ಮಧ್ಯಪ್ರದೇಶದಲ್ಲಿ ಭಾರೀ ಮಳೆ, ಮನೆಗೆ ನುಗ್ಗಿದ ಮೊಸಳೆ

ಮಳೆ ಮತ್ತು ಪ್ರವಾಹ ಮಧ್ಯಪ್ರದೇಶವನ್ನು ಮುಳುಗಿಸುತ್ತಿದೆ. ಪ್ರವಾಹದಿಂದಾಗಿ ನದಿಗಳೆಲ್ಲ ತುಂಬಿ ಹರಿಯುತ್ತಿವೆ.

ಭೋಪಾಲ್: ಮಳೆ ಮತ್ತು ಪ್ರವಾಹ ಮಧ್ಯಪ್ರದೇಶವನ್ನು ಮುಳುಗಿಸುತ್ತಿದೆ. ಪ್ರವಾಹದಿಂದಾಗಿ ನದಿಗಳೆಲ್ಲ ತುಂಬಿ ಹರಿಯುತ್ತಿವೆ. ಶಿವಪುರಿ ಜಿಲ್ಲೆಯಲ್ಲಿ ಹಳ್ಳಕೊಳ್ಳ, ತಗ್ಗು, ನದಿಗಳ ಪ್ರವಾಹದಿಂದಾಗಿ ಮೊಸಳೆಗಳು ಮನೆಗಳಿಗೆ ನುಗ್ಗುತ್ತಿವೆ. ಇದರಿಂದ ಸ್ಥಳೀಯರು ಭಯಭೀತರಾಗಿದ್ದಾರೆ.

ಮೊಸಳೆಗಳು ಮನೆಗಳ ನಡುವೆ ಬಂದಿದ್ದರಿಂದ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಸ್ ನಿಲ್ದಾಣದಲ್ಲಿ ಮೊಸಳೆ ಕಾಣಿಸಿಕೊಂಡಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಬಳಿಕ ನಿವಾಸಿಗಳು ಭಯಭೀತರಾಗಿದ್ದರು.

ಈ ಮೊಸಳೆಗಳನ್ನು ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳೀಯ ಮಾಧವ್ ರಾಷ್ಟ್ರೀಯ ಉದ್ಯಾನವನದಿಂದ ಬಂದಿದ್ದರು. ಗಂಟೆಗಟ್ಟಲೆ ಕೆಲಸ ಮಾಡಿ 8 ಅಡಿ ಉದ್ದದ ಮೊಸಳೆಯನ್ನು ಸೆರೆ ಹಿಡಿದಿದ್ದಾರೆ.

Heavy rains in Madhya Pradesh Crocodile entered the house