ಬ್ಯೂಟಿಪಾರ್ಲರ್‌ಗೆ ಹೋಗುತ್ತಿದ್ದ ಪತ್ನಿಯನ್ನು ತಡೆದ ಪತಿ, ಕೋಪ ತಾಳಲಾರದೆ ಆಕೆ ಮಾಡಿದ್ದೇನು ಗೊತ್ತೇ?
ಪತಿ ಬ್ಯೂಟಿ ಪಾರ್ಲರ್‌ಗೆ ಹೋಗಲು ನಿರಾಕರಿಸಿದ ಕಾರಣಕ್ಕೆ 34 ವರ್ಷದ ಮಹಿಳೆಯೊಬ್ಬರು ಇಂದೋರ್‌ನಲ್ಲಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ.
ಪತಿ ಬ್ಯೂಟಿ ಪಾರ್ಲರ್‌ಗೆ (Beauty Parlour) ಹೋಗಲು ನಿರಾಕರಿಸಿದ ಕಾರಣಕ್ಕೆ 34 ವರ್ಷದ ಮಹಿಳೆಯೊಬ್ಬರು ಇಂದೋರ್‌ನಲ್ಲಿ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಮಧ್ಯಪ್ರದೇಶದ ಇಂದೋರ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಅಚ್ಚರಿಯ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೃತ ಮಹಿಳೆಯನ್ನು ರೀನಾ ಯಾದವ್ ಎಂದು ಗುರುತಿಸಲಾಗಿದೆ. ನಗರದ ಏರೋಡ್ರೋಮ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ಈ ಘಟನೆ ನಡೆದಿದೆ. ತನಿಖಾಧಿಕಾರಿ ಉಮಾ ಶಂಕರ್ ಯಾದವ್ ಮಾತನಾಡಿ, ಮಹಿಳೆಯು ಬಲರಾಮ್ ಯಾದವ್ ಅವರನ್ನು 15 ವರ್ಷಗಳ ಹಿಂದೆ ಮದುವೆಯಾಗಿದ್ದಳು.
ಗುರುವಾರ ರೀನಾ ತನ್ನ ಪತಿ ಬಲರಾಮ್ ಅವರನ್ನು ಬ್ಯೂಟಿ ಪಾರ್ಲರ್‌ಗೆ ಹೋಗಿ ಬರುವುದಾಗಿ ಕೇಳಿದ್ದಾಳೆ, ಆದರೆ ಆತ ನಿರಾಕರಿಸಿದ್ದಾನೆ. “ಇದಾದ ನಂತರ, ರೀನಾ ಸೀಲಿಂಗ್ ಫ್ಯಾನ್‌ನ ಸಹಾಯದಿಂದ ನೇಣು ಬಿಗಿದುಕೊಂಡು ತನ್ನ ಜೀವನವನ್ನು ಕೊನೆಗೊಳಿಸಿಕೊಂಡಿದ್ದಾಳೆ. ಬಲರಾಮ್ ಮನೆಗೆ ಬಂದಾಗ, ರೀನಾ ನೇಣು ಬಿಗಿದುಕೊಂಡಿರುವುದನ್ನು ಕಂಡು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ” ಎಂದು ಅಧಿಕಾರಿ ಹೇಳಿದರು.
ಮಾಹಿತಿ ಬಂದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಮೃತಳ ಪತಿ ಮಾತನಾಡಿ, ಕೇವಲ ಇಂತಹ ಚಿಕ್ಕ ವಿಷಯಕ್ಕೆ ಈ ದುಡುಕಿನ ನಿರ್ಧಾರ ತೆಗೆದುಕೊಳ್ಳುತ್ತಾಳೆ ಎಂದುಕೊಂಡಿರಲಿಲ್ಲ ಎಂದು ಹೇಳಿದ್ದಾರೆ.
husband stopped his wife going to the beauty parlour, Do You Know What She Did
Note: ಯಾವುದೇ ಬಿಕ್ಕಟ್ಟು, ಆತಂಕ, ಖಿನ್ನತೆ ವೇಳೆ ದುಡುಕಿನ ನಿರ್ಧಾರಕ್ಕೆ ಬರಬೇಡಿ, ಕೌಟುಂಬಿಕ ಹಿಂಸೆ, ಲೈಂಗಿಕ ನಿಂದನೆ ಮತ್ತು ಹೆಚ್ಚಿನವುಗಳಿಗೆ ಜಾಗತಿಕ ಬೆಂಬಲ ಲಭ್ಯವಿದ್ದು.. ಯಾವುದೇ ಸಹಾಯ ಸಲಹೆಗಳಿಗಾಗಿ ಈ ಉಚಿತ ದೂರವಾಣಿ ಸಂಪರ್ಕಿಸಿ : 9152987821
Follow us On
Google News |