ದೇಶದ ಎಲ್ಲಾ ರೈತರಿಗೆ ಕೇಂದ್ರ ಸರ್ಕಾರದಿಂದ ಬಿಗ್ ಗಿಫ್ಟ್! ಅನ್ನದಾತರಿಗಾಗಿ ಹೊಸ ಸೇವೆ ಶುರು

ರೈತರಿಗೆ ಅನುಕೂಲ ಅಗುವಂಥ ಹೊಸದೊಂದು ಸೇವೆಯನ್ನು ತರಲಾಗುತ್ತಿದ್ದು, ಈ ಸೇವೆಯ ಹೆಸರು Kisan Rin Portal. ಈ ಪೋರ್ಟಲ್ ಅನ್ನು ಲಾಂಚ್ ಮಾಡುವ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ.

ನಮ್ಮ ದೇಶದ ಬೆನ್ನೆಲುಬು ಕೃಷಿ ಮತ್ತು ರೈತರು. ಹಾಗಾಗಿ ಕೃಷಿ ಮತ್ತು ರೈತರನ್ನು ಬೆಂಬಲಿಸುವ ಸಲುವಾಗಿ ಕೇಂದ್ರ ಸರ್ಕಾರವು ಸಾಕಷ್ಟು ಯೋಜನೆಗಳು ಮತ್ತು ಸೇವೆಗಳನ್ನು ರೈತರಿಗಾಗಿ ತರುತ್ತದೆ.

ಇದೀಗ ರೈತರಿಗೆ ಅನುಕೂಲ ಅಗುವಂಥ ಹೊಸದೊಂದು ಸೇವೆಯನ್ನು ತರಲಾಗುತ್ತಿದ್ದು, ಈ ಸೇವೆಯ ಹೆಸರು Kisan Rin Portal. ಈ ಪೋರ್ಟಲ್ ಅನ್ನು ಲಾಂಚ್ ಮಾಡುವ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitaraman) ಮತ್ತು ಕೃಷಿ ಸಚಿವರಾದ ನರೇಂದ್ರ ಸಿಂಗ್ ತೋಮರ್ (Narendra Singh Tomar) ಅವರು ಮಾಹಿತಿ ನೀಡಿದ್ದಾರೆ.

ಈ ಒಂದು ಪೋರ್ಟಲ್ ಇಂದ ರೈತರಿಗೆ ಹೆಚ್ಚು ಅನುಕೂಲ ಆಗಲಿದ್ದು, Kisan Credit Card ಹೊಂದಿರುವವರು ಈ Kisan Rin ಪೋರ್ಟಲ್ ಮೂಲಕ ಸಬ್ಸಿಡಿಯಲ್ಲಿ ಸಾಲ ಪಡೆಯುವ ಅವಕಾಶ ಹೊಂದುತ್ತಾರೆ.

ದೇಶದ ಎಲ್ಲಾ ರೈತರಿಗೆ ಕೇಂದ್ರ ಸರ್ಕಾರದಿಂದ ಬಿಗ್ ಗಿಫ್ಟ್! ಅನ್ನದಾತರಿಗಾಗಿ ಹೊಸ ಸೇವೆ ಶುರು - Kannada News

ಈ ವೇಳೆ ರೈತರ ಪ್ರತಿ ಮನೆಗೂ ಹೋಗಿ ಕಿಸಾನ್ ಕ್ರೆಡಿಟ್ ಕಾರ್ಡವಿತರಣೆ (Kisan Credit Card) ಮಾಡುವ ಕೆಲಸವನ್ನು ಕೂಡ ಶುರು ಮಾಡಲಾಗಿದೆ. ಜೊತೆಗೆ Weather Information Network Data Systems (WINDS) ಪೋರ್ಟಲ್ ಅನ್ನು ಕೂಡ ಶುರು ಮಾಡಲಾಗುತ್ತದೆ.

ನಮ್ಮ ಕೇಂದ್ರದ ಕೃಷಿ ಸಚಿವ ಆಗಿರುವ ನರೇಂದ್ರ ಸಿಂಗ್ ತೋಮರ್ ಅವರು ನೀಡಿರುವ ಮಾಹಿತಿಯ ಅನುಸಾರ, ಕಿಸಾನ್ ರಿನ್ ಪೋರ್ಟಲ್ ಮೂಲಕ ದೇಶದ ಎಲ್ಲಾ ರೈತರು ತಮಗೆ ಬೇಕಿರುವ ಯಾವುದೇ ಮಾಹಿತಿಯನ್ನು ಸುಲಭವಾಗಿ ಪಡೆದುಕೊಳ್ಳಬಹುದು.

ಈ ಪೋರ್ಟಲ್ ನಲ್ಲಿ ರೈತರು ಸಾಲ ಮಂಜೂರು ಆಗುವ ಬಗೆಗಿನ ಮಾಹಿತಿ, ಬಡ್ಡಿ ಡಿಡಕ್ಷನ್ ಬಗ್ಗೆ ಮಾಹಿತಿ, ಯೋಜನೆಯನ್ನು ಬಳಸಿರುವ ಬಗ್ಗೆ ಮಾಹಿತಿ ಮತ್ತು ಬ್ಯಾಂಕ್ ಗಳ ಬಗ್ಗೆ ಕೂಡ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಈ ರೀತಿಯಾಗಿ ರೈತರಿಗೆ ಕೃಷಿಗೆ ಸಿಗುವ ಸಾಲ ಹೆಚ್ಚು ಪರಿಣಾಮ ಬೀರುತ್ತದೆ.

Kisan Rin Portal2023ರ ಮಾರ್ಚ್ 30ರ ಸಮಯಕ್ಕೆ ಮಾಹಿತಿ ನೋಡಿದರೆ ಸುಮಾರು 7.35 ಕೋಟಿ KCC Account ಗಳಿವೆ ಎಂದು ತಿಳಿದುಬಂದಿದೆ. ಇಷ್ಟು ಖಾತೆಗಳಿಗೆ 8.35 ಲಕ್ಷ ಕೋಟಿ ಹಣದ ಲಿಮಿಟ್ ಅನ್ನು ಸರ್ಕಾರ ನೀಡಿದೆ. ಇನ್ನು ಸರಿಯಾದ ಮಾಹಿತಿ ಪಡೆದರೆ, ಕ್ರೆಡಿಟ್ ಗಾಗಿ ಸುಮಾರು 6,573 ಕೋಟಿ ರೂಪಾಯಿಗಳನ್ನು ಸಬ್ಸಿಡಿ ಬಡ್ಡಿದರದ ಸಾಲವಾಗಿ ಮಂಜೂರು ಮಾಡಲಾಗಿದೆ. ಈ ಸಾಲವನ್ನು ರೈತರು ಆಗಸ್ಟ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ತ್ರೈಮಾಸಿಕ ರೂಪದಲ್ಲಿ ಪಡೆಯಬಹುದು.

ಕೆಸಿಸಿ (KCC) ಇಂದ ರೈತರಿಗೆ ಹೆಚ್ಚಿನ ಪ್ರಯೋಜನ ನೀಡುವ ನಿರ್ಧಾರ ಮಾಡಲಾಗಿದ್ದು, ಕೆಸಿಸಿ ಅಕೌಂಟ್ (KCC Account) ಇಲ್ಲದೆ ಇರುವ ರೈತರ ಮನೆಗೆ ಕ್ಯಾಂಪೈಡಾನ್ ಅನ್ನು ನೀಡಲಾಗುತ್ತದೆ. ಈ ಪೋರ್ಟಲ್ ಮತ್ತು ಸೇವೆಯ ಮೂಲಕ ಪಿಎಮ್ ಕಿಸಾನ್ ಯೋಜನೆಯ (PM Kisan Yojane) ಸೌಲಭ್ಯ ಪಡೆಯುತ್ತಿರುವ ಎಲ್ಲಾ ರೈತರಿಗೆ ಕಿಸಾನ್ ರಿನ್ ಇಂದ ಕೆಸಿಸಿ ಸಾಲ ಸಿಗುವ ಸೌಲಭ್ಯ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಪಿಎಮ್ ಕಿಸಾನ್ ಯೋಜನೆಯ ಬಗ್ಗೆ ಹೇಳುವುದಾದರೆ, ಇದು ರೈತರಿಗೆ ವರ್ಷಕ್ಕೆ 6000 ನೀಡುವ ಯೋಜನೆ ಆಗಿದ್ದು, ಈ ಯೋಜನೆಯ 14 ಕಂತುಗಳ ಹಣ ಈಗಾಗಲೇ ರೈತರ ಬ್ಯಾಂಕ್ ಅಕೌಂಟ್ ಗೆ ಜಮೆ ಆಗಿದೆ.

15ನೇ ಕಂತಿನ ಹಣವು ಶೀಘ್ರದಲ್ಲೇ ಬಿಡುಗಡೆ ಆಗುತ್ತದೆ ಎಂದು ಕೂಡ ಮಾಹಿತಿ ಸಿಕ್ಕಿದೆ. ಹಬ್ಬದ ಸಮಯದಲ್ಲಿ 15ನೇ ಕಂತಿನ ಹಣ ರೈತರಿಗೆ ಸಿಗುತ್ತದೆ ಎನ್ನಲಾಗಿದ್ದು, ನವೆಂಬರ್ ವೇಳೆಗೆ ಪಿಎಮ್ ಕಿಸಾನ್ ಯೋಜನೆಯ 15ನೇ ಕಂತಿನ ಹಣ ರೈತರನ್ನು ತಲುಪಬಹುದು ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಸಿಕ್ಕಿಲ್ಲ.

Central government has given good news to the farmers, Kisan Rin Portal To be Launched

Follow us On

FaceBook Google News