ಜನತೆಗೆ ಬಂಪರ್ ಗಿಫ್ಟ್! ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ₹ 200 ರಷ್ಟು ಕಡಿತ, ಸಚಿವ ಸಂಪುಟ ಸಭೆ ಒಪ್ಪಿಗೆ
ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ರೂ.200 ಇಳಿಸಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ನವ ದೆಹಲಿ: ಇಂದು ದೆಹಲಿಯಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಸಭೆಯ ನಂತರ ಕೇಂದ್ರ ಸಚಿವ ಅನುರಾಗ್ ಠಾಕೂರ್ ಮಾಧ್ಯಮದವರನ್ನು ಭೇಟಿ ಮಾಡಿ ಮಾತನಾಡಿದರು. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಂದು ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು (Cooking Gas Cylinder Price) 200 ರೂಪಾಯಿಗಳಷ್ಟು ಇಳಿಸಲು ಅನುಮೋದನೆ ನೀಡಿದೆ.
ಮಂಗಳವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರವು ಎಲ್ಲಾ ಗೃಹಬಳಕೆಯ ಗ್ರಾಹಕರಿಗೆ ಪ್ರತಿ ಸಿಲಿಂಡರ್‌ಗೆ ₹ 200 ಅಡುಗೆ ಅನಿಲದ ಬೆಲೆಯನ್ನು ಕಡಿತಗೊಳಿಸಿದೆ. ಉಜ್ವಲ ಯೋಜನೆಯಡಿ ಹೆಚ್ಚುವರಿ ಸಬ್ಸಿಡಿ ನೀಡಲು ಸಂಪುಟ ಅನುಮೋದನೆ ನೀಡಿದೆ. ಹೆಚ್ಚುವರಿ ಸಬ್ಸಿಡಿ ₹ 200. ಈಗ ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಫಲಾನುಭವಿಗಳಿಗೆ ಪ್ರತಿ ಸಿಲಿಂಡರ್‌ಗೆ ₹ 400 ಸಬ್ಸಿಡಿ ಇರುತ್ತದೆ .
ಇದು ಎಲ್ಲಾ ಗೃಹಬಳಕೆಯ ಸಿಲಿಂಡರ್‌ಗಳ ಬೆಲೆಯನ್ನು (LPG Gas Cylinder Price) 200 ರಷ್ಟು ಕಡಿಮೆ ಮಾಡುತ್ತದೆ. ಅಲ್ಲದೆ, ಉಜ್ವಲ ಯೋಜನೆ ಫಲಾನುಭವಿಗಳಿಗೆ ಸಿಲಿಂಡರ್ ಬೆಲೆ 400 ರೂ. ಇಳಿಕೆ ಆಗಲಿದೆ ಎಂದು ತಿಳಿಸಿದರು.
ರಕ್ಷಾ ಬಂಧನದ ಸಂದರ್ಭದಲ್ಲಿ ದೇಶದಾದ್ಯಂತ ಮಹಿಳೆಯರಿಗೆ ಈ ಬಹುಮಾನವನ್ನು ಪ್ರಧಾನಿ ಮೋದಿ ಘೋಷಿಸಿದ್ದಾರೆ.
ಸರ್ಕಾರದ ದೊಡ್ಡ ಘೋಷಣೆ, 10 ಕೋಟಿ ಗ್ರಾಹಕರಿಗೆ ₹400 ರೂಪಾಯಿಗೆ ಎಲ್‌ಪಿಜಿ ಸಿಲಿಂಡರ್! ಪಟ್ಟಿ ಬಿಡುಗಡೆ
Cabinet meeting approves for Price reduction of cooking gas cylinder by Rs 200
#WATCH | "…The prices of the LPG gas cylinders for domestic use have been brought down by Rs 200 per cylinder, for each and every user. At the same time, 75 lakhs new gas connections will be given under the 'Pradhan Mantri Ujjwala Yojana'…'Pradhan Mantri Ujjwala Yojana'… pic.twitter.com/2dJoUQv86c
— ANI (@ANI) August 29, 2023
Follow us On
Google News |