ಸಿಎಂ ಏಕನಾಥ್ ಅವರನ್ನು ಬ್ಯಾಂಡ್ ಬಾರಿಸುವ ಮೂಲಕ ಸ್ವಾಗತಿಸಿದ ಪತ್ನಿ

ಮಹಾರಾಷ್ಟ್ರ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಥಮ ಬಾರಿಗೆ ಏಕನಾಥ್ ಶಿಂಧೆ ಥಾಣೆಯಲ್ಲಿರುವ ತಮ್ಮ ನಿವಾಸಕ್ಕೆ ತೆರಳಿದ್ದಾರೆ

ಮುಂಬೈ: ಮಹಾರಾಷ್ಟ್ರ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಥಮ ಬಾರಿಗೆ ಏಕನಾಥ್ ಶಿಂಧೆ ಥಾಣೆಯಲ್ಲಿರುವ ತಮ್ಮ ನಿವಾಸಕ್ಕೆ ತೆರಳಿದ್ದಾರೆ. ಅಲ್ಲಿ ಅವರಿಗೆ ಭವ್ಯ ಸ್ವಾಗತ ದೊರೆಯಿತು. ಡೊಳ್ಳು ಬಾರಿಸುವ ಮೂಲಕ ಅವರನ್ನು ಸ್ವಾಗತಿಸಲಾಯಿತು.

ಪತ್ನಿ ಲತಾ ಏಕನಾಥ್ ಶಿಂಧೆ ಬ್ಯಾಂಡ್ ಬಾರಿಸುವ ಮೂಲಕ ಪತಿಯನ್ನು ಸ್ವಾಗತಿಸಿದರು. ಸಿಎಂ ಏಕನಾಥ್ ಅವರ ಸ್ವಂತ ಮನೆಗೆ ಬರುವ ಹಿನ್ನೆಲೆಯಲ್ಲಿ ಅವರ ನಿವಾಸದಲ್ಲಿ ಬ್ಯಾಂಡ್‌ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಏಕನಾಥ್ ಅವರ ಪತ್ನಿ ಲತಾ ಕೂಡ ಬ್ಯಾಂಡ್ ಬಾರಿಸುತ್ತಿದ್ದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅವರು ರಾತ್ರಿ 9.30ಕ್ಕೆ ಠಾಣೆಯ ಆನಂದನಗರದಲ್ಲಿರುವ ಮನೆಗೆ ತೆರಳಿದ್ದರು.

chief-minister-eknath-shindes-wife-played-drums-to-welcome-him-home

ಸಿಎಂ ಏಕನಾಥ್ ಅವರನ್ನು ಬ್ಯಾಂಡ್ ಬಾರಿಸುವ ಮೂಲಕ ಸ್ವಾಗತಿಸಿದ ಪತ್ನಿ - Kannada News

Follow us On

FaceBook Google News