Nirmal Singh Kahlon, ನಿರ್ಮಲ್ ಸಿಂಗ್ ಕಹ್ಲಾನ್ ನಿಧನ
Nirmal Singh Kahlon: ಮಾಜಿ ಸ್ಪೀಕರ್ ಮತ್ತು ಅಕಾಲಿದಳದ ಹಿರಿಯ ನಾಯಕ ನಿರ್ಮಲ್ ಸಿಂಗ್ ಕಹ್ಲಾನ್ ನಿಧನರಾಗಿದ್ದಾರೆ
ಚಂಡೀಗಢ: ಪಂಜಾಬ್‌ನ ಮಾಜಿ ಸ್ಪೀಕರ್ ಮತ್ತು ಹಿರಿಯ ಅಕಾಲಿದಳ (ಎಸ್‌ಎಡಿ) ನಾಯಕ ನಿರ್ಮಲ್ ಸಿಂಗ್ ಕಹ್ಲಾನ್ (79) (Nirmal Singh Kahlon) ದೀರ್ಘಕಾಲದ ಅನಾರೋಗ್ಯದಿಂದ ಶನಿವಾರ ನಿಧನರಾದರು. ಪಕ್ಷದ ಹಿರಿಯ ನಾಯಕನ ನಿಧನಕ್ಕೆ ಎಸ್‌ಎಡಿ ಮುಖ್ಯಸ್ಥ ಸುಖ್‌ಬೀರ್ ಸಿಂಗ್ ಬಾದಲ್ ಸಂತಾಪ ವ್ಯಕ್ತಪಡಿಸಿದ್ದಾರೆ. ಕಹ್ಲಾನ್ ಎಲ್ಲರಿಗೂ ಸ್ಪೂರ್ತಿಯಾಗಿದ್ದು, ಅವರ ಸಾವು ಪಕ್ಷಕ್ಕೆ ನಷ್ಟವಾಗಿದೆ ಎಂದು ಹೇಳಿರುವ ಬಾದಲ್, ಮೃತ ನಾಯಕನ ಕುಟುಂಬ ಸದಸ್ಯರಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ನಿರ್ಮಲ್ ಸಿಂಗ್ ಕಹ್ಲಾನ್ ಅವರು ಈ ಹಿಂದೆ ಪಂಜಾಬ್‌ನ ಸ್ಪೀಕರ್ ಮತ್ತು ಸಚಿವರಾಗಿ ಅಮೂಲ್ಯವಾದ ಸೇವೆಗಳನ್ನು ಸಲ್ಲಿಸಿದ್ದಾರೆ. ಪಂಜಾಬ್ ಪಿಸಿಸಿ ಮುಖ್ಯಸ್ಥ ಅಮರಿಂದರ್ ಸಿಂಗ್ ರಜಾ ಅವರು ಕಹ್ಲಾನ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಕಹ್ಲಾನ್ ಅವರ ಮೃತದೇಹವನ್ನು ಭಾನುವಾರ ಗುರುದಾಸ್‌ಪುರ ಜಿಲ್ಲೆಯ ಫತೇಘರ್ ಬಳಿಯ ದಾದುಜೋಡ್ ಗ್ರಾಮದಲ್ಲಿ ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
former punjab speaker and senior sad leader nirmal singh kahlon dies
Follow us On
Google News |