India News

ರೈತರಿಗೆ ಆರ್ಥಿಕ ನೆರವು! ರೈತರಿಗಾಗಿ 5 ಹೊಸ ಯೋಜನೆಗಳನ್ನು ಜಾರಿಗೆ ತಂದ ಸರ್ಕಾರ, ಇಂದೇ ಅಪ್ಲೈ ಮಾಡಿ

ನಮ್ಮ ದೇಶದಲ್ಲಿ ಕೃಷಿಕರು ಹೆಚ್ಚಾಗಿ ಇರುವುದರಿಂದ ಅವರಿಗೆ ಸಹಾಯ ಆಗುವ ಹಾಗೆ, ಹಲವು ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಆಜಾದಿ ಕೆ ಅಮೃತ್ ಮಹೋತ್ಸವ್ ಅಂಗವಾಗಿ ರೈತರಿಗಾಗಿ 5 ವಿಶೇಷ ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಯೋಜನೆಗಳಿಂದ ಅವರಿಗೆ ಏನೆಲ್ಲಾ ವಿಶೇಷ ಪ್ರಯೋಜನಗಳು ಸಿಗಲಿದೆ ಹಾಗೂ ಇನ್ನಿತರ ಮಾಹಿತಿಗಳನ್ನು ತಿಳಿಸಿಕೊಡುತ್ತೇವೆ ನೋಡಿ..

1. ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ :- ಇದು ಸ್ವಂತ ಭೂಮಿ ಹೊಂದಿರುವ ಎಲ್ಲಾ ರೈತರಿಗಾಗಿ ಜಾರಿಗೆ ತಂದಿರುವ ಯೋಜನೆ ಆಗಿದೆ, ಈ ಯೋಜನೆಯ ಮೂಲಕ ಕೇಂದ್ರ ಸರ್ಕಾರವು ಎಲ್ಲಾ ರೈತರಿಗೆ ಆರ್ಥಿಕವಾಗಿ ನೆರವು ನೀಡಲಿದೆ.

PM Kisan Scheme

ವ್ಯವಸಾಯಕ್ಕೆ ಸಂಬಂಧಪಟ್ಟ ಹಾಗೆ ಎಲ್ಲಾ ಕೆಲಸಗಳನ್ನು ಮಾಡಿಕೊಳ್ಳಲು ಆರ್ಥಿಕ ಸಹಾಯ ರೈತರಿಗೆ ಬೇಕು, ಹಾಗಾಗಿ ಸರ್ಕಾರವು ರೈತರಿಗೆ ಸಹಾಯ ಮಾಡಲು ಈ ಯೋಜನೆಯನ್ನು ತಂದಿದ್ದು, ಅರ್ಹತೆ ಹೊಂದುವ ಫಲಾನುಭವಿಗಳಿಗೆ ವಾರ್ಷಿಕವಾಗಿ ₹6000 ರೂಪಾಯಿ ಆರ್ಥಿಕ ಸಹಾಯ ಸಿಗುತ್ತದೆ. ಈ 6000 3 ಕಂತುಗಳಲ್ಲಿ ರೈತರಿಗೆ ಲಭ್ಯವಾಗುತ್ತದೆ. ಈ ಹಣವು ರೈತರ ಬ್ಯಾಂಕ್ ಅಕೌಂಟ್ ಗೆ ನೇರವಾಗಿ ತಲುಪುತ್ತದೆ.

ಈ ಚಾನ್ಸ್ ಬಿಟ್ರೆ ಮತ್ತೆ ಸಿಗೋಲ್ಲ! ಚಿನ್ನದ ಬೆಲೆ 1500 ರೂಪಾಯಿ ಇಳಿಕೆ, ಚಿನ್ನಾಭರಣ ಪ್ರಿಯರಿಗೆ ಬಿಗ್ ರಿಲೀಫ್

2. ಕೃಷಿ ಮೂಲ ಸೌಕರ್ಯ ನಿಧಿ :- ಕೃಷಿ ಕೆಲಸದ ಮೂಲ ಸೌಕರ್ಯಗಳಿಗಾಗಿ ಸರ್ಕಾರವು ಈ ಕೃಷಿ ಮೂಲ ಸೌಕರ್ಯ ನಿಧಿಯನ್ನು ಪರಿಚಯಿಸಿತು. ಇದಕ್ಕಾಗಿ ಆತ್ಮನಿರ್ಭರ್ ಯೋಜನೆಯನ್ನು ಶುರು ಮಾಡಿ, ಇದರಲ್ಲಿ 1 ಲಕ್ಷ ಕೋಟಿ ಹಣವನ್ನು ಅಗ್ರಿ ಇನ್ಫ್ರಾ ಫಂಡ್ ಆಗಿ ಲಾಂಚ್ ಮಾಡಿದೆ. ಈ ಯೋಜನೆಯು ಸುಗ್ಗಿಯ ನಂತರ ಕೆಲಸಗಳ ಮೂಲ ಸೌಕರ್ಯವನ್ನು ಬೆಂಬಲಿಸುವ ಸಲುವಾಗಿ ಜಾರಿಗೆ ತರಲಾಗಿದೆ..

ಇದರಲ್ಲಿ ದೀರ್ಘಾವಧಿ ಸಮಯಕ್ಕೆ ಹಣಕಾಸಿನ ವಿಷಯದಲ್ಲಿ ಸಾಲ ಕೊಡಲಾಗುತ್ತದೆ. ಇದರಲ್ಲಿ ಹೂಡಿಕೆ ಮಾಡುವುದಕ್ಕೆ ಜನರಿಗೂ ಪ್ರೋತ್ಸಾಹ ಕೊಡುವ ಸಲುವಾಗಿ ಬಡ್ಡಿ ಸಬ್ವೆನ್ಷನ್ ಮತ್ತು ಕ್ರೆಡಿಟ್ ಗ್ಯಾರಂಟಿಯನ್ನು ಕೊಡಲಾಗುತ್ತಿದೆ.

Farmers Scheme3. 10,000 FPO (ರೈತ ಉತ್ಪಾದಕರ ಸಂಘ) ಆರಂಭ ಮತ್ತು ಪ್ರಚಾರ :- ಭಾರತದ ಎಲ್ಲಾ ರೈತರಿಗೆ ಸಹಾಯ ಆಗಲಿ ಎಂದು 10,000 ರೈತ ಉತ್ಪಾದಕ ಸಂಘಗಳ ರಚನೆ ಮಾಡಬೇಕು ಎಂದು 2020ರಲ್ಲಿ ಸರ್ಕಾರ ನಿರ್ಧಾರ ಮಾಡಿತು. ಇದಕ್ಕಾಗಿ ಕೇಂದ್ರ ವಲಯ ಯೋಜನೆಯನ್ನು ಶುರು ಮಾಡಿತು.

ಕೇವಲ 4.69 ಲಕ್ಷಕ್ಕೆ ಹೊಸ ಕಾರು ನಿಮ್ಮದಾಗಿಸಿಕೊಳ್ಳಿ, 55 ಸಾವಿರ ರಿಯಾಯಿತಿ! ಸೀಮಿತ ಅವಧಿಗೆ ಮಾತ್ರ

ಇಂಪ್ಲಿಮೆಂಟ್ ಏಜೆನ್ಸಿಗಳು ಈ ಸಂಘಗಳನ್ನು ರಚಿಸುವುದು ಮತ್ತು ಅದರ ಪ್ರಚಾರ ಮಾಡುವ ಕೆಲಸಗಳನ್ನು ಮಾಡುತ್ತಿದೆ.. ಈ ವ್ಯಾಪಾರವು ಕ್ಲಸ್ಟರ್ ಆಧಾರಿತವಾಗಿದ್ದು, ಈ ಸಂಸ್ಥೆಗಳ ಜೊತೆ ಸೇರಿ 5 ವರ್ಷಗಳವರೆಗು FPO ಗಳಿಗೆ ಕೆಲಸದ ಬಗ್ಗೆ ಮಾರ್ಗದರ್ಶನವನ್ನು ಕೊಡಲಾಗುತ್ತದೆ. FPO ಗಳು ಹೇಗೆ ವ್ಯಾಪಾರ ಮಾಡಬೇಕು, ಕೆಲಸ ಹೇಗೆ ಮಾಡಬೇಕು, ಮಾರುಕಟ್ಟೆಯಲ್ಲಿ ಅವಕಾಶ, ಮಾರುಕಟ್ಟೆಯ ಸಂಪರ್ಕ ಇದೆಲ್ಲವನ್ನು ತಿಳಿಸಿಕೊಡುತ್ತದೆ.

4. ರಾಷ್ಟ್ರೀಯ ಜೇನು ಸಾಕಣೆ ಮತ್ತು ಜೇನು ಮಿಷನ್ :- ದೇಶದಲ್ಲಿ ಜೇನು ಸಾಕಣೆ ಮಾಡುವವರಿಗೆ ಆರ್ಥಿಕವಾಗಿ ಸಹಾಯ ಮಾಡುವುದಕ್ಕೆ ಕೇಂದ್ರ ಸರ್ಕಾರವು ಈ ಹೊಸ ಯೋಜನೆಯನ್ನು ಜಾರಿಗೆ ತಂದಿತು. ಆತ್ಮನಿರ್ಭರ್ ಭಾರತ್ ಯೋಜನೆಯ ಅಡಿಯಲ್ಲಿ ರಾಷ್ಟ್ರೀಯ ಜೇನು ಸಾಕಣೆ ಮತ್ತು ಜೇನು ಮಿಷನ್ ಎನ್ನುವ ಈ ಯೋಜನೆಯನ್ನು ಜಾರಿಗೆ ತಂದಿದೆ.

ಈ ಯೋಜನೆಯ ಮೂಲ ಉದ್ದೇಶ, ವಿಜ್ಞಾನದ ಸಹಾಯದಿಂದ ಜೇನು ಸಾಕಣೆ ಮಾಡುವುದು ಮತ್ತು ಅದರ ಬಗ್ಗೆ ಜನರಿಗೆ ತಿಳಿಸುವುದಾಗಿದೆ. ಈ ಅಭಿವೃದ್ಧಿಯಿಂದ ಸಿಹಿ ಕ್ರಾಂತಿ ಮಾಡಲಾಗುತ್ತದೆ.

ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಮಾತ್ರ ಈ ಸಿಹಿ ಸುದ್ದಿ! ಈ ವಿಶೇಷ ಯೋಜನೆಗಳ ಮೇಲೆ ಬ್ಯಾಂಕ್ ನೀಡುತ್ತಿದೆ ಹೆಚ್ಚಿನ ಬಡ್ಡಿ ದರ

5. ರಾಷ್ಟ್ರೀಯ ಮಿಷನ್ ಆನ್ ಎಡಿಬಲ್ ಆಯಿಲ್- ಎಡಿಬಲ್ ಪಾಮ್ (NMEO-OP) :- ಅಡುಗೆ ಎಣ್ಣೆಗಳ ತಯಾರಿಕೆಯಲ್ಲಿ ಜನರು ಸ್ವಾವಲಂಬಿಯಾಗಿ ಇರಬೇಕು..ಈ ಕೃಷಿಯನ್ನು ಜನರು ಹೆಚ್ಚು ಮಾಡಬೇಕು ಎಂದು ಕೇಂದ್ರ ಸರ್ಕಾರವು ರಾಷ್ಟ್ರೀಯ ಮಿಷನ್ ಅನ್ ಎಡಿಬಲ್ ಆಯಿಲ್ ಯೋಜನೆಯನ್ನು ಜಾರಿಗೆ ತಂದಿದೆ..

ಈಶಾನ್ಯಕ್ಕೆ ಬರುವ ರಾಜ್ಯಗಳು, ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿ ಜಾರಿಗೆ ತರಲಾಗಿದೆ. 2021-22 ರಿಂದ 2025ರ ಅವಧಿಯಲ್ಲಿ ರಾಷ್ಟ್ರದ ಈಶಾನ್ಯ ರಾಜ್ಯಗಳಲ್ಲಿ 3.28 ಲಕ್ಷ ಹೆಕ್ಟರ್ ಹಾಗೂ ರಾಷ್ಟ್ರದ ಬೇರೆ ಪ್ರದೇಶಗಳಲ್ಲಿ 3.22 ಲಕ್ಷ ಹೆಕ್ಟರ್ ಜಾಗದಲ್ಲಿ ಆಯಿಲ್ ಪಾಮ್ ಕೃಷಿ ಮಾಡಲು ಉತ್ತೇಜನ ಕೊಡಲಾಗುತ್ತಿದೆ. ಇದನ್ನು 6.5ಲಕ್ಷ ಹೆಕ್ಟರ್ ಗಳಿಗೆ ತಲುಪುವ ಹಾಗೆ ಮಾಡುವುದು ಸರ್ಕಾರದ ಉದ್ದೇಶ ಆಗಿದೆ..

Government has implemented 5 new schemes for farmers

Our Whatsapp Channel is Live Now 👇

Whatsapp Channel

Related Stories