ತಮಗೆ ಮಕ್ಕಳಾಗದ ಕಾರಣ ರೈಲ್ವೆ ನಿಲ್ದಾಣದಲ್ಲಿ ಮಗುವನ್ನು ಅಪಹರಿಸಿದ ದಂಪತಿಗಳು
ತಮಗೆ ಮಕ್ಕಳಾಗದ ಕಾರಣಕ್ಕೆ ದಂಪತಿಗಳು ರೈಲು ನಿಲ್ದಾಣದಿಂದ ಬಾಲಕನನ್ನು ಅಪಹರಿಸಿದ ಘಟನೆ. ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
- ಮಕ್ಕಳಾಗದ ಕಾರಣಕ್ಕೆ ದಂಪತಿ ಅಪಹರಣಕ್ಕೆ ಕೈಹಾಕಿದ ಘಟನೆ
- ರೈಲು ನಿಲ್ದಾಣದಲ್ಲಿ ತಾಯಿಯ ಗಮನ ತಪ್ಪಿಸಿ ಬಾಲಕನ ಅಪಹರಣ
- ಸಿಸಿಟಿವಿ ದೃಶ್ಯದಿಂದ ಪತ್ತೆ ಹಚ್ಚಿದ ಪೊಲೀಸರು
ರಾಜಸ್ಥಾನದ ಜೈಪುರದಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಮಗುವಿಗಾಗಿ ತೀವ್ರ ಹಂಬಲ ಹೊಂದಿದ್ದ ದಂಪತಿ, ತಮಗೆ ಮಕ್ಕಳಾಗದ ಕಾರಣಕ್ಕೆ, ಅಪರಾಧದ ಮಾರ್ಗಕ್ಕೆ ತಿರುಗಿದರು. ರೈಲು ನಿಲ್ದಾಣದಲ್ಲಿ ಮಗುವನ್ನು ಅಪಹರಿಸುವ ಯೋಜನೆ ರೂಪಿಸಿದರು. ಮಾರ್ಚ್ 14ರಂದು ಈ ಜೋಡಿ, ಜೈಪುರ ರೈಲು ನಿಲ್ದಾಣದಲ್ಲಿ ಮೂರು ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬಳನ್ನು ಗುರಿಯಾಗಿಸಿಕೊಂಡರು.
ಆ ಮಹಿಳೆಯ ಮಗುವಿಗೆ ಬಿಸ್ಕತ್ ಕೊಟ್ಟು ನಂಬಿಕೆ ಗಳಿಸಿದ ದಂಪತಿ, ಸಿಕ್ಕ ಅವಕಾಶವನ್ನು ಬಳಸಿಕೊಂಡು ಮಗುವನ್ನು ಕರೆದೊಯ್ದರು. ಬಳಿಕ ಉತ್ತರಪ್ರದೇಶಕ್ಕೆ ತೆರಳುವ ಬಸ್ ಹತ್ತಿದರು.
ಇದನ್ನೂ ಓದಿ: ಖಾಸಗಿ ಕಂಪನಿ ಬಸ್‌ನಲ್ಲಿ ಬೆಂಕಿ, ನಾಲ್ವರು ಉದ್ಯೋಗಿಗಳು ಸಜೀವ ದಹನ
ಇತ್ತ ಮಗುವನ್ನು ಕಾಣದೆ ತಾಯಿ ಆತಂಕಗೊಂಡು, ರೈಲ್ವೆ ಪೊಲೀಸ್ (GRP) ಠಾಣೆಗೆ ದೂರು ನೀಡಿದರು. ಪೊಲೀಸರು ಕೂಡಲೇ ಸಿಸಿಟಿವಿ ಕ್ಯಾಮರಾ ಫೂಟೇಜ್ ಪರಿಶೀಲಿಸಿದರು. ಫುಟೇಜ್‌ನಲ್ಲಿ ದಂಪತಿಯ ಚಲನೆಗಳು ಸ್ಪಷ್ಟವಾಗಿ ದಾಖಲಾಗಿದ್ದು, ಅವರಿಗಾಗಿ ಹುಡುಕಾಟ ಆರಂಭವಾಯಿತು.
ಕಳೆದ ಎರಡು ದಿನಗಳಲ್ಲಿ, ಪೊಲೀಸರು ರಾಜಸ್ಥಾನದ ದೌಸಾ ಜಿಲ್ಲೆಯ ಮಹುವಾದಲ್ಲಿ ಈ ದಂಪತಿಯನ್ನು ಪತ್ತೆ ಹಚ್ಚಿದರು. ಅವರ ಮನೆಯೊಂದರಲ್ಲಿ ಬಾಲಕನನ್ನು ಸುರಕ್ಷಿತವಾಗಿ ಪತ್ತೆ ಮಾಡಿದ ಪೊಲೀಸರು, ತಕ್ಷಣ ತಾಯಿಗೆ ಮರಳಿಸಿದರು. ಈ ದಂಪತಿ ಬಾಲಕನಿಗೆ ಹೊಸ ಹೆಸರು ಇಟ್ಟು, ತನ್ನನ್ನು ತಾಯಿ ಎಂದು ಕರೆಯಬೇಕು ಎಂಬ ಒತ್ತಡಕೂಡ ಹಾಕಿದ್ದರು ಎಂಬ ವಿಷಯವನ್ನೂ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಈ ಪ್ರಕರಣ ಇದೀಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ರೈಲು ನಿಲ್ದಾಣದ ಅಪಹರಣದ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯ ತನಿಖೆ ಮುಂದುವರಿಯುತ್ತಿದೆ.
Couple Kidnaps Child from Railway Station