ಬಿಪಿಎಲ್ ಕುಟುಂಬಕ್ಕೆ ಉಚಿತ ಗ್ಯಾಸ್ ಸಿಲಿಂಡರ್ ಹಾಗೂ ₹300 ರೂಪಾಯಿ ನೆರವು

ಬಡ ಮಹಿಳೆಯರಿಗಾಗಿ ಉಚಿತ ಎಲ್‌ಪಿಜಿ (LPG) ಸಂಪರ್ಕ ನೀಡುವ ಉಜ್ವಲ ಯೋಜನೆ 2025 ಆರಂಭವಾಗಿದೆ. ಅರ್ಹರು, ಅಗತ್ಯ ದಾಖಲೆಗಳೊಂದಿಗೆ ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಿ.

  • 18 ವರ್ಷ ಮೇಲ್ಪಟ್ಟ ಬಿಪಿಎಲ್ ಮಹಿಳೆಯರಿಗೆ ಮಾತ್ರ ಅವಕಾಶ
  • ಪ್ರತಿ ಫಲಾನುಭವಿಗೆ ₹300 ನೇರ ಹಣ ಸಹಾಯ (DBT ಮೂಲಕ)
  • ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಸಾಧ್ಯ

ಗ್ರಾಮೀಣ ಮತ್ತು ನಗರ ಬಡ ಮಹಿಳೆಯರಿಗೆ ಸುರಕ್ಷಿತ ಅಡುಗೆ ಇಂಧನವನ್ನು (clean fuel) ಒದಗಿಸಲು ಕೇಂದ್ರ ಸರ್ಕಾರವು ಉಜ್ವಲ ಯೋಜನೆ (Ujjwala Yojana) 2025 ನವೀಕೃತ ರೂಪದಲ್ಲಿ ಜಾರಿಗೆ ತಂದಿದೆ. ಈ ಮೂಲಕ ಎಲ್‌ಪಿಜಿ (LPG) ಸಂಪರ್ಕ ಪಡೆಯಲು ಬಡ ಕುಟುಂಬಗಳಿಗೆ ಮತ್ತೊಮ್ಮೆ ಅವಕಾಶ ಸಿಕ್ಕಿದೆ.

ಈ ಯೋಜನೆಯಿಂದ ಈವರೆಗೆ ಸುಮಾರು 10.33 ಕೋಟಿ ಜನರಿಗೆ ಲಾಭವಾಗಿದೆ. ಒಟ್ಟು ಎಲ್‌ಪಿಜಿ ಗ್ರಾಹಕರಲ್ಲಿ 31% ಜನರು ಈ ಯೋಜನೆಯ ಅಡಿಯಲ್ಲಿ ನೋಂದಾಯಗೊಂಡಿದ್ದಾರೆ.

ಇದನ್ನೂ ಓದಿ: ಹೆಂಡತಿ ಹೆಸರಲ್ಲಿ ಆಸ್ತಿ ಇರೋರಿಗೆ ಶಾಕಿಂಗ್ ಸುದ್ದಿ! ಹೈಕೋರ್ಟ್ ಸಂಚಲನ ತೀರ್ಪು

ಪ್ರಸ್ತುತ ಸಬ್ಸಿಡಿ ಹೊಂದಿರುವ ಸಿಲಿಂಡರ್ ಬೆಲೆ ₹550 ಮಾತ್ರವಾಗಿದೆ, ಇದರಲ್ಲಿ ₹200 ರಿಯಾಯಿತಿ ನೀಡಲಾಗುತ್ತಿದೆ. ಜೊತೆಗೆ ಸರ್ಕಾರವು ₹300 ನೇರ ಹಣ ಸಹಾಯ (Direct Benefit Transfer) ನೀಡುತ್ತಿದೆ.

ಯೋಜನೆಗೆ ಅರ್ಜಿ ಹಾಕಲು ಅರ್ಹರಾಗಿರಬೇಕಾದ ಮಹಿಳೆಯರು ಬಿಪಿಎಲ್ (Below Poverty Line) ಪಟ್ಟಿಗೆ ಸೇರಿರಬೇಕು. ಅವರು SC/ST, OBC, PMAY (ಗ್ರಾಮೀಣ), ಅಥವಾ AAY ಲಾಭಾರ್ಥಿಗಳು ಆಗಿರಬಹುದು. ಅರ್ಜಿದಾರರು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು ಮತ್ತು ಆದಾಯ ತೆರಿಗೆ ಪಾವತಿಸಬಾರದು. ಈಗಾಗಲೇ ಎಲ್‌ಪಿಜಿ ಹೊಂದಿರುವವರು ಈ ಯೋಜನೆಗೆ ಅರ್ಹರಾಗುವುದಿಲ್ಲ.

ಇದನ್ನೂ ಓದಿ: ಮದುವೆಗೆ ದುಡ್ಡು-ಬಂಗಾರ ಗಿಫ್ಟ್ ಬಂದ್ರೆ, ಅದಕ್ಕೂ ಟ್ಯಾಕ್ಸ್ ಕಟ್ಟಬೇಕಾ? ಕಾನೂನು ತಿಳಿಯಿರಿ

Gas Cylinder

ಅರ್ಜಿಗೆ ಬೇಕಾದ ದಾಖಲೆಗಳಲ್ಲಿ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರ, ಮೊಬೈಲ್ ನಂಬರ್ ಮತ್ತು ಪಾಸ್‌ಪೋರ್ಟ್ ಗಾತ್ರದ ಫೋಟೋ ಅಗತ್ಯವಿದೆ.

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ಸೈಟ್‌ಗೆ (https://www.pmuy.gov.in/) ಭೇಟಿ ನೀಡಿ. ಅಥವಾ ನಿಮ್ಮ ಹತ್ತಿರದ ಎಲ್‌ಪಿಜಿ (gas agency) ಡೀಲರ್ ಮೂಲಕ ಆಫ್ಲೈನ್ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: ಒಂದು ತಿಂಗಳು ಇಎಂಐ ಕಟ್ಟಿಲ್ಲ ಅಂದ್ರೆ ಕ್ರೆಡಿಟ್ ಸ್ಕೋರ್ ಎಷ್ಟು ಕಡಿಮೆ ಆಗುತ್ತೆ ಗೊತ್ತಾ

ಅರ್ಜಿದಾರರು ನಕಲಿ ದಾಖಲೆಗಳನ್ನು ಉಪಯೋಗಿಸಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಸರ್ಕಾರ ನೀಡಿದೆ. ನಿಜವಾದ ಫಲಾನುಭವಿಗಳು ಮಾತ್ರ ಈ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕು.

ಈ ಯೋಜನೆ (government scheme) ಬಡ ಮಹಿಳೆಯರ ಜೀವನಶೈಲಿಗೆ ಬದಲಾವಣೆಯನ್ನು ತರುತ್ತಿದೆ. ಸೂಕ್ತ ಅರ್ಹತೆ ಇದ್ದರೆ ತಕ್ಷಣವೇ ಅರ್ಜಿ ಹಾಕಿ, ಉಚಿತ ಎಲ್‌ಪಿಜಿ ಸಂಪರ್ಕವನ್ನು ಪಡೆಯಿರಿ.

Free LPG Cylinder Scheme 2025, How to Apply for PM Ujjwala Yojana

English Summary▼

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories