India NewsCrime News

ಅಡ್ಡ ಬಂದ ಬೆಕ್ಕನ್ನು ಹಿಡಿದು ಜೀವಂತ ಸುಟ್ಟು ಹಾಕಿದ ಪಾಪಿ ಮಹಿಳೆ

ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಪ್ರಿಯಾ ಎಂಬ ಮಹಿಳೆ ಮತ್ತು ಆಕೆಯ ಸ್ನೇಹಿತರನ್ನು ಆರೋಪಿ ಎಂದು ಗುರುತಿಸಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗಿದೆ.

  • ಉತ್ತರಪ್ರದೇಶದ ಮೊರಾದಾಬಾದ್‌ನಲ್ಲಿ ಕ್ರೂರ ಘಟನೆ
  • ಬಿಕ್ಕಿಗೆ ಜೀವಂತ ಬೆಂಕಿ ಹಚ್ಚಿ ಸುಟ್ಟು ಹಾಕಿದ ದುಷ್ಕೃತ್ಯ
  • ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು

ಉತ್ತರಪ್ರದೇಶದ ಮೊರಾದಾಬಾದ್ (Moradabad) ಜಿಲ್ಲೆಯಲ್ಲಿ ಅಮಾನವೀಯ ಘಟನೆ ನಡೆದಿದೆ. ಬೋಜ್‌ಪುರ ಪ್ರದೇಶದ ಮಹಿಳೆ ಮತ್ತು ಅವಳ ಸ್ನೇಹಿತರು ರಸ್ತೆ ದಾಟುತ್ತಿದ್ದ ವೇಳೆ ಅಡ್ಡಬಂದ ಬೆಕ್ಕನ್ನು (cat) ಕೆಟ್ಟ ಶಕುನವೆಂದು ಭಾವಿಸಿ, ಅದನ್ನು ಹಿಡಿದು ಜೀವಂತ ಬೆಂಕಿ ಹಚ್ಚಿ ಸುಟ್ಟು (Cat Burnt Alive) ಹಾಕಿದ್ದಾರೆ.

ಅಲ್ಲದೆ ಈ ಕ್ರೂರ ಘಟನೆ ತಾವು ಮಾಡಿರೋದು ಮಹಾ ಪುಣ್ಯದ ಕೆಲಸವೆಂಬಂತೆ ತಾವೇ ವಿಡಿಯೋ ರೆಕಾರ್ಡ್ ಕೂಡ ಮಾಡಿದ್ದರು.

ಅಡ್ಡ ಬಂದ ಬೆಕ್ಕನ್ನು ಹಿಡಿದು ಜೀವಂತ ಸುಟ್ಟು ಹಾಕಿದ ಪಾಪಿ ಮಹಿಳೆ

ಈ ವಿಡಿಯೋ ವೈರಲ್ (viral) ಆಗುತ್ತಿದ್ದಂತೆ, ವನ್ಯಜೀವಿ ಅಪರಾಧ ನಿಯಂತ್ರಣ ಕಚೇರಿ (Wildlife Crime Control Bureau) ಇದನ್ನು ಗಂಭೀರವಾಗಿ ಪರಿಗಣಿಸಿ, ಭೋಜ್‌ಪುರ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸಿಸಿಟಿವಿ (CCTV) ದೃಶ್ಯಾವಳಿಗಳ ಸಹಾಯದಿಂದ ಆರೋಪಿಗಳ ಬೈಕ್ ಸಂಖ್ಯೆ ಪತ್ತೆ ಹಚ್ಚಿದರು.

ಇದನ್ನೂ ಓದಿ: ಪತ್ನಿಯ ಕಳ್ಳಾಟ, ಪರ ಪುರುಷನ ಸಹವಾಸ! ಆ ವ್ಯಕ್ತಿಯನ್ನು ಇರಿದು ಕೊಂದ ಪತಿ

ಕಾನೂನು ಕ್ರಮ:

ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಪ್ರಿಯಾ ಎಂಬ ಮಹಿಳೆ ಮತ್ತು ಆಕೆಯ ಸ್ನೇಹಿತರನ್ನು ಆರೋಪಿ ಎಂದು ಗುರುತಿಸಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಈ ಘಟನೆಯ ಸಂಬಂಧ ಮೂರು ವರ್ಷಗಳ ಜೈಲು ಶಿಕ್ಷೆ ಅಥವಾ ಒಂದು ಲಕ್ಷ ರೂ. ದಂಡ ವಿಧಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Cat Burnt Alive, Shocking Incident in UP

English Summary

Our Whatsapp Channel is Live Now 👇

Whatsapp Channel

Related Stories