ಮೆಟ್ರೋದಲ್ಲಿ ಹುಡುಗಿಯರ ಜಗಳದ ವಿಡಿಯೋ ವೈರಲ್, ಚಪ್ಪಲಿಗಳು ಮತ್ತು ಬಾಟಲಿಗಳೇ ಅವರ ಆಯುಧ
ದೆಹಲಿ ಮೆಟ್ರೋ ಮೂಲಕ ಪ್ರತಿದಿನ ಲಕ್ಷಾಂತರ ಜನರು ತಮ್ಮ ಗಮ್ಯಸ್ಥಾನವನ್ನು ಕಡಿಮೆ ಸಮಯದಲ್ಲಿ ಅತ್ಯಂತ ಆರಾಮದಾಯಕ ರೀತಿಯಲ್ಲಿ ತಲುಪುತ್ತಾರೆ. ಆದರೆ ಕೆಲವು ಪ್ರಯಾಣಿಕರು ರೈಲಿನಲ್ಲಿ ಮಿತಿಗಳನ್ನು ದಾಟುತ್ತಾರೆ. ಅಂತಹದ್ದೇ ಆದ ಇಬ್ಬರು ಹುಡುಗಿಯರ ಜಗಳದ ವಿಡಿಯೋ ವೈರಲ್ ಆಗಿದೆ.
ದೆಹಲಿ ಮೆಟ್ರೋ (Delhi Metro) ಮೂಲಕ ಪ್ರತಿದಿನ ಲಕ್ಷಾಂತರ ಜನರು ತಮ್ಮ ಗಮ್ಯಸ್ಥಾನವನ್ನು ಕಡಿಮೆ ಸಮಯದಲ್ಲಿ ಅತ್ಯಂತ ಆರಾಮದಾಯಕ ರೀತಿಯಲ್ಲಿ ತಲುಪುತ್ತಾರೆ. ಆದರೆ ಕೆಲವು ಪ್ರಯಾಣಿಕರು ರೈಲಿನಲ್ಲಿ ಮಿತಿಗಳನ್ನು ದಾಟುತ್ತಾರೆ. ಅಂತಹದ್ದೇ ಆದ ಇಬ್ಬರು ಹುಡುಗಿಯರ ಜಗಳದ ವಿಡಿಯೋ ವೈರಲ್ (Viral Video) ಆಗಿದೆ.
ಇತ್ತೀಚಿನ ದಿನಗಳಲ್ಲಿ, ದೆಹಲಿ ಮೆಟ್ರೋದ ಅನೇಕ ಅಶ್ಲೀಲ ವೀಡಿಯೊಗಳು ವೈರಲ್ ಆಗಿದ್ದು, ಇದೀಗ ಇಬ್ಬರು ಹುಡುಗಿಯರು ಜಗಳವಾಡುತ್ತಿರುವ ವೀಡಿಯೊ ಕೂಡ ಬಾರೀ ವಿಚಾರಲ್ ಆಗಿದೆ.
ವೀಡಿಯೊದಲ್ಲಿ, ಇಬ್ಬರು ಹುಡುಗಿಯರು ತಮ್ಮ ಕೈಯಲ್ಲಿ ಚಪ್ಪಲಿ ಮತ್ತು ನೀರಿನ ಬಾಟಲಿಗಳೊಂದಿಗೆ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಇಬ್ಬರೂ ಕೂಡ ಒಬ್ಬರನ್ನೊಬ್ಬರು ತುಂಬಾ ನಿಂದಿಸಿದ್ದಾರೆ. ಘಟನೆಯ ವಿಡಿಯೋ ಹೆಚ್ಚು ವೈರಲ್ ಆಗುತ್ತಿದೆ.
ದೆಹಲಿ ಮೆಟ್ರೋದ ಮಹಿಳಾ ಕೋಚ್‌ನಲ್ಲಿ ರೆಕಾರ್ಡ್ ಮಾಡಲಾದ ವೀಡಿಯೊವನ್ನು ಟ್ವಿಟರ್ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ, ಅವರು “ದೆಹಲಿ ಮೆಟ್ರೋ ಯುದ್ಧಭೂಮಿಯಾಗಿದೆ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ, ಆದರೆ, ಘಟನೆ ಯಾವಾಗ ಮತ್ತು ಯಾವ ಮಾರ್ಗದಲ್ಲಿ ನಡೆಯಿತು ಎಂಬುದು ಸ್ಪಷ್ಟವಾಗಿಲ್ಲ.
ಮೆಟ್ರೋದಲ್ಲಿ ಒಬ್ಬ ಹುಡುಗಿ ತನ್ನ ಕೈಯಲ್ಲಿ ಚಪ್ಪಲಿಯನ್ನು ತೆಗೆದುಕೊಳ್ಳುತ್ತಾಳೆ ಮತ್ತು ಇನ್ನೊಬ್ಬಳು ಸ್ಟೀಲ್ ಬಾಟಲಿಯಿಂದ ದಾಳಿ ಮಾಡಲು ಸಿದ್ಧಳಾಗುತ್ತಾಳೆ. ಇಬ್ಬರೂ ಪರಸ್ಪರ ಬೈಗುಳ ಮತ್ತು ನಿಂದಿಸುತ್ತಾರೆ.
Delhi Metro has become a battleground 😂 pic.twitter.com/uWVge6sl68
— Deepika Narayan Bhardwaj (@DeepikaBhardwaj) June 4, 2023
ಈ ಸಮಯದಲ್ಲಿ, ಇತರ ಮಹಿಳೆಯರು ಕುಳಿತು ಇಬ್ಬರನ್ನೂ ನೋಡುತ್ತಿದ್ದಾರೆ. ಕೆಲವರು ಇಬ್ಬರನ್ನೂ ತಡೆಯಲು ಪ್ರಯತ್ನಿಸಿದರು, ಆದರೆ ಅವರು ಜಗಳವಾಡುತ್ತಲೇ ಇದ್ದರು. ಈ ವೇಳೆ ಬಾಲಕಿಯೊಬ್ಬಳು ಮೆಟ್ರೋ ಚಾಲಕನಿಗೆ ದೂರು ನೀಡುತ್ತಿರುವ ದೃಶ್ಯವೂ ಕಂಡು ಬಂದಿದೆ.
ಕೆಲವು ಪ್ರಯಾಣಿಕರಿಂದ ಅಶಿಸ್ತಿನ ವರ್ತನೆಯ ದೂರುಗಳ ಹಿನ್ನೆಲೆಯಲ್ಲಿ ದೆಹಲಿ ಮೆಟ್ರೋ ಇತ್ತೀಚೆಗೆ ಬೋಗಿಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲು ನಿರ್ಧರಿಸಿದೆ.
ಈ ಹಿಂದೆ ಮೆಟ್ರೋದಲ್ಲಿ ಹಸ್ತಮೈಥುನ, ಮೌಖಿಕ ಲೈಂಗಿಕತೆ ಮತ್ತು ನೃತ್ಯದಂತಹ ಆಕ್ಷೇಪಾರ್ಹ ವೀಡಿಯೊಗಳು ಕಾಣಿಸಿಕೊಂಡ ನಂತರ DMRC ಕೆಲವು ಕ್ರಮಗಳನ್ನು ತೆಗೆದುಕೊಂಡಿದೆ.
ಪೊಲೀಸರು ಮತ್ತು ಸಿಐಎಸ್‌ಎಫ್ ಸಿಬ್ಬಂದಿಗೆ ಮೆಟ್ರೋ ಒಳಗೆ ಗಸ್ತು ತಿರುಗುವಂತೆ ಸೂಚಿಸಲಾಗಿದೆ. ಡಿಎಂಆರ್‌ಸಿ ಅಧಿಕಾರಿಗಳ ಪ್ರಕಾರ, ಫ್ಲೈಯಿಂಗ್ ಸ್ಕ್ವಾಡ್‌ಗೆ ನಿಗಾ ಇಡಲು ಸೂಚಿಸಲಾಗಿದೆ. ಶೀಘ್ರದಲ್ಲೇ ಮೆಟ್ರೋದಲ್ಲಿ ಸಾಮಾನ್ಯ ಉಡುಪಿನಲ್ಲಿ ಪೊಲೀಸರನ್ನು ನಿಯೋಜಿಸಲಾಗುವುದು.
girls fight in delhi metro ladies coach video Goes viral