ಫೆಂಗಲ್ ಚಂಡಮಾರುತ: ತಮಿಳುನಾಡು ದುರಂತ, 18ಕ್ಕೂ ಹೆಚ್ಚು ಮಂದಿ ಸಾವು
ಸೋಮವಾರ ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ, ಫೆಂಗಲ್ ಚಂಡಮಾರುತದಿಂದ ಭಾರೀ ಮಳೆಗೆ 18 ಮಂದಿ ಸಾವನ್ನಪ್ಪಿದ್ದಾರೆ.
ಫೆಂಗಲ್ ಚಂಡಮಾರುತ (Cyclone Fengal): ತಮಿಳುನಾಡು ರಾಜ್ಯಕ್ಕೆ ಫೆಂಗಲ್ ಚಂಡಮಾರುತ ಅಪ್ಪಳಿಸಿದೆ. ತಮಿಳುನಾಡು ಮತ್ತು ಪುದುಚೇರಿ ಸಮೀಪ ಕರಾವಳಿಗೆ ಅಪ್ಪಳಿಸಿರುವ ಚಂಡಮಾರುತ ತೀವ್ರ ಹಾನಿ ಉಂಟುಮಾಡುತ್ತಿದೆ.
ಇದರ ಪರಿಣಾಮ ಸೋಮವಾರ ತಮಿಳುನಾಡಿನ (Tamil Nadu) ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ (Heavy Rain). ಏತನ್ಮಧ್ಯೆ, ಚಂಡಮಾರುತ ದುರ್ಬಲಗೊಂಡು ಕಡಿಮೆ ಒತ್ತಡವಾಗಿ ಮಾರ್ಪಟ್ಟಿರುವುದರಿಂದ ನೀಲಗಿರಿ, ಈರೋಡ್, ಕೊಯಮತ್ತೂರು, ದಿಂಡಿಗಲ್, ಕೃಷ್ಣಗಿರಿ ಸೇರಿದಂತೆ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಭಾರೀ ಮಳೆ, ಭೂಕುಸಿತದಲ್ಲಿ ಒಂದೇ ಕುಟುಂಬದ ಏಳು ಮಂದಿ ಸಾವು
ಮತ್ತು, ತಮಿಳುನಾಡಿನಲ್ಲಿ, ಫೆಂಗಲ್ ಚಂಡಮಾರುತದಿಂದ ಭಾರೀ ಮಳೆಗೆ 18 ಮಂದಿ ಸಾವನ್ನಪ್ಪಿದ್ದಾರೆ. ಚಂಡಮಾರುತದಿಂದ ಉಂಟಾದ ಭಾರೀ ಮಳೆಯಿಂದಾಗಿ, ತಿರುವಣ್ಣಾಮಲೈನಲ್ಲಿ ಅನೇಕ ಮನೆಗಳ ಮೇಲೆ ಭೂಕುಸಿತ ಸಂಭವಿಸಿದೆ, ಈ ಘಟನೆಯಲ್ಲಿ ಏಳು ಜನರು ಸಾವನ್ನಪ್ಪಿದರು.
ಇಬ್ಬರು ವಯಸ್ಕರು ಸೇರಿದಂತೆ ಐದು ಮಕ್ಕಳ ಶವಗಳನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ನಿನ್ನೆಯಿಂದ (ಡಿಸೆಂಬರ್ 2) ಅಧಿಕಾರಿಗಳು 27 ಗಂಟೆಗೂ ಹೆಚ್ಚು ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳ ಪ್ರಯತ್ನ ಫಲ ನೀಡಲಿಲ್ಲ. ಅಲ್ಲದೆ, ವಿಲ್ಲುಪುರಂನಲ್ಲಿ ಮಳೆಯಿಂದಾಗಿ ಇನ್ನೂ 8 ಜನರು ಸಾವನ್ನಪ್ಪಿದ್ದಾರೆ.
Cyclone Fengal Kills 18 In Tamil Nadu