India News
ಹಿಮಾಚಲ ಪ್ರದೇಶದಲ್ಲಿ ಲಘು ಭೂಕಂಪ, ಮಂಗಳವಾರ ಮಧ್ಯಾಹ್ನ ಭೂಮಿ ಕಂಪನ
Earthquake : ಹಿಮಾಚಲ ಪ್ರದೇಶ (Himachal Pradesh) ಲಘು ಭೂಕಂಪದಿಂದ ತತ್ತರಿಸಿದೆ. ಮಂಡಿ ಜಿಲ್ಲೆಯಲ್ಲಿ ಮಂಗಳವಾರ ಮಧ್ಯಾಹ್ನ ಭೂಮಿ ಕಂಪಿಸಿದೆ. ಈ ಕುರಿತು ಭೂಕಂಪ ಶಾಸ್ತ್ರದ ರಾಷ್ಟ್ರೀಯ ಕೇಂದ್ರವು ಬಹಿರಂಗಪಡಿಸಿದೆ.
ಮಂಗಳವಾರ ಮಧ್ಯಾಹ್ನ ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 3.3ರಷ್ಟಿತ್ತು. ಕುಲು ಮತ್ತು ಮಂಡಿ ನಡುವಿನ ಗುಡ್ಡಗಾಡು ಪ್ರದೇಶದಲ್ಲಿ 5 ಕಿಮೀ ಆಳದಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
ಆದರೆ, ಭೂಕಂಪನದ ಪ್ರಮಾಣ ಕಡಿಮೆಯಾಗಿದ್ದರಿಂದ ಯಾವುದೇ ಪ್ರಾಣ ಅಥವಾ ಆಸ್ತಿಪಾಸ್ತಿ ಹಾನಿಯಾಗಿಲ್ಲ. ಮತ್ತೊಂದೆಡೆ ಭೂಕಂಪನದಿಂದ ಜನರು ಭಯಭೀತರಾಗಿದ್ದರು.
Earthquake Hits Mandi In Himachal No Injuries
Our Whatsapp Channel is Live Now 👇