Earthquake: ಜಮ್ಮು ಮತ್ತು ಕಾಶ್ಮೀರದಲ್ಲಿ ಲಘು ಭೂಕಂಪ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu Kashmir) ಕಿಶ್ತ್ವಾರ್ ನಲ್ಲಿ ಮಧ್ಯರಾತ್ರಿ ಭೂಕಂಪ (Earthquake) ಸಂಭವಿಸಿದೆ. ಭಾನುವಾರ ರಾತ್ರಿ 11.15ಕ್ಕೆ ಕಿಶ್ತ್ವಾರ್ ನಲ್ಲಿ ಭೂಕಂಪ ಸಂಭವಿಸಿದೆ. ಅದರ ತೀವ್ರತೆ 3.6 ಎಂದು ದಾಖಲಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ. ಭೂಮಿಯ ಒಳಭಾಗದಲ್ಲಿ 10 ಕಿಲೋಮೀಟರ್ ಆಳದಲ್ಲಿ ಚಲನೆಗಳು ಸಂಭವಿಸಿವೆ ಎಂದು ತಿಳಿದುಬಂದಿದೆ. ಇದರಿಂದ ಯಾವುದೇ ಪ್ರಾಣ ಹಾನಿ ಅಥವಾ ಆಸ್ತಿ-ಪಾಸ್ತಿ ನಷ್ಟವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
News Live: ಕನ್ನಡ ಲೈವ್ ನ್ಯೂಸ್ ಅಪ್ಡೇಟ್ಸ್ 09-01-2023
ಕಳೆದ 10 ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಇದು ಮೂರನೇ ಭೂಕಂಪವಾಗಿದೆ. ಜನವರಿ 1 ರಂದು ದೆಹಲಿಯಲ್ಲಿ 3.8 ತೀವ್ರತೆಯ ಭೂಕಂಪ ಸಂಭವಿಸಿದೆ. ಇದರ ಪರಿಣಾಮ ಕಾಶ್ಮೀರದಲ್ಲೂ ಕಂಪನ ಉಂಟಾಗಿದೆ. ಈ ತಿಂಗಳ 5 ರಂದು ಅಫ್ಘಾನಿಸ್ತಾನದಲ್ಲಿ 5.9 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದರಿಂದ ಜಮ್ಮು ಮತ್ತು ಕಾಶ್ಮೀರ ಮತ್ತು ದೆಹಲಿಯಲ್ಲಿಯೂ ಭೂಕಂಪ ಸಂಭವಿಸಿದೆ.
Earthquake Of Magnitude 3 6 Hits Jammu Kashmir
Earthquake of Magnitude:3.6, Occurred on 08-01-2023, 23:12:30 IST, Lat: 33.54 & Long: 76.24, Depth: 10 Km ,Location: Kishtwar, Jammu and Kashmir, India for more information Download the BhooKamp App https://t.co/kJzYMByNkr@Ravi_MoES @Dr_Mishra1966 @ndmaindia @Indiametdept pic.twitter.com/9Kv74TmUXe
— National Center for Seismology (@NCS_Earthquake) January 8, 2023