ಕುಡಿಯುವ ನೀರಿಗೆ ವಿಷ ಬೆರೆಸಿ 10 ವರ್ಷದ ಮಗನನ್ನು ಕೊಂದ ತಂದೆ
ಫೆಬ್ರವರಿ 4 ರಂದು, ಪತ್ನಿ ಮನೆಯಲ್ಲಿ ಇಲ್ಲದಿದ್ದಾಗ, ತಂದೆ ತನ್ನ 10 ವರ್ಷದ ಮಗ ಮತ್ತು ಮಗಳಿಗೆ ವಿಷ ನೀಡಿ ಕೊಲ್ಲಲು ಯೋಜಿಸಿದ್ದನು.
ಅಹಮದಾಬಾದ್ (Ahmedabad): ವ್ಯಕ್ತಿಯೊಬ್ಬ ತನ್ನ ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದ, ಈ ವೇಳೆ ಕುಡಿಯುವ ನೀರಿನಲ್ಲಿ ವಿಷ ಬೆರೆಸಿ ಮೊದಲು ತನ್ನ ಹತ್ತು ವರ್ಷದ ಮಗನಿಗೆ ಕೊಟ್ಟಿದ್ದಾನೆ. ಅದನ್ನು ಕುಡಿದ ಬಾಲಕ ಅಸ್ವಸ್ಥನಾಗಿದ್ದಾನೆ.
ಇದನ್ನು ನೋಡಿದ ತಂದೆ ಗಾಬರಿಗೊಂಡು ತನ್ನ ಆತ್ಮಹತ್ಯೆ ಯೋಜನೆಯನ್ನು ಕೈಬಿಟ್ಟು, ಮನೆಯಿಂದ ಓಡಿಹೋಗಿದ್ದಾನೆ ಈ ಘಟನೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದಿದೆ.
ಬಾಪುನಗರ ಪ್ರದೇಶದ ನಿವಾಸಿ 47 ವರ್ಷದ ಕಲ್ಪೇಶ್ ಗೋಹೆಲ್ ತನ್ನ ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದ. ಫೆಬ್ರವರಿ 4 ರಂದು, ಅವರ ಪತ್ನಿ ಮನೆಯಲ್ಲಿ ಇಲ್ಲದಿದ್ದಾಗ, ತಂದೆ ತನ್ನ 10 ವರ್ಷದ ಮಗ ಮತ್ತು ಮಗಳಿಗೆ ವಿಷ ನೀಡಿ ಕೊಲ್ಲಲು ಯೋಜಿಸಿದ್ದನು.
ಮದುವೆಯಾದ ಕೆಲವೇ ಗಂಟೆಗಳಲ್ಲಿ ಹಣ, ಆಭರಣದೊಂದಿಗೆ ಹುಡುಗಿ ಎಸ್ಕೇಪ್
ಆದರೆ, ಹತ್ತು ವರ್ಷದ ಮಗನಿಗೆ ವಿಷ ಬೆರೆಸಿದ್ದ ನೀರು ಕುಡಿದ ತಕ್ಷಣ ವಾಂತಿ ಆಗಿದೆ. ಬಾಲಕನ ದೇಹದ ಬಣ್ಣ ಬದಲಾಗತೊಡಗಿದೆ, ಇದನ್ನು ನೋಡಿ ಕಲ್ಪೇಶ್ ಗೋಹೆಲ್ ಭಯಭೀತರಾಗಿ ತಮ್ಮ ಮೊಬೈಲ್ ಫೋನ್ ಅನ್ನು ಮನೆಯಲ್ಲಿಯೇ ಬಿಟ್ಟು ಓಡಿಹೋಗಿದ್ದಾನೆ.
ತನ್ನ ಸಹೋದರನ ಸ್ಥಿತಿಯನ್ನು ಗಮನಿಸಿದ ಆಕೆಯ ಅಕ್ಕ, ಅಂದರೆ ಆರೋಪಿಯ ಮಗಳು, ತಕ್ಷಣ ತನ್ನ ಸೋದರಸಂಬಂಧಿಯೊಂದಿಗೆ ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದಾಳೆ. ತಕ್ಷಣವೇ ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ, ಅಲ್ಲಿ ವೈದ್ಯರು ಬಾಲಕ ಅದಾಗಲೇ ಸತ್ತಿದ್ದಾನೆಂದು ತಿಳಿಸಿದ್ದಾರೆ.
ಕಾರಿನ ಟೈರ್ ಸ್ಫೋಟಗೊಂಡು ಭೀಕರ ಅಪಘಾತ – 7 ಮಂದಿ ದುರ್ಮರಣ
ಮತ್ತೊಂದೆಡೆ, ಈ ವಿಷಯ ತಿಳಿದ ನಂತರ ಪೊಲೀಸರು ಸ್ಥಳಕ್ಕೆ ತಲುಪಿ, ತಂದೆಯಿಂದ ವಿಷಪ್ರಾಶನಗೊಂಡು ಸಾವನ್ನಪ್ಪಿದ ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ತಲುಪಿಸಿದ್ದಾರೆ. ಕೊನೆಗೆ ತಂದೆ ಕಲ್ಪೇಶ್ ಗೋಹೆಲ್ ಅವರನ್ನು ಪತ್ತೆಹಚ್ಚಿ ಬಂಧಿಸಲಾಯಿತು. ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ.
Father Kills Son by Poisoning in Drinking Water
Our Whatsapp Channel is Live Now 👇