ದೀಪಾವಳಿ ಖುಷಿಯಲ್ಲಿದ್ದ ಜನತೆಗೆ ಶಾಕ್! ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಳ
ನವದೆಹಲಿ: ದೀಪಾವಳಿ ಹಬ್ಬದಂದು (Diwali Festival) ಕೇಂದ್ರ ಸರ್ಕಾರ ದೇಶದ ಜನತೆಗೆ ಶಾಕ್ ನೀಡಿದೆ. ಈಗಾಗಲೇ ಹೆಚ್ಚಿದ ಬೆಲೆಯಿಂದ ತತ್ತರಿಸಿರುವ ಶ್ರೀಸಾಮಾನ್ಯನ ಮೇಲೆ ಮತ್ತೊಂದು ಹೊರೆ ಬಿದ್ದಿದೆ. ಪೆಟ್ರೋಲ್ ದರ (Petrol Rate) ಇಳಿಕೆ ಮಾಡುವುದಾಗಿ ಹೇಳುತ್ತಿದ್ದ ಬಿಜೆಪಿ ಸರ್ಕಾರ ಎಲ್ ಪಿಜಿ ಸಿಲಿಂಡರ್ ಬೆಲೆ (Gas Cylinder) ಏರಿಕೆ ಮಾಡಿದೆ.
ವಾಣಿಜ್ಯ ಉದ್ದೇಶಕ್ಕೆ ಬಳಸುವ (Commercial LPG Gas Cylinder) 19 ಕೆಜಿ ಎಲ್ ಪಿಜಿ ಸಿಂಡರ್ ಗೆ ಮತ್ತೆ 62 ರೂ. ಏರಿಸಲಾಗಿದೆ. ಇದರೊಂದಿಗೆ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1802 ರೂ.ಗೆ ತಲುಪಿದೆ. ಹೆಚ್ಚಿದ ಬೆಲೆಗಳು ತಕ್ಷಣವೇ ಜಾರಿಗೆ ಬರಲಿವೆ ಎಂದು ದೇಶೀಯ ತೈಲ ಕಂಪನಿಗಳು ಘೋಷಿಸಿವೆ. ಆದರೆ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾಗದಿರುವುದು ಕೊಂಚ ಸಮಾಧಾನ ತಂದಿದೆ.
ಇತ್ತೀಚಿನ ಏರಿಕೆಯೊಂದಿಗೆ, ಹೈದರಾಬಾದ್‌ನಲ್ಲಿ ವಾಣಿಜ್ಯ ಸಿಲಿಂಡರ್‌ನ ಬೆಲೆ ರೂ.2028 ಕ್ಕೆ ಏರಿದೆ. ಕೋಲ್ಕತ್ತಾದಲ್ಲಿ ರೂ.1911.50, ಮುಂಬೈನಲ್ಲಿ ರೂ.1754.50 ಮತ್ತು ಚೆನ್ನೈನಲ್ಲಿ ರೂ.1964.50 ಆಗಿದೆ. ಇದೇ ವೇಳೆ ಕಳೆದ ಕೆಲವು ತಿಂಗಳಿಂದ ವಾಣಿಜ್ಯ ಉದ್ದೇಶಕ್ಕೆ ಬಳಸುವ ಸಿಲಿಂಡರ್ ಬೆಲೆ ಏರಿಕೆಯಾಗುತ್ತಿರುವುದು ಗೊತ್ತಾಗಿದೆ.
ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ದೆಹಲಿಯಲ್ಲಿ 14 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ರೂ.803 ಆಗಿದ್ದರೆ, ಕೋಲ್ಕತ್ತಾದಲ್ಲಿ ರೂ.829, ಮುಂಬೈನಲ್ಲಿ ರೂ.802.50, ಬೆಂಗಳೂರಿನಲ್ಲಿ ರೂ.850, ಚೆನ್ನೈನಲ್ಲಿ ರೂ.818.50 ಮತ್ತು ವಿಜಯವಾಡದಲ್ಲಿ ರೂ.827.50 ಇದೆ. ಹೈದರಾಬಾದ್‌ನಲ್ಲಿ, ಇದು ರೂ.855 ಕ್ಕೆ ಲಭ್ಯವಿದೆ, ಇದು ಮೇಲಿನ ಎಲ್ಲಾ ನಗರಗಳಲ್ಲಿ ಅತ್ಯಧಿಕವಾಗಿದೆ.
Commercial LPG Gas Cylinder Prices Hiked From Today
Our Whatsapp Channel is Live Now 👇