ಪ್ರವಾಹದ ನೀರಿನಲ್ಲಿ ಕೊಚ್ಚಿಹೋದ ಕಾರಿನಲ್ಲಿ ಮಹಿಳೆ ಸೇರಿದಂತೆ ಮೂವರು ಸಾವು
ಮುಂಬೈ: ಪ್ರವಾಹದ ನೀರಿನಲ್ಲಿ ಕಾರೊಂದು ಕೊಚ್ಚಿ ಹೋಗಿದೆ. ಅದರಲ್ಲಿ ಓರ್ವ ಮಹಿಳೆ ಸೇರಿದಂತೆ ಆರು ಮಂದಿ ಪ್ರಯಾಣಿಕರಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಇನ್ನು ಮೂವರು ನಾಪತ್ತೆಯಾಗಿದ್ದಾರೆ. ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮಂಗಳವಾರ ಒಂದೇ ಕುಟುಂಬದ ಆರು ಮಂದಿ ಮಧ್ಯಪ್ರದೇಶದ ನಂದಗೋಮುಲ್ಕ್‌ನಿಂದ ಮಹಾರಾಷ್ಟ್ರದ ಮುಲ್ತಾಯ್‌ಗೆ ತೆರಳುತ್ತಿದ್ದರು.
ಆದರೆ ಕಾರು ಚಾಲಕ ಲೀಲಾಧರ್ ಹಿವಾರೆ ಅವರ ತಪ್ಪು ನಿರ್ಧಾರದಿಂದ ಅವರು ಅಪಾಯಕ್ಕೆ ಸಿಲುಕಿದ್ದಾರೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಕೆಲ್ವಾಡ್‌ನಲ್ಲಿ ನೀರು ತುಂಬಿರುವ ನಂದಾ ಕಾಲುವೆಯ ಮೇಲಿನ ತಗ್ಗು ಸೇತುವೆಯನ್ನು ದಾಟಲು ಚಾಲಕ ಪ್ರಯತ್ನಿಸಿದ್ದಾನೆ. ಹೆಚ್ಚಿನ ಪ್ರವಾಹದ ಕಾರಣ ಕಾಲುವೆಯಲ್ಲಿ ಕಾರು ಕೊಚ್ಚಿ ಹೋಗಿದೆ. ಅವರು ಸಹಾಯಕ್ಕಾಗಿ ಕಿರುಚಿದರೂ ಪ್ರಯೋಜನವಾಗಲಿಲ್ಲ.
ಆದರೆ, ಇದನ್ನು ಕಂಡ ಕೆಲ ಸ್ಥಳೀಯರು ಏನೂ ಮಾಡಲು ಸಾಧ್ಯವಾಗಲಿಲ್ಲ. ಮತ್ತು ಕೆಲವರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಕಾರು ಕೊಚ್ಚಿಹೋಗುವುನ್ನು ರೆಕಾರ್ಡ್ ಮಾಡಿದ್ದಾರೆ. ಮಾಹಿತಿ ಪಡೆದ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ನಡೆಸಿದರು. ಆ ಕಾಲುವೆಯಲ್ಲಿ ಹೂಳೆತ್ತಲಾಗಿದೆ. ಹತ್ತು ವರ್ಷದ ಬಾಲಕ, ಮಹಿಳೆ ಮತ್ತು ಪುರುಷನ ಮೃತ ದೇಹಗಳು ಪತ್ತೆಯಾಗಿವೆ. ನಾಪತ್ತೆಯಾಗಿರುವ ಇನ್ನೂ ಮೂವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
#Maharashtra | A Scorpio with passengers was washed away in #flood water in #Nagpur.
The incident occurred at 2 pm today, near Savner where water was filled. The driver tried to get the Scorpio out of the water-filled culvert but the flow was too strong. pic.twitter.com/EZluG3djHo
— Mirror Now (@MirrorNow) July 12, 2022
Car away in flood water in nagpur 3 including woman dead 3 others missing