Fire Broke Out: ಹೈದರಾಬಾದ್‌ನಲ್ಲಿ ಭಾರೀ ಅಗ್ನಿ ಅವಘಡ.. ಚಿನ್ನದ ಅಂಗಡಿಗೆ ಬೆಂಕಿ

Fire Broke Out: ಹೈದರಾಬಾದ್‌ನ ಬೇಗಂಬಜಾರ್‌ನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಚಿನ್ನದ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮೂರನೇ ಮಹಡಿಯಿಂದ ಬೆಂಕಿ ತೀವ್ರವಾಗಿ ಹರಡುತ್ತಿದೆ.

Bengaluru, Karnataka, India
Edited By: Satish Raj Goravigere

Fire Broke Out: ಹೈದರಾಬಾದ್‌ನ ಬೇಗಂಬಜಾರ್‌ನಲ್ಲಿ (Begambazar Hyderabad) ಭಾರೀ ಅಗ್ನಿ ಅವಘಡ ಸಂಭವಿಸಿದೆ. ಚಿನ್ನದ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮೂರನೇ ಮಹಡಿಯಿಂದ ಬೆಂಕಿ ತೀವ್ರವಾಗಿ ಹರಡುತ್ತಿದೆ. ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ.

ಮೂರು ಅಗ್ನಿಶಾಮಕ ಯಂತ್ರಗಳ ಮೂಲಕ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಮತ್ತೊಂದೆಡೆ, ಪೆದ್ದಪಲ್ಲಿ ಜಿಲ್ಲೆಯ ಅಪ್ಪಣ್ಣಪೇಟೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಎಸ್‌ಆರ್‌ಆರ್‌ ಫೈರ್‌ ವರ್ಕ್ಸ್‌ನ ಗೋಡೌನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ ಪಟಾಕಿ ಸಿಡಿದು ಅಪ್ಪಣ್ಣಪೇಟೆ ತತ್ತರಿಸಿದೆ.

A Huge Fire Broke Out In A Gold Shop At Begambazar Hyderabad

ಸುದ್ದಿ ನವೀಕರಣಗಳು, ಲೈವ್ ನ್ಯೂಸ್ ಪ್ರಸಾರ 12 January 2023

ಬೆಂಕಿಯನ್ನು ನಿಯಂತ್ರಿಸಲು ಪಟಾಕಿ ಸಿಬ್ಬಂದಿಗೆ ಸಾಧ್ಯವಾಗುತ್ತಿಲ್ಲ. ರಾಕೆಟ್ ಬಾಂಬ್ ಗಳು ಹಾರಿ ಮನೆಗಳ ಮೇಲೆ ಬೀಳುವ ಹಾಗೂ ಪಟಾಕಿಗಳ ಸದ್ದಿನಿಂದ ಸ್ಥಳೀಯರು ಭಯಭೀತರಾಗಿದ್ದರು.

A Huge Fire Broke Out In A Gold Shop At Begambazar Hyderabad