ಆಂಬ್ಯುಲೆನ್ಸ್ ಗೆ ದಾರಿ ಕೊಡದ ಕಾರು ಮಾಲೀಕ, ಬರೋಬ್ಬರಿ 2.5 ಲಕ್ಷ ದಂಡ ವಿಧಿಸಿದ ಪೊಲೀಸರು

Story Highlights

ಆಂಬ್ಯುಲೆನ್ಸ್‌ನಲ್ಲಿದ್ದ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುವಾಗ, ವಾಹನದ ಮಾಲೀಕ ದಾರಿ ಕೊಡದ ಕಾರಣ 2.5 ಲಕ್ಷ ದಂಡ ವಿಧಿಸುವುದರೊಂದಿಗೆ ಚಾಲನಾ ಪರವಾನಗಿಯನ್ನೂ ರದ್ದುಪಡಿಸಲಾಗಿದೆ.

ಪೊಲೀಸರು ಕಾರು ಚಾಲಕನಿಗೆ (Car Driver) ಶಾಕ್ ನೀಡಿದ್ದಾರೆ. ಹೌದು, ಆಂಬ್ಯುಲೆನ್ಸ್‌ನಲ್ಲಿದ್ದ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುವಾಗ, ವಾಹನದ ಮಾಲೀಕ ದಾರಿ ಕೊಡದ ಕಾರಣ 2.5 ಲಕ್ಷ ದಂಡ ವಿಧಿಸುವುದರೊಂದಿಗೆ ಚಾಲನಾ ಪರವಾನಗಿಯನ್ನೂ ರದ್ದುಪಡಿಸಲಾಗಿದೆ.

ಇದೀಗ ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ (Viral Video) ಆಗಿದೆ. ಸಾಮಾನ್ಯವಾಗಿ, ವಾಹನದಲ್ಲಿ ಪ್ರಯಾಣಿಸುವಾಗ ಯಾರಾದರೂ ಹಾರ್ನ್ ಮಾಡಿದಾಗ, ಮುಂದೆ ಇರುವ ವಾಹನ ಚಾಲಕರು ದಾರಿ ಮಾಡಿಕೊಡುತ್ತಾರೆ.

ವಿಶೇಷವಾಗಿ ಆಂಬ್ಯುಲೆನ್ಸ್‌ಗಳ (Ambulance) ಸಂದರ್ಭದಲ್ಲಿ, ಯಾವುದೇ ಸಂದರ್ಭಗಳಲ್ಲಿ ದಾರಿ ಮಾಡಿಕೊಡಲು ಪ್ರಯತ್ನಿಸುತ್ತಾರೆ. ಆದರೆ, ಇಲ್ಲೊಬ್ಬ ವ್ಯಕ್ತಿ ಆ್ಯಂಬುಲೆನ್ಸ್‌ಗೆ ದಾರಿ ಮಾಡಿಕೊಡದೆ ಚಾಲಕನನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಈ ಘಟನೆ ನಡೆದಿರುವುದು ಕೇರಳದಲ್ಲಿ (Kerala), ಗಂಭೀರ ಸ್ಥಿತಿಯಲ್ಲಿರುವ ರೋಗಿಯನ್ನು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವಾಗ ಈ ಘಟನೆ ನಡೆದಿದೆ.

ಕಾರ್ತಿಕ ಮಾಸದಲ್ಲಿ ಮನೆಗೆ ಕೋಳಿ ಮಾಂಸ ತಂದ ವ್ಯಕ್ತಿ ಕೊಲೆ

ಆಂಬ್ಯುಲೆನ್ಸ್ ಸೈರನ್ ಬಾರಿಸುತ್ತಿದ್ದರೂ ವಾಹನ ಹಾರ್ನ್ ಮಾಡುತ್ತಿದ್ದರೂ ಕಾರಿನ ಮಾಲೀಕರು ಕ್ಯಾರೇ ಎನ್ನಲಿಲ್ಲ. ಆದರೆ, ಆಂಬ್ಯುಲೆನ್ಸ್‌ನಲ್ಲಿದ್ದ ಮತ್ತೊಬ್ಬರು ಕಾರು ಮಾಲೀಕರ ವರ್ತನೆಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ಇದೀಗ ಈ ವಿಡಿಯೋ ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ಕೇರಳ ಪೊಲೀಸರು ಪ್ರತಿಕ್ರಿಯೆ ನೀಡಿದ್ದಾರೆ. ಕಾರಿನ ಮಾಲೀಕರ ಬಳಿ ತೆರಳಿ 2.5 ಲಕ್ಷ ರೂ. ದಂಡ ವಸೂಲಿ ಮಾಡಿ, ಚಾಲನಾ ಪರವಾನಗಿಯನ್ನೂ ರದ್ದುಗೊಳಿಸಿರುವುದು ಗೊತ್ತಾಗಿದೆ.

Car Owner Fined Rs 2.5 Lakh And License Revoked For Blocking Ambulance

Related Stories