ಬಾಲಕಿಯ ಕೈ-ಕಾಲು ಕಟ್ಟಿ ಕ್ರೂರ ಶಿಕ್ಷೆ.. Viral Video

Viral Video: ಬಾಲಕಿಗೆ ಆಕೆಯ ಪೋಷಕರು ಹೀನಾಯ ಶಿಕ್ಷೆ ನೀಡಿದ್ದಾರೆ. ಆಕೆಯ ಕಾಲುಗಳು ಮತ್ತು ಕೈಗಳನ್ನು ಕಟ್ಟಿ ಸುಡುವ ಬಿಸಿಲಿನಲ್ಲಿ ಮನೆಯ ಛಾವಣಿ ಮೇಲೆ ಇರಿಸಲಾಗಿತ್ತು. ಬಿಸಿಲನ್ನು ಸಹಿಸಲಾಗದೆ ಪುಟ್ಟ ಬಾಲಕಿ ಕಿರುಚಾಡುತ್ತಿರುವುದು ವಿಡಿಯೋ ಮೂಲಕ ನೋಡಬಹುದು. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಘಟನೆ ನಡೆದಿದೆ.

ಇದನ್ನು ಸ್ಥಳೀಯ ವ್ಯಕ್ತಿಯೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಜೂನ್ 2 ರಂದು ಕರವಾಲ್ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಅವರು ಹೇಳಿದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನೆಟಿಜನ್‌ಗಳು ಕಿಡಿಕಾರಿದ್ದು, ವಿಡಿಯೋವನ್ನು ದೆಹಲಿ ಪೊಲೀಸರ ಗಮನಕ್ಕೆ ತಂದಿದ್ದಾರೆ.

ಇದರೊಂದಿಗೆ ದೆಹಲಿ ಪೊಲೀಸರು ವಿಡಿಯೋದಲ್ಲಿ ಕಂಡು ಬಂದ ಬಾಲಕಿಯ ಪೋಷಕರು ಮತ್ತು ಶಿಕ್ಷಿಸಿದ ಪ್ರದೇಶವನ್ನು ಗುರುತಿಸಲು ನಾನಾ ಪ್ರದೇಶಗಳನ್ನು ಹುಡುಕಾಡಿದ್ದಾರೆ. ಕರವಾಲ್ ನಗರ ಪ್ರದೇಶದಲ್ಲಿ ನಡೆದ ಪ್ರಾಥಮಿಕ ವಿಚಾರಣೆಯಿಂದ ಈ ಪ್ರದೇಶದಲ್ಲಿ ಯಾವುದೇ ರೀತಿಯ ಘಟನೆ ನಡೆದಿಲ್ಲ ಎಂದು ತಿಳಿದುಬಂದಿದೆ.

ನಂತರ ವಿಶೇಷ ಪೊಲೀಸ್ ತಂಡಗಳನ್ನು ಕ್ಷೇತ್ರದಲ್ಲಿ ನಿಯೋಜಿಸಲಾಗಿತ್ತು. ಅಂತಿಮವಾಗಿ ಖಜೂರಿ ಖಾಸ್ ಪ್ರದೇಶದಲ್ಲಿ ಒಂದು ಮನೆ ಕಂಡುಬಂದಿದೆ. ಈ ಬಗ್ಗೆ ಬಾಲಕಿಯ ಪೋಷಕರನ್ನು ವಿಚಾರಿಸಿದ್ದಾರೆ. ಆದರೆ, ಪೋಷಕರು ಈ ಬಗ್ಗೆ ಹೇಳಿಕೆ ನೀಡಿ ಶಾಲೆಯ ಹೋಮ್ ವರ್ಕ್ ಮಾಡಲಿಲ್ಲ ಎಂಬ ಕೋಪಕ್ಕೆ ಕೇವಲ 5-7 ನಿಮಿಷಗಳ ಕಾಲ ಶಿಕ್ಷೆ ವಿಧಿಸಲಾಯಿತು ಎಂದು ಬಾಲಕಿಯ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ.

ಏತನ್ಮಧ್ಯೆ ಬಾಲಕಿ ಮತ್ತು ಆಕೆಯ ಕುಟುಂಬದವರು ಗುರುತಿಸಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಮಗುವಿನ ಪೋಷಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಟ್ವಿಟರ್ ನಲ್ಲಿ ತಿಳಿಸಿದ್ದಾರೆ.

https://twitter.com/AdityaPaul1999/status/1534499448406953984?ref_src=twsrc%5Etfw%7Ctwcamp%5Etweetembed%7Ctwterm%5E1534499448406953984%7Ctwgr%5E%7Ctwcon%5Es1_&ref_url=https%3A%2F%2Fpublish.twitter.com%2F%3Fquery%3Dhttps3A2F2Ftwitter.com2FAdityaPaul19992Fstatus2F1534499448406953984widget%3DTweet

Hands Legs Tied In Punishment Child Writhes On Hot Roof In Delhi

======== Story End ========

Related Stories

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ