ನರೇಂದ್ರ ಮೋದಿಜಿ ಬಳಸುವ ಮೊಬೈಲ್ ಯಾವುದು ಗೊತ್ತಾ? ದುಬಾರಿ ಅಲ್ಲ, ಆದ್ರೂ ನಾವು ನೀವು ಖರೀದಿಸೋಕೆ ಆಗಲ್ಲ
ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ (prime minister Narendra Modi) ಅವರು ಇಂದು 73ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇಡೀ ದೇಶವೇ ಮೋದಿಜಿ ಅವರ ಹುಟ್ಟುಹಬ್ಬಕ್ಕೆ (Narendra Modi’s birthday) ಶುಭ ಹಾರೈಸಿದ್ದಾರೆ.
ಈ ಸಮಯದಲ್ಲಿ ನರೇಂದ್ರ ಮೋದಿ ಅವರ ಬಗ್ಗೆ ಸಾಕಷ್ಟು ಕುತೂಹಲಕಾರಿ ವಿಷಯಗಳು ಸೋಶಿಯಲ್ ಮೀಡಿಯಾಗಳಲ್ಲಿ (social media) ವೈರಲ್ (viral) ಆಗುತ್ತಿದೆ. ನರೇಂದ್ರ ಮೋದಿಜಿ ಅವರು ಬಳಸುವ ಡ್ರೆಸ್ (dress) ಅವರ ವ್ಯಕ್ತಿತ್ವ ಅವರು ಬಳಸುವ ಮೊಬೈಲ್ (mobile) ಹೀಗೆ ಹಲವು ವಿಚಾರಗಳ ಬಗ್ಗೆ ಚರ್ಚೆಗಳು ಕೂಡ ಆರಂಭವಾಗಿವೆ.
ನರೇಂದ್ರ ಮೋದಿ (PM Narendra Modi) ಅವರ ಬಗ್ಗೆ ಗೊತ್ತಿಲ್ಲದ ವಿಚಾರಗಳು ಸಾಕಷ್ಟಿವೆ, ಸದ್ಯ ಸೋಶಿಯಲ್ ಮೀಡಿಯಾದಲ್ಲಿ (social media) ವೈರಲ್ ಆಗಿರುವ ವಿಚಾರ ಮೋದಿಜಿ ಅವರು ಬಳಸುವ ಮೊಬೈಲ್ (Smartphone) ಬಗ್ಗೆ.
ಮಹಿಳೆಯರಿಗೆ ತಿಂಗಳಿಗೆ ₹2500, ಉಚಿತ ಬಸ್ ಪ್ರಯಾಣ, ಜೊತೆಗೆ ಗ್ಯಾಸ್ ಸಿಲಿಂಡರ್; ಸೋನಿಯಾ ಗಾಂಧಿ
ಯಾವುದೇ ದೊಡ್ಡ ಉದ್ಯಮಿಗಳಿರಬಹುದು (businessman) ಅಥವಾ ದೇಶದ ಪ್ರಭಾವಿ ವ್ಯಕ್ತಿಗಳೆ ಇರಬಹುದು ಅವರು ಬಳಸುವ ವಸ್ತುಗಳ ಬಗ್ಗೆ ಹೆಚ್ಚಿನ ಕುತೂಹಲ ಇದ್ದೇ ಇರುತ್ತೆ, ಸಾಕಷ್ಟು ಉದ್ಯಮಿಗಳು ಚಿನ್ನದ ಲೇಪನ ಇರುವಂತಹ ಫೋನ್ (Gold Coated phone) ಅನ್ನು ಬಳಸಿರುವುದನ್ನು ನೀವು ನೋಡಿರಬಹುದು.
ಆದರೆ ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರ ಫೋನ್ ಇವೆಲ್ಲವುದಕ್ಕಿಂತ ಡಿಫ್ರೆಂಟ್. ಬಹಳ ದುಬಾರಿ ಆಗಿರಬಹುದು ಎಂದು ನೀವು ಊಹಿಸಿದರೆ ಅದು ತಪ್ಪು. ಆದರೆ ಈ ಫೋನಿನ ವಿಶೇಷತೆ ಮಾತ್ರ ಸಾಕಷ್ಟಿದೆ.
ನರೇಂದ್ರ ಮೋದಿಜಿ ಬಳಸುವ ಫೋನ್ ಯಾವುದು
ಇದರ ಬಗ್ಗೆ ಸಾಮಾನ್ಯವಾಗಿ ಎಲ್ಲರಲ್ಲೂ ಕುತೂಹಲ ಇದ್ದೇ ಇರುತ್ತೆ. ಮೋದಿಜಿ ಅವರು ಬಳಸುವ ಫೋನಿನ ಹೆಸರು ರುದ್ರ (Rudra). ಅವರು ಬಳಸುತ್ತಿರುವುದು ಆಂಡ್ರಾಯ್ಡ್ ಫೋನ್ (Android phone) ಆಗಿದ್ದರೂ ಕೂಡ ಫೀಚರ್ (features) ಗಳು ಮಾತ್ರ ಬಹಳ ಡಿಫರೆಂಟ್ ಆಗಿರುತ್ತವೆ.
ಪ್ರಧಾನಿಗಾಗಿ ಆಂಡ್ರಾಯ್ಡ್ ಫೋನ್ ಅನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ (electronics and information technology) ಸಚಿವಾಲಯ ವಿಶೇಷ ಮುತುವರ್ಜಿಯಿಂದ ತಯಾರಿಸಿದೆ.
168 ಇಲಿ ಹಿಡಿಯಲು ರೈಲ್ವೆಯಲ್ಲಿ 69 ಲಕ್ಷ ಖರ್ಚು, ಮಾಹಿತಿ ಹಕ್ಕು (ಆರ್‌ಟಿಐ) ಮೂಲಕ ಬಹಿರಂಗ
ಮೋದಿಜಿ ಅವರ ಮೊಬೈಲ್ ನಲ್ಲಿ ಮೊದಲು ಸುರಕ್ಷತೆಗೆ (safety) ಹೆಚ್ಚಿನ ಗಮನ ನೀಡಲಾಗುತ್ತದೆ. ಸಂವಾದಕ್ಕಾಗಿ ಮೋದಿಜಿ ಅವರು ಉಪಗ್ರಹ ಅಥವಾ ಆರ್ ಎ ಎಕ್ಸ್ (RAX) ಫೋನ್ ಗಳನ್ನು ಬಳಸುತ್ತಾರೆ ಎನ್ನುವ ಮಾಹಿತಿ ಇದೆ.
ಪ್ರಧಾನಮಂತ್ರಿಯವರು ಬಳಸುವ ಫೋನ್ ನಲ್ಲಿ ಸುರಕ್ಷತೆಯ ವಿಷಯಕ್ಕೆ ಹೆಚ್ಚಿನ ಗಮನ ನೀಡಲಾಗುತ್ತದೆ ಹಾಗೂ ಅದೇ ರೀತಿ ಈ ಫೋನ್ ಅನ್ನು ವಿಶೇಷವಾಗಿ ನಿರ್ಮಾಣ ಮಾಡಿರಲಾಗುತ್ತೆ. ಯಾವುದೇ ಸಮಸ್ಯೆ ಆಗಬಾರದು ಎಂದು ಬಹಳ ಉತ್ತಮ ತಂತ್ರಜ್ಞಾನವನ್ನು (technology) ಕೂಡ ಅಳವಡಿಸಲಾಗಿದೆ.
ಸುರಕ್ಷತೆಯ ದೃಷ್ಟಿಯಿಂದ ಹೊಸ ಸಾಫ್ಟ್ವೇರ್
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಳಸುವ ರುದ್ರ ಫೋನ್ ಹೊಸ ಸಾಫ್ಟ್ವೇರ್ (software) ಗಳನ್ನು ಒಳಗೊಂಡಿದೆ. ಇನ್ನು ಸೈಬರ್ ಕ್ರೈಂ (cyber crime) ತಡೆಗಟ್ಟುವ ಸಲುವಾಗಿ ಈ ಫೋನಿನಲ್ಲಿ ಅಂತರ್ ನಿರ್ಮಿತ ಸೇಫ್ಟಿ ಚಿಪ್ ಕೂಡ ಅಳವಡಿಸಲಾಗಿದೆ.
ಸಾಮಾನ್ಯರು ಫೋನ್ ಗಳನ್ನೇ ಈಗ ಹ್ಯಾಕ್ (hack) ಮಾಡುತ್ತಾರೆ, ಹಾಗಾಗಿ ಪ್ರಧಾನಮಂತ್ರಿಯವರ ಫೋನ್ ಹ್ಯಾಕ್ ಮಾಡಲು ಕೂಡ ಪ್ರಯತ್ನಿಸುವುದು ದೊಡ್ಡ ವಿಷಯವಲ್ಲ. ಆದ್ದರಿಂದಲೇ ಯಾವುದೇ ಕಾರಣಕ್ಕೂ ಪ್ರಧಾನ ಮಂತ್ರಿ ಅವರ ಫೋನ್ ಹ್ಯಾಕ್ ಆಗಬಾರದು ಎಂದು ವಿಶೇಷ ಗಮನ ನೀಡಲಾಗುತ್ತೆ.
ಮಿಲಿಟರಿ (military) ಆವರ್ತನ ಬ್ಯಾಂಡ್ ನಲ್ಲಿ ಕಾರ್ಯ ನಿರ್ವಹಿಸುವ ರುದ್ರ ಫೋನ್ ಬಗ್ಗೆ ಯಾರು ತಿಳಿದುಕೊಳ್ಳಲು ಸಾಧ್ಯವಿಲ್ಲ, ಆ ಫೋನ್ ಅನ್ನು ಯಾರು ಹ್ಯಾಕ್ ಮಾಡಲು ಕೂಡ ಸಾಧ್ಯವಿಲ್ಲ.
Weather Update: ದೇಶದಾದ್ಯಂತ ಭಾರೀ ಮಳೆ 25ಕ್ಕೂ ಹೆಚ್ಚು ರಾಜ್ಯಗಳಲ್ಲಿ ಎರಡು ದಿನಗಳ ಕಾಲ ಅಲರ್ಟ್
ಮೋದಿಜಿ ಫೋನ್, ಮೇಲುಸ್ತುವಾರಿ ಮಾಡೋದು ಯಾರು?
ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ (NTRO) ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ (DEITY) ಹಾಗೂ ಇತರ ಸೀಕ್ರೆಟ್ ಏಜೆನ್ಸಿಗಳು ಪ್ರಧಾನಮಂತ್ರಿ ಅವರ ಫೋನ್ ಅನ್ನು ಮೇಲ್ವಿಚಾರಣೆ ಮಾಡುತ್ತವೆ.
ಒಬ್ಬ ಪ್ರಧಾನಿ ಆಗಿರುವವರ ಜೀವಕ್ಕೆ ಮಾತ್ರವಲ್ಲದೆ ಅವರ ಫೋನ್ ಗೂ ಕೂಡ ಸಾಕಷ್ಟು ಸುರಕ್ಷತೆ ಬೇಕಾಗುತ್ತದೆ. ಅವರ ಒಂದೇ ಒಂದು ಫೋನ್ ಕಾಲ್ ಹ್ಯಾಕ್ ಆದರೂ ಸಾಕು ಇಡೀ ದೇಶ ಸಮಸ್ಯೆ ಎದುರಿಸಬೇಕಾಗಬಹುದು.
ಹಾಗಾಗಿ ಸಂಪೂರ್ಣ ಸುರಕ್ಷತೆಯ ದೃಷ್ಟಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಳಸುವ ಫೋನ್ ನ ಬ್ರಾಂಡ್ ಯಾವುದು ಎಂದು ಬಹಿರಂಗಪಡಿಸುವುದಿಲ್ಲ. ಆದರೆ ಸದಾ ಮಿಲಿಟರಿ ಹಾಗೂ ಇತರ ಸೆಕ್ಯೂರಿಟಿ ಸಂಸ್ಥೆಗಳ ಕಣ್ಗಾವಲಿನಲ್ಲಿ ಎನ್ನುವುದು ಸತ್ಯ.
Do you know which mobile phone is used by PM Narendra Modi