ಮಟನ್ ಸಾಂಬಾರ್ ಮಾಡಿಲ್ಲ ಅಂತ ಪತ್ನಿಯನ್ನು ಥಳಿಸಿ ಕೊಂದ ಪತಿ
ಕೇವಲ ಮಟನ್ ಸಾಂಬಾರ್ ವಿಷಯಕ್ಕೆ ದಂಪತಿಗಳ ನಡುವಿನ ಭೀಕರ ಜಗಳ ಕೊನೆಗೆ ಪತ್ನಿಯ ಸಾವಿನೊಂದಿಗೆ ಅಂತ್ಯಗೊಂಡಿದೆ. ಘಟನೆ ಬಳಿಕ ಪತಿಯನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸಿದ್ದಾರೆ.
- ಮಟನ್ ಸಾಂಬಾರ್ ವಿಷಯಕ್ಕೆ ದಂಪತಿಗಳ ನಡುವಿನ ಭೀಕರ ಘರ್ಷಣೆ
- ಪತ್ನಿಯನ್ನು ಥಳಿಸಿ ಕೊಂದ ಆರೋಪಿ ಪತಿ ಬಂಧನ
- ಮಹಬೂಬಾಬಾದ್ ಜಿಲ್ಲೆಯಲ್ಲಿ ನಡೆದ ಆಘಾತಕಾರಿ ಘಟನೆ
ತೆಲಂಗಾಣ (Telangana): ಮನೆಯಲ್ಲಿ ಮಟನ್ ಸಾಂಬಾರ್ (Mutton Curry) ವಿಷಯಕ್ಕೆ ಆರಂಭವಾದ ಜಗಳ, ಕೊನೆಗೆ ಪತ್ನಿಯ ಪ್ರಾಣವನ್ನೇ ಕಸಿದುಕೊಂಡ ದಾರುಣ ಘಟನೆ ಮಹಬೂಬಾಬಾದ್ ಜಿಲ್ಲೆಯ ಸಿರೋಲ್ (Sirol) ತಾಲ್ಲೂಕಿನ ಮಂಜಾ ತಾಂಡಾ (Manja Tanda) ಗ್ರಾಮದಲ್ಲಿ ನಡೆದಿದೆ.
ಪತಿ ಮಾಲೋತ್ ಬಾಲು (Maloth Balu) ಪತ್ನಿ ಕಲಾವತಿ (35) ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ.
ಇದನ್ನೂ ಓದಿ: ಲವ್ ಬ್ರೇಕ್ ಅಪ್, ಯುವತಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪಾಗಲ್ ಪ್ರೇಮಿ
ಮಟನ್ ಸಾಂಬಾರ್ ವಿಷಯಕ್ಕೆ ಹತ್ಯೆಯಾದ ಪತ್ನಿ
ಮಾಲೋತ್ ಬಾಲು ಹಾಗೂ ಕಲಾವತಿ ಎಂಬ ದಂಪತಿಗಳು ಕೃಷಿ ಕೆಲಸ ಮಾಡುತ್ತಾ ಬದುಕುತ್ತಿದ್ದ ದಂಪತಿಯಾಗಿದ್ದರು. ದಿನವೂ ಸಣ್ಣಗೆ ಜಗಳವಾಡುತ್ತಿದ್ದ ಈ ದಂಪತಿ, ಆ ದಿನ ಗಂಭೀರ ಜಗಳ ಮಾಡಿಕೊಂಡಿದ್ದರು. ಆ ದಿನ, ಬಾಲು ಮನೆಗೆ ಬಂದು ಪತ್ನಿಗೆ ಮಟನ್ (Mutton) ಸಾಂಬಾರ್ ಏಕೆ ಮಾಡಿಲ್ಲ ಅಂತ ಪ್ರಶ್ನಿಸಿದ್ದ. ಇದರಿಂದ ಜಗಳ ಆರಂಭವಾಗಿ, ಮಾತಿಗೆ ಮಾತು ಬೆಳೆದು ದೊಡ್ಡ ಕಲಹಕ್ಕೆ ತಿರುಗಿತು.
ಕೋಪದಲ್ಲಿ ಪತ್ನಿಯನ್ನು ಥಳಿಸಿ ಹತ್ಯೆ ಮಾಡಿದ ಪತಿ
ಜಗಳ ತೀವ್ರಗೊಂಡ ಕಾರಣ, ಆವೇಶಕ್ಕೊಳಗಾದ ಬಾಲು, ತನ್ನ ಪತ್ನಿ ಕಲಾವತಿಯ ಮೇಲೆ ಹಲ್ಲೆ ನಡೆಸಿದ. ಈ ವೇಳೆ ಪತ್ನಿ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಈ ದೃಶ್ಯ ನೋಡಿದ ಆಕೆ ತಾಯಿ ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಾಲುವನ್ನು ಬಂಧಿಸಿದ್ದಾರೆ.
ಈ ಘಟನೆ ಕುರಿತು ಕಲಾವತಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಬಾಲುವು ಆಕೆಯನ್ನು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಹೊಡೆದು ಕೊಂದಿದ್ದಾನೆ ಎಂದು ಆರೋಪಿಸಿದ್ದಾರೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಪತ್ನಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಹಬೂಬಾಬಾದ್ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ.
Husband Kills Wife Over Mutton Curry
Our Whatsapp Channel is Live Now 👇