ನಿಮ್ಮ ಮಗಳ ಭವಿಷ್ಯಕ್ಕಾಗಿ ಹಣ ಉಳಿತಾಯ ಮಾಡಿ, ಬೆಸ್ಟ್ ಪೋಸ್ಟ್ ಆಫೀಸ್ ಸ್ಕೀಮ್

Post Office Savings Scheme : ಅಂಚೆ ಕಚೇರಿ ಯೋಜನೆ (post office scheme) ಯಲ್ಲಿ ಹೂಡಿಕೆ ಮಾಡಿದರೆ ನೀವು ನಿಮ್ಮ ಹೆಣ್ಣು ಮಗಳ ಭವಿಷ್ಯದ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ.

Post Office Savings Scheme : ಅಂಚೆ ಕಚೇರಿ ಯೋಜನೆ (post office scheme) ಯಲ್ಲಿ ಹೂಡಿಕೆ ಮಾಡಿದರೆ ನೀವು ನಿಮ್ಮ ಹೆಣ್ಣು ಮಗಳ ಭವಿಷ್ಯದ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ. ಆಕೆಯ ಉಜ್ವಲ ಭವಿಷ್ಯಕ್ಕೆ, ಆಕೆಯ ಶಿಕ್ಷಣಕ್ಕೆ ಅನುಕೂಲಕರವಾಗುವಂತಹ ಉತ್ತಮ ಯೋಜನೆಗಳನ್ನು ಪೋಸ್ಟ್ ಆಫೀಸ್ ಪರಿಚಯಿಸಿದೆ. ನಿಮ್ಮ ಹೆಣ್ಣು ಮಗುವಿನ ಚಿಕ್ಕ ವಯಸ್ಸಿನಲ್ಲಿ ಆಕೆಯ ಹೆಸರಿನಲ್ಲಿ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಒಳ್ಳೆಯದು.

ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಹೂಡಿಕೆ ಮಾಡಲು ಅಥವಾ ಹಣ ಸಂಗ್ರಹ ಮಾಡಲು ಬಯಸುವ ತಂದೆ ತಾಯಿ ಇನ್ನು ಚಿಂತೆ ಮಾಡಬೇಕಾಗಿಲ್ಲ. ಅತ್ಯಂತ ಸುರಕ್ಷಿತವಾದ ಅಂಚೆ ಕಚೇರಿ ಕೆಲವು ಹೂಡಿಕೆ ಯೋಜನೆಗಳಲ್ಲಿ ನಿಮ್ಮ ಹಣವನ್ನು ತೊಡಗಿಸಿ ಉತ್ತಮ ಲಾಭ ಪಡೆಯಬಹುದು. ಅಂತಹ ಬೆಸ್ಟ್ ಇನ್ವೆಸ್ಟ್ಮೆಂಟ್ ಪ್ಲಾನ್ (investment plan) ಗಳ ಬಗ್ಗೆ ಇಲ್ಲಿದೆ ಮಾಹಿತಿ.

ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ, ಹೇಗಿದೆ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ; ಇಲ್ಲಿದೆ ಡೀಟೇಲ್ಸ್

ನಿಮ್ಮ ಮಗಳ ಭವಿಷ್ಯಕ್ಕಾಗಿ ಹಣ ಉಳಿತಾಯ ಮಾಡಿ, ಬೆಸ್ಟ್ ಪೋಸ್ಟ್ ಆಫೀಸ್ ಸ್ಕೀಮ್ - Kannada News

ಪೋಸ್ಟ್ ಆಫೀಸ್ನ ಉಳಿತಾಯ ಖಾತೆ (Post office savings account)

ಇಲ್ಲಿ ನೀವು ಕನಿಷ್ಠ 500 ರೂಪಾಯಿಗಳಿಂದ ಹೂಡಿಕೆ ಮಾಡಬಹುದು. ಗರಿಷ್ಠ ಹೂಡಿಕೆಗೆ ಇಲ್ಲ. 4% ಬಡ್ಡಿ ದರದಲ್ಲಿ ನೀವು ಇಟ್ಟ ಹಣವನ್ನು ಯಾವಾಗ ಬೇಕಾದರೂ ಪಡೆಯಬಹುದು. ಯಾರು ಬೇಕಾದರೂ ಖಾತೆ ಆರಂಭಿಸಬಹುದು. ನಿಮ್ಮ ಮಗುವಿಗೆ ಹತ್ತು ವರ್ಷಕ್ಕಿಂತ ಕೆಳಗಿನ ವಯಸ್ಸಿಗೆ ಉಳಿತಾಯ ಖಾತೆ ಆರಂಭಿಸಿದರೆ ಆಕೆಯ ವಿದ್ಯಾಭ್ಯಾಸಕ್ಕೆ ದೊಡ್ಡ ಮೊತ್ತದ ಆದಾಯ ಪಡೆಯಬಹುದು.

ಸಾರ್ವಜನಿಕ ಭವಿಷ್ಯ ನಿಧಿ! PPF

ಈ ಯೋಜನೆಯಲ್ಲಿಯೂ ಕೂಡ ನೀವು ನಿಮ್ಮ ಮಗಳಿನ ಹೆಸರಿನಲ್ಲಿ ಹೂಡಿಕೆ ಆರಂಭಿಸಬಹುದು. ಹೂಡಿಕೆ ಮಾಡಿ. 7.1%ಬಡ್ಡಿ ದರದಲ್ಲಿ 15 ವರ್ಷಗಳ ಸ್ಥಿರ ಠೇವಣಿಯ ಮೇಲೆ ಉತ್ತಮವಾದ ಆದಾಯ ಪಡೆಯಬಹುದು.

ಸ್ವಂತ ವ್ಯಾಪಾರ ಮಾಡುವ ಮಹಿಳೆಯರಿಗೆ ಸಿಗಲಿದೆ 10 ಲಕ್ಷ ರೂಪಾಯಿಗಳ ಸಾಲ!

ಮರುಕಳಿಸುವ ಠೇವಣಿ! RD

ಅಂಚೆ ಕಚೇರಿಯ ಆರ್ ಡಿ ಮೇಲೆ ಹೂಡಿಕೆ ಮಾಡಿದರೆ 5.8% ಬಡ್ಡಿ ನೀಡಲಾಗುವುದು. ಐದು ವರ್ಷಗಳ ಹೂಡಿಕೆ ಯೋಜನೆ ಇದಾಗಿದೆ. ಪ್ರತಿ ತಿಂಗಳು ನಿಮಗೆ ಎಷ್ಟು ಸಾಧ್ಯವೊ ಅಷ್ಟು ಹೂಡಿಕೆ ಮಾಡಬಹುದು. ಕನಿಷ್ಠ ನೂರು ರೂಪಾಯಿಗಳಿಂದ ಹೂಡಿಕೆ ಆರಂಭಿಸಬೇಕು. ಐದು ವರ್ಷಗಳ ಒಳಗೆ ಹಣ ಹಿಂಪಡೆಯಲು ಸಾಧ್ಯವಿಲ್ಲ.

Post office Schemeಸುಕನ್ಯಾ ಸಮೃದ್ಧಿ ಯೋಜನೆ! Sukanya samriddhi scheme

ಕೇಂದ್ರ ಸರ್ಕಾರ ಹೆಣ್ಣು ಮಕ್ಕಳು ಭವಿಷ್ಯಕ್ಕಾಗಿ ಈ ಯೋಜನೆಯನ್ನು ಪರಿಚಯಿಸಿದ ಇದರಲ್ಲಿ ಹೂಡಿಕೆ ಮಾಡಿದರೆ 7.6% ನಷ್ಟು ಬಡ್ಡಿ ಸಿಗುತ್ತದೆ. ಹೆಣ್ಣು ಮಗುವಿಗೆ ಹತ್ತು ವರ್ಷ ವಯಸ್ಸಿರುವಾಗ ಹೂಡಿಕೆ ಆರಂಭಿಸಬೇಕು. ಆಕೆಗೆ 18 ವರ್ಷ ತುಂಬಿದ ನಂತರ ಹಣವನ್ನು ಹಿಂಪಡೆಯಲು ಸಾಧ್ಯ. ಕನಿಷ್ಠ ಸಾವಿರ ರೂಪಾಯಿಗಳಿಂದ 1.5 ಲಕ್ಷ ರೂಪಾಯಿಗಳವರೆಗೆ ಹೂಡಿಕೆ ಮಾಡಬಹುದು.

ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಡಬಲ್ ಆದಾಯ! ಕೈತುಂಬಾ ಹಣ

ಅಂಚೆ ಕಚೇರಿಯ ಟೈಮ್ ಠೇವಣಿ! (Post office time deposit)

ಹೆಣ್ಣು ಮಕ್ಕಳ ಪೋಷಕರು ಈ ಯೋಜನೆಯಲ್ಲೂ ಹೂಡಿಕೆ ಮಾಡಬಹುದು. ಈ ಯೋಜನೆಯ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳುವುದಕ್ಕೆ ಪಾಲಕರು ಇನ್ಕಮ್ ಟ್ಯಾಕ್ಸ್ ಪಾವತಿ ಮಾಡಬೇಕಾಗುತ್ತದೆ. ಟೈಮ್ ಠೇವಣಿ ಇಟ್ಟು ಅದರಿಂದ ಸಿಕ್ಕ ಬಡ್ಡಿಯನ್ನು ಮತ್ತೆ ಆರ್‌ಡಿ ಯಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭ ಪಡೆಯಬಹುದು.

ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ!

NSC ಜನಪ್ರಿಯ ಹೂಡಿಕೆ ಯೋಜನೆಯಾಗಿದೆ, ಇದರಲ್ಲಿ ಹೂಡಿಕೆ ಮಾಡಿದರೆ 6.8% ರಷ್ಟು ಬಡ್ಡಿ ಪಡೆಯಬಹುದು. ಕನಿಷ್ಠ ಹೂಡಿಕೆ ಮಿತಿ 100 ರೂಪಾಯಿಗಳು. ಗರಿಷ್ಠ ಮಿತಿ ಇಲ್ಲ. ಈ ಹುಡುಗಿ ಮಾಡಿದರೆ 1.5 ಲಕ್ಷ ರೂಪಾಯಿಗಳವರೆಗೆ ಆದಾಯ ತೆರಿಗೆ ವಿನಾಯಿತಿ ಸಿಗುತ್ತದೆ.

ಬ್ಯಾಂಕ್ ಅಕೌಂಟ್, ಗ್ಯಾಸ್ ಸಿಲಿಂಡರ್ ಸೇರಿದಂತೆ ಫೆಬ್ರವರಿ 1ರಿಂದ ಹೊಸ ರೂಲ್ಸ್!

ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ! (Monthly income scheme)

ಇದರಲ್ಲಿ 6.6% ವಾರ್ಷಿಕ ಬಡ್ಡಿ ದರ ಪಡೆಯಬಹುದು. ಹುಡುಗಿಯ ಅವಧಿ ಐದು ವರ್ಷಗಳು. ಕನಿಷ್ಠ ಸಾವಿರ ರೂಪಾಯಿ ಹಾಗೂ ಗರಿಷ್ಠ 4.5 ಲಕ್ಷ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಒಂದು ವರ್ಷಗಳ ಅವಧಿಯಲ್ಲಿ ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಲು ಅವಕಾಶವಿದೆ.

ಈಗ ನಿಮಗೆ ಯಾವ ಯೋಜನೆ ಹೆಚ್ಚು ಅನುಕೂಲವಾಗುತ್ತದೆ ಎನ್ನುವುದನ್ನು ನೋಡಿ, ಹೂಡಿಕೆ ಆರಂಭಿಸಿ. ಹೆಚ್ಚಿನ ಮಾಹಿತಿಗಳಿಗಾಗಿ ಹತ್ತಿರದ ಅಂಚೆ ಕಚೇರಿಯನ್ನು ಸಂಪರ್ಕಿಸಿ.

ಈ 10 ರೂಪಾಯಿ ನೋಟು ನಿಮ್ಮ ಬಳಿ ಇದ್ರೆ ನೀವೇ ಲಕ್ಷಾಧಿಪತಿ! ಇಲ್ಲಿದೆ ಮಾಹಿತಿ

Save money for your daughter’s future, Best Post Office Scheme

Follow us On

FaceBook Google News

Save money for your daughter's future, Best Post Office Scheme