ಹೆಣ್ಣುಮಕ್ಕಳಿಗೆ ಉಚಿತ ಸ್ಮಾರ್ಟ್ ಫೋನ್ ವಿತರಿಸುವ ಹೊಸ ಯೋಜನೆ, ಫೋನ್ ಜೊತೆಗೆ ಇಂಟರ್ನೆಟ್ ಕೂಡ ಫ್ರೀ

ಈ ಸ್ಮಾರ್ಟ್ ಫೋನ್ ಯೋಜನೆಯ ಹೆಸರು ಇಂದಿರಾಗಾಂಧಿ ಸ್ಮಾರ್ಟ್ ಫೋನ್ ಯೋಜನೆ. ಈ ಯೋಜನೆಯಲ್ಲಿ ಶಿಬಿರಗಳನ್ನು ಆಯೋಜಿಸುವ ಮೂಲಕ ಹೆಣ್ಣುಮಕ್ಕಳಿಗೆ ಸ್ಮಾರ್ಟ್ ಫೋನ್ ಅನ್ನು ನೀಡಲಾಗುತ್ತಿದೆ.

Bengaluru, Karnataka, India
Edited By: Satish Raj Goravigere

ಮಹಿಳಾ ಸಬಲೀಕರಣಕ್ಕಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಮಹಿಳೆಯರು ಆರ್ಥಿಕವಾಗಿ ಬೆಳವಣಿಗೆ ಆಗಬೇಕು, ಮಹಿಳೆಯರು ಎಲ್ಲಾ ವಿಷಯಗಳ ಬಗ್ಗೆ ಅಪ್ಡೇಟ್ ಆಗಬೇಕು ಎಂದು ಸಾಕಷ್ಟು ಯೋಜನೆಗಳನ್ನು (Schemes) ಜಾರಿಗೆ ತರಲಾಗುತ್ತಿದೆ.

ಅಂಥ ಯೋಜನೆಗಳಲ್ಲಿ ಒಂದು ಸ್ಮಾರ್ಟ್ ಫೋನ್ (Smartphone Scheme) ನೀಡುವ ಯೋಜನೆ. ಈ ಯೋಜನೆಯ ಮೂಲಕ ಎಲ್ಲಾ ಹೆಣ್ಣುಮಕ್ಕಳಿಗೆ ಸ್ಮಾರ್ಟ್ ಫೋನ್ ಸಿಗಲಿದೆ. ಈ ಯೋಜನೆಯ ಬಗ್ಗೆ ಪೂರ್ತಿಯಾಗಿ ತಿಳಿಸಿಕೊಡುತ್ತೇವೆ ನೋಡಿ..

A new scheme to distribute free smartphones to Women

ಈ ಸ್ಮಾರ್ಟ್ ಫೋನ್ ಯೋಜನೆಯ ಹೆಸರು ಇಂದಿರಾಗಾಂಧಿ ಸ್ಮಾರ್ಟ್ ಫೋನ್ ಯೋಜನೆ. ಈ ಯೋಜನೆಯಲ್ಲಿ ಶಿಬಿರಗಳನ್ನು ಆಯೋಜಿಸುವ ಮೂಲಕ ಹೆಣ್ಣುಮಕ್ಕಳಿಗೆ ಸ್ಮಾರ್ಟ್ ಫೋನ್ (Smartphone) ಅನ್ನು ನೀಡಲಾಗುತ್ತಿದೆ.

ಈ ಯೋಜನೆಯ ಬಗ್ಗೆ ಸರ್ಕಾರ ತೀರ್ಮಾನ ಮಾಡಿಕೊಂಡಿದ್ದು, ಮೊದಲ ಹಂತದಲ್ಲಿ 16 ಸ್ಥಳಗಳಲ್ಲಿ ಶಿಬಿರ ಮಾಡಿ, ಸ್ಮಾರ್ಟ್ ಫೋನ್ ಹಂಚಿಕೆ ಮಾಡಲಾಗುತ್ತದೆ. ಒಂದು ಜಿಲ್ಲಾ ಕೇಂದ್ರಗಳಲ್ಲಿ 4 ಶಿಬಿರಗಳನ್ನು ಆಯೋಜಿಸಲಾಗಿದೆ.

ಪ್ರಸ್ತುತ ಈ ಯೋಜನೆಯು ರಾಜಸ್ಥಾನದಲ್ಲಿ ಜಾರಿಗೆ ತರಲಾಗುತ್ತಿದೆ. ಶೀಘ್ರದಲ್ಲಿ ಕರ್ನಾಟಕದಲ್ಲೂ ಕೂಡ ಈ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಹೇಳಲಾಗುತ್ತಿದೆ. ಹೆಣ್ಣುಮಕ್ಕಳಿಗೆ ಉಚಿತವಾಗಿ ಸ್ಮಾರ್ಟ್ ಫೋನ್ ನೀಡುವ ಯೋಜನೆಯನ್ನು ರಾಜಸ್ಥಾನದ ಭರತ್ ಪುರ ಜಿಲ್ಲೆಯಲ್ಲಿ ಜಾರಿಗೆ ತರಲು ಚಾಲನೆ ನೀಡಲಾಗಿದೆ. ಇಲ್ಲೇ ಶಿಬಿರವನ್ನು ಸಹ ಆಯೋಜಿಸಲಾಗಿದೆ. ಅಲ್ಲಿನ ಜಿಲ್ಲಾಧಿಕಾರಿ ಆಗಿರುವ ಲೋಕಬಂಧು ಅವರು ಕೂಡ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಪ್ರಕಾರ, ಶುರುವಿನ ಹಂತದಲ್ಲಿ ಸುಮಾರು 95000 ಫಲಾನುಭವಿಗಳಿಗೆ ಸ್ಮಾರ್ಟ್ ಫೋನ್ ವಿತರಿಸಲಾಗುತ್ತದೆ. ಇದರಲ್ಲಿ ಶಾಲೆಯಲ್ಲಿ ಓದುತ್ತಿರುವ 9 ರಿಂದ 12ನೇ ತರಗತಿ ವಿದ್ಯಾರ್ಥಿನಿಯರಿಗೆ ಸ್ಮಾರ್ಟ್ ಫೋನ್ ವಿತರಣೆ ಮಾಡಲಾಗುತ್ತದೆ.

ಸರ್ಕಾರದ ಐಟಿಐ, ಪಾಲಿಟೆಕ್ನಿಕ್ ಕೋರ್ಸ್ ಮಾಡುತ್ತಿರುವವರಿಗೂ ಕೂಡ ಈ ಯೋಜನೆಯ ಮೂಲಕ ಸ್ಮಾರ್ಟ್ ಫೋನ್ ಸಿಗಲಿದೆ. ಸ್ಮಾರ್ಟ್ ಫೋನ್ ಕೊಡುವುದು ಮಾತ್ರವಲ್ಲ, ಅದಕ್ಕೆ ಉಚಿತ ಇಂಟರ್ನೆಟ್ ಸೌಲಭ್ಯವನ್ನು ಕೂಡ ಕೊಡಲಿದ್ದಾರೆ. ಈ ಪ್ಲಾನ್ ಗೆ Telecom Regulatory Authority of India ಎಂದು ಹೆಸರು ನೀಡಿದ್ದಾರೆ. ಡೇಟಾ ಇಂದ ಸಿಮ್ ಕೂಡ ಪಡೆಯಬಹುದು. ಇ ವ್ಯಾಲೆಟ್ ಗೆ ₹8,600 ರೂಪಾಯಿ ಬರಲಿದೆ.

ಇಂದಿರಾಗಾಂಧಿ ಸ್ಮಾರ್ಟ್ ಫೋನ್ ಯೋಜನೆಗೆ ಬೇಕಾಗುವ ದಾಖಲೆಗಳು..

*ಬರ್ತ್ ಸರ್ಟಿಫಿಕೇಟ್ ಮತ್ತು ಆಧಾರ್ ಕಾರ್ಡ್
*ಪ್ಯಾನ್ ಕಾರ್ಡ್
*ಆಧಾರ್ ಮತ್ತು ಪ್ಯಾನ್ ಗೆ ಲಿಂಕ್ ಆಗಿರುವ ಫೋನ್ ನಂಬರ್
*ಮಹಿಳೆ ವಿಧವೆ ಆಗಿದ್ದರೆ, ಅವರ ಐಡೆಂಟಿಟಿ ಕಾರ್ಡ್, ಪಿಪಿಓ ಮಾಹಿತಿ ಒದಗಿಸಬೇಕು.
*ಇದಕ್ಕೆ ಜನಾಧಾರ್ ಇವ್ಯಾಲೆಟ್ ಲಿಂಕ್ ಮಾಡಲಾಗುತ್ತದೆ. ಈಗ ರಾಜಸ್ಥಾನದಲ್ಲಿ ಈ ಯೋಜನೆ ಜಾರಿಗೆ ಬಂದಿದ್ದು, ಮುಂದಿನ ದಿನಗಳಲ್ಲಿ ಬೇರೆ ರಾಜ್ಯಗಳಲ್ಲಿ ಕೂಡ ಜಾರಿಗೆ ಬರುತ್ತದೆ.

A new scheme to distribute free smartphones to Women