ರೈತರ ಸಾಲ ಮನ್ನಾ, ಫ್ರೀ ವಿದ್ಯುತ್, ₹500 ರೂಪಾಯಿಗೆ ಸಿಲೆಂಡರ್! ಹಬ್ಬದ ಗಿಫ್ಟ್ ಕೊಟ್ಟ ಸರ್ಕಾರ

ವಿಮೆ (Insurance), ಕಡಿಮೆ ಬೆಲೆಗೆ ಸಿಲಿಂಡರ್ (Gas Cylinder) 100 ಯೂನಿಟ್ ವಿದ್ಯುತ್ (free electricity) ವರೆಗೆ ಉಚಿತ ಹಾಗೂ 200 ಯೂನಿಟ್ ವಿದ್ಯುತ್ ಗೆ ಅರ್ಧ ವಿದ್ಯುತ್ ಬಿಲ್ ಪಾವತಿ, ಸೌಲಭ್ಯ

ಕರ್ನಾಟಕ ವಿಧಾನಸಭಾ ಎಲೆಕ್ಷನ್ಗಿಂತಲೂ (Karnataka Vidhan sabha election) ಮೊದಲು ಕಾಂಗ್ರೆಸ್ ಘೋಷಣೆ ಮಾಡಿದ ಐದು ಗ್ಯಾರಂಟಿ ಯೋಜನೆಗಳಿಂದಾಗಿ ಸರ್ಕಾರ ಅಧಿಕಾರದ ಗದ್ದುಗೆ ಏರಿದೆ ಎಂದು ಹೇಳಿದರೆ ಅತಿಶಯೋಕ್ತಿ ಅಲ್ಲ.

ಚುನಾವಣೆಯ ಸಂದರ್ಭದಲ್ಲಿ ಪಕ್ಷಗಳು ಸಾಕಷ್ಟು ಭರವಸೆಗಳನ್ನು ಜನಸಾಮಾನ್ಯರಿಗೆ ನೀಡುತ್ತವೆ ಆದರೆ ಆ ಭರವಸೆಗಳು ಈಡೇರುವುದು ಬಹಳ ವಿರಳ, ಈ ಬಾರಿ ಕಾಂಗ್ರೆಸ್ (Congress) ಮಾತ್ರ ಇದೆ ಭರವಸೆಗಳ ಮೂಲಕ ಅಧಿಕಾರ ಸ್ವೀಕರಿಸಿದ್ದು ಮಾತ್ರವಲ್ಲದೆ ರಾಜ್ಯದಲ್ಲಿ ಅಂತಹ ಯೋಜನೆಗಳನ್ನು ಜಾರಿಗೆ ಕೂಡ ತಂದಿದೆ.

ದೇಶದೆಲ್ಲೆಡೆ ಚುನಾವಣಾ ಟ್ರಿಕ್ಸ್; (election tricks)

ಇನ್ನು ಸದ್ಯದಲ್ಲಿ ದೇಶದ ಐದು ಪ್ರಮುಖ ರಾಜ್ಯಗಳಲ್ಲಿ, ರಾಜಸ್ಥಾನ, ತೆಲಂಗಾಣ, ಮಧ್ಯಪ್ರದೇಶ, ಮಿಜೋರಾಂ ಅದು ಛತ್ತಿಸ್ ಘಡ್ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಂದು ರಾಜ್ಯವು ಕೂಡ ತಮ್ಮದೇ ಆಗಿರುವ ರೀತಿಯಲ್ಲಿ ಭರವಸೆಗಳನ್ನು ಘೋಷಣೆ ಮಾಡುತ್ತಿದ್ದಾರೆ, ಅದರಲ್ಲೂ ಕರ್ನಾಟಕದಲ್ಲಿನ ಯೋಜನೆಗಳಂತೆ ಇತರ ರಾಜ್ಯಗಳಲ್ಲಿಯೂ ಕೂಡ ಕಾಂಗ್ರೆಸ್ ಜಾರಿಗೆ ತರುವುದರಲ್ಲಿದೆ.

ರೈತರ ಸಾಲ ಮನ್ನಾ, ಫ್ರೀ ವಿದ್ಯುತ್, ₹500 ರೂಪಾಯಿಗೆ ಸಿಲೆಂಡರ್! ಹಬ್ಬದ ಗಿಫ್ಟ್ ಕೊಟ್ಟ ಸರ್ಕಾರ - Kannada News

ರಾಜ್ಯದಲ್ಲಿ ಹೊಸ ಪ್ರಣಾಳಿಕೆ ಬಿಡುಗಡೆ!

ರಾಜ್ಯದಲ್ಲಿ ಹೊಸ ಪ್ರಣಾಳಿಕೆ ಬಿಡುಗಡೆ ಆಗಿದ್ದು ಈ ಪ್ರಣಾಳಿಕೆಯಲ್ಲಿ ಜನರಿಗೆ ಸಾಕಷ್ಟು ಪ್ರಯೋಜನ ಆಗುವಂತಹ ಯೋಜನೆಗಳ ಬಗ್ಗೆ ತಿಳಿಸಲಾಗಿದೆ. ತನ್ನ ಪಕ್ಷ ಅಧಿಕಾರಕ್ಕೆ ಬಂದರೆ ಎರಡು ಲಕ್ಷ ರೂಪಾಯಿಗಳವರೆಗೆ ಸಾಲ ಮನ್ನಾ (loan waiver) ಮಾಡುವುದಾಗಿ ಮಧ್ಯಪ್ರದೇಶದಲ್ಲಿ ಘೋಷಿಸಿದೆ. ತಿಂಗಳಿಗೆ 1,500 ರೂಪಾಯಿಗಳನ್ನು ಉಚಿತವಾಗಿ ನೀಡಲು ಸರ್ಕಾರ ಮುಂದಾಗಿದೆ.

ಇಷ್ಟೇ ಅಲ್ಲದೆ 500 ರೂಪಾಯಿಗಳಿಗೆ ಸಿಲೆಂಡರ್ (gas cylinder) ನೀಡುವ ಭರವಸೆಯನ್ನು ನೀಡಿದೆ. ರಾಜ್ಯದ ಪ್ರತಿಯೊಬ್ಬ ನಾಗರಿಕರಿಗೆ 25 ಲಕ್ಷ ರೂಪಾಯಿಗಳ ಆರೋಗ್ಯ ವಿಮೆ, ಓಬಿಸಿ ಗಳಿಗೆ 27% ನಷ್ಟು ಮೀಸಲಾತಿ ನೀಡುವುದಾಗಿ ಈ ಮಧ್ಯಪ್ರದೇಶ ರಾಜ್ಯದಲ್ಲಿ ಘೋಷಣೆ ಮಾಡಲಾಗಿದೆ.

ಮಧ್ಯಪ್ರದೇಶದಲ್ಲಿ ಹೊಸ ಪ್ರಣಾಳಿಕೆ ಬಿಡುಗಡೆ!

electionಮಧ್ಯಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಮಾಜಿ ಮುಖ್ಯಮಂತ್ರಿ ಕಮಲನಾಥ್ (kamalnath) ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್ (Digvijay Singh) ಚುನಾವಣೆಗೂ ಪೂರ್ವ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

ಈ ಪ್ರಣಾಳಿಕೆಯಲ್ಲಿ ಸಾಕಷ್ಟು ವಿಚಾರಗಳನ್ನು ಪ್ರಸ್ತಾಪಿಸಲಾಗಿದ್ದು, ವಿಮೆ (Insurance), ಕಡಿಮೆ ಬೆಲೆಗೆ ಸಿಲಿಂಡರ್ (Gas Cylinder) 100 ಯೂನಿಟ್ ವಿದ್ಯುತ್ (free electricity) ವರೆಗೆ ಉಚಿತ ಹಾಗೂ 200 ಯೂನಿಟ್ ವಿದ್ಯುತ್ ಗೆ ಅರ್ಧ ವಿದ್ಯುತ್ ಬಿಲ್ ಪಾವತಿ, ಸೌಲಭ್ಯವನ್ನು ನೀಡುವುದಾಗಿ ತಿಳಿಸಿದೆ.

ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಬಯಸಿರುವ ಕಾಂಗ್ರೆಸ್ ಪಕ್ಷ ಮಧ್ಯಪ್ರದೇಶದಲ್ಲಿ ಸಾಕಷ್ಟು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿದೆ. ಗೋಧಿಯನ್ನು ಕ್ವಿಂಟಾಲಿಗೆ 2,600 ಭತ್ತವನ್ನು 2,500 ಗಳಿಗೆ ಖರೀದಿಸುವ ಭರವಸೆ ನೀಡಿದೆ.

ರಾಜ್ಯದಲ್ಲಿ ಚುನಾವಣೆಯ ಸಮಯದಲ್ಲಿ ಹೊರಡಿಸಿರುವ ಪ್ರಣಾಳಿಕೆಯಿಂದಾಗಿ ಎಲೆಕ್ಷನ್ ಗೆದ್ದಿರುವ ಕಾಂಗ್ರೆಸ್ ಪಕ್ಷ ಇತರ ರಾಜ್ಯಗಳಲ್ಲಿಯೂ ಇದೆ ಟ್ರಿಕ್ಸ್ ಬಳಸಿ ಚುನಾವಣೆ ಗೆಲ್ಲಲು ಪ್ರಯತ್ನಿಸುತ್ತಿದೆ.

ಐಪಿಎಲ್ ತಂಡ ರಚನೆ!

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಉಳಿದ ಎಲ್ಲಾ ರಾಜ್ಯಗಳಿಗಿಂತ ಸ್ವಲ್ಪ ವಿಭಿನ್ನವಾಗಿ ಯೋಚಿಸಿದ್ದು ಕ್ರೀಡೆಗೆ ಪ್ರೋತ್ಸಾಹ ನೀಡುವ ಸಲುವಾಗಿ ಮಧ್ಯಪ್ರದೇಶದಲ್ಲಿ ಪ್ರತ್ಯೇಕ ಐಪಿಎಲ್ ತಂಡ ರಚನೆ (IPL team) ಮಾಡುವುದಾಗಿ ತಿಳಿಸಿದೆ.

ಮಧ್ಯಪ್ರದೇಶದಲ್ಲಿ ನವೆಂಬರ್ 17ರಂದು 230 ಸೀಟುಗಳಿಗೆ ಚುನಾವಣೆ ನಡೆಯಲಿದೆ. ಮೂರರಿಂದ ಫಲಿತಾಂಶ ಪ್ರಕಟವಾಗಲಿದೆ. 144 ಅಭ್ಯರ್ಥಿಗಳನ್ನ ಸಜ್ಜುಗೊಳಿಸಿರುವ ಕಾಂಗ್ರೆಸ್ ತನ್ನ ಪ್ರಣಾಳಿಕೆಯ ಭರವಸೆಯಿಂದಾಗಿ ಮಧ್ಯಪ್ರದೇಶದ ಆಡಳಿತ ಗಳಿಸಿಕೊಳ್ಳುತ್ತದೆಯಾ ಎನ್ನುವುದನ್ನು ಕಾದು ನೋಡಬೇಕು.

Farmers loan waiver, free electricity, cylinder for 500 rupees

Follow us On

FaceBook Google News

Farmers loan waiver, free electricity, cylinder for 500 rupees