದು ಮೋಟಾರ್ ವೆಹಿಕಲ್ ಮೆಕಾನಿಕ್ (motor vehicle mechanic) ಹುದ್ದೆ ಖಾಲಿ ಇದ್ದು, ಜನವರಿ 30, 2024, ಅಂದರೆ ಇವತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಮನೆಯಲ್ಲಿಯೇ ಕುಳಿತು 50 ಸಾವಿರದಿಂದ 1 ಲಕ್ಷ ರೂಪಾಯಿ ಆದಾಯ ಗಳಿಸಿ; ಕೈತುಂಬಾ ಹಣ
ವಿದ್ಯಾರ್ಹತೆ! (Qualification)
ಭಾರತೀಯ ಅಂಚೆ ಇಲಾಖೆ ನೇಮಕಾತಿ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಖಾಲಿ ಇರುವ ಮೋಟಾರ್ ವೆಹಿಕಲ್ ಮೆಕಾನಿಕ್ ಹುದ್ದೆಗೆ ಅರ್ಜಿ ಸಲ್ಲಿಸಲು, ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಕನಿಷ್ಠ 8ನೇ ತರಗತಿ ತೇರ್ಗಡೆ ಹೊಂದಿರಬೇಕು.
ವಯೋಮಿತಿ! (Age limit)
ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆಯ ಪ್ರಕಾರ ಜುಲೈ 1 2013ಕ್ಕೆ 18 ವರ್ಷ ಮೀರಿದ ಹಾಗೂ 30 ವರ್ಷ ದ ಒಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮೀಸಲಾತಿ ಆಧಾರದ ಮೇಲೆ ವಯೋಮಿತಿ ಸಡಿಲಿಕೆ ಇರುತ್ತದೆ.
ನಿಮ್ಮ ಮಗಳ ಭವಿಷ್ಯಕ್ಕಾಗಿ ಹಣ ಉಳಿತಾಯ ಮಾಡಿ, ಬೆಸ್ಟ್ ಪೋಸ್ಟ್ ಆಫೀಸ್ ಸ್ಕೀಮ್
ವೇತನ ಮತ್ತು ಉದ್ಯೋಗ ಸ್ಥಳ! (Salary and placement)
ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಆಯ್ಕೆಯಾದ ಅಭ್ಯರ್ಥಿಗೆ 19,900-63,200 ರೂಪಾಯಿಗಳವರೆಗಿನ ಮಾಸಿಕ ವೇತನ ನೀಡಲಾಗುವುದು. ಆಯ್ಕೆಯಾದ ಅಭ್ಯರ್ಥಿ ಬಿಹಾರದ ಪಾಟ್ನಾದಲ್ಲಿ ಕೆಲಸ ನಿರ್ವಹಿಸಲು ಸಿದ್ಧವಿರಬೇಕು.
ಆಯ್ಕೆ ಪ್ರಕ್ರಿಯೆ! (Selection process)
ಅಭ್ಯರ್ಥಿಯ ಕ್ಯಾಲಿಫಿಕೇಷನ್ ಡ್ರೈವಿಂಗ್ ಲೈಸೆನ್ಸ್ ಹಾಗೂ ಕಾಂಪಿಟೇಟಿವ್ ಟ್ರೇಡ್ ಟೆಸ್ಟ್ ಮೂಲಕ ಆಯ್ಕೆ ಮಾಡಲಾಗುವುದು.
ಸರ್ಕಾರಿ ಉದ್ಯೋಗ; ಕೇವಲ ಕನ್ನಡ ಮಾತಾಡೋಕೆ ಗೊತ್ತಿದ್ರೆ ಸಾಕು! ಅರ್ಜಿ ಸಲ್ಲಿಸಿ
ಅರ್ಜಿ ಸಲ್ಲಿಸುವುದು ಹೇಗೆ? (How to apply)
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಈ ವಿಳಾಸಕ್ಕೆ ಕಳುಹಿಸಿ.
ವಿಳಾಸ ; ವ್ಯವಸ್ಥಾಪಕರ ಕಚೇರಿ
ಮೇಲ್ ಮೋಟಾರ್ ಸೇವೆ
GPO ಕ್ಯಾಂಪಸ್, ಪಾಟ್ನಾ-800001
Last date to apply; ಡಿಸೆಂಬರ್ ತಿಂಗಳಿನಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿತ್ತು. ಜನವರಿ 30, 2024 ಅಂದರೆ ಇಂದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಿ.
8th class passers also get government jobs, apply now
ವೇತನ ಮತ್ತು ಉದ್ಯೋಗ ಸ್ಥಳ! (Salary and placement)






