ಆಶ್ರಯ ಕೇಂದ್ರದಲ್ಲಿ ಸಲಿಂಗಕಾಮದಲ್ಲಿ ತೊಡಗಿದ್ದ 14 ವರ್ಷದ ಬಾಲಕನ ವಿರುದ್ಧ ಪ್ರಕರಣ
ಪೊಲೀಸರು ಬಾಲಕನ ವಿಚಾರಣೆ ನಡೆಸಿದಾಗ ಆಶ್ರಯ ಕೇಂದ್ರದಲ್ಲಿ ಜತೆಗಿದ್ದ 14 ವರ್ಷದ ಬಾಲಕ ಸಲಿಂಗಕಾಮಿಯಾಗಿದ್ದು, ತೊಂದರೆ ನೀಡುತ್ತಿದ್ದ ಎಂಬುದು ಬೆಳಕಿಗೆ ಬಂದಿದೆ.
ಮುಂಬೈ (Mumbai): ಮುಂಬೈನಲ್ಲಿ ಕಾರ್ಯನಿರ್ವಹಿಸುತ್ತಿರುವ ಮಕ್ಕಳ ಶೆಲ್ಟರ್‌ನಲ್ಲಿ 10 ವರ್ಷದ ಬಾಲಕ ಇದ್ದಕ್ಕಿದ್ದಂತೆ ಅಸ್ವಸ್ಥನಾಗಿದ್ದ. ಬಾಲಕನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ವೈದ್ಯರು ನಡೆಸಿದ ಪರೀಕ್ಷೆಯಲ್ಲಿ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.
ಪೊಲೀಸರು ಬಾಲಕನ ವಿಚಾರಣೆ ನಡೆಸಿದಾಗ ಆಶ್ರಯ ಕೇಂದ್ರದಲ್ಲಿ ಜತೆಗಿದ್ದ 14 ವರ್ಷದ ಬಾಲಕ ಸಲಿಂಗಕಾಮಿಯಾಗಿದ್ದು, ತೊಂದರೆ ನೀಡುತ್ತಿದ್ದ ಎಂಬುದು ಬೆಳಕಿಗೆ ಬಂದಿದೆ.
14 ವರ್ಷದ ಬಾಲಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Case against 14-year-old boy who indulged in homosexuality in shelter
Follow us On
Google News |